Neer Dose Karnataka
Take a fresh look at your lifestyle.

ಅದ್ದೂರಿಯಾಗಿ ನಡೆದ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿನ ಮಗುವಿನ ನಾಮಕರಣ, ಮಗುವಿನ ಹೆಸರಿನ ಜೊತೆ ಯಾರ ಹೆಸರು ಸೇರಿಸಿದ್ದಾರೆ ಗೊತ್ತೇ??

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಯಲ್ಲಿ ನಿನ್ನೆ ಬಹಳ ಸಂಭ್ರಮ ಮನೆಮಾಡಿತ್ತು, ಯಾಕೆಂದರೆ ನಿನ್ನೆ, ನಿಖಿಲ್ಮತ್ತು ರೇವತಿ ದಂಪತಿಯ ಮುದ್ದು ಮಗುವಿನ ನಾಮಕರಣ. ಇದು ಗೌಡರ ಇಡೀ ಕುಟುಂಬಕ್ಕೆ ಬಹಳ ಸಂತೋಷ ಹಾಗೂ ಸಂಭ್ರಮದ ದಿನ. ನಿನ್ನೆ ಹಬ್ಬದ ಹಾಗೆ ಇತ್ತು ಎಂದರೆ ತಪ್ಪಾಗುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಅವರ ಮುದ್ದಿನ ಮಗುವಿಗೆ 9 ತಿಂಗಳು ತುಂಬಿದ ಬಳಿಕ, ಮಗುವಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಮಗುವಿಗೆ ವಿಶಿಷ್ಟವಾದ ಹೆಸರನ್ನು ಸಹ ಇಟ್ಟಿದ್ದಾರೆ.

ನಿಖಿಲ್ ಮತ್ತು ರೇವತಿ ಅವರ ಮದುವೆ, 2020ರ ಏಪ್ರಿಲ್ 18ರಂದು ರಾಮನಗರದಲ್ಲಿ ಕುಟುಂಬದವರ ಸಮ್ಮುಖದಲ್ಲಿ ನಡೆಯಿತು. ಈ ಜೋಡಿ ಬಹಳ ಅನ್ಯೋನ್ಯವಾಗಿ ಸಂತೋಷವಾಗಿದ್ದರು.ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ, ರೇವತಿ ಅವರು ಮುದ್ದಿನ ಮಗುವಿಗೆ ಜನ್ಮ ನೀಡಿದರು.ಮಗು ಹುಟ್ಟಿದ ಬಳಿಕ ಮಾಧ್ಯಮದ ಮಾತನಾಡಿದ್ದ ನಿಖಿಲ್ ಅವರು, ತಮ್ಮ ಮಗ ತಾವೆಲ್ಲರೂ ಬೆಳೆದ ಹಾಗೆ ಸಾಮಾನ್ಯರ ಹಾಗೆ ಬೆಳೆಯಬೇಕು, ನೇಮ್ ಫೇಮ್ ಇರಬಾರದು ಎಂದಿದ್ದರು. ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಮಗುವಿನ ಫೋಟೋ ಶೇರ್ ಮಾಡುವುದಿಲ್ಲ ಎಂದು ಸಹ ಹೇಳಿದ್ದರು. ನಿನ್ನೆ ನಾಮಕರಣದ ದಿನ ಮಗುವನ್ನು ಎಲ್ಲರು ನೋಡಿದ್ದಾರೆ.

ಬೆಂಗಳೂರಿನ ಜೆಪಿನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಾಮಕರಣ ನಡೆದಿದ್ದು, ಪ್ರಪೌತ್ರ ಜನನ ಶಾಂತಿ, ನಾಮಕರಣ ಹಾಗೂ ಕನಕಾಭಿಶೇಕ ಮಾಡಿಸಿ, ಇನ್ನು ಕೆಲವು ಪೂಜೆಗಳನ್ನು ಮಾಡಿಸಿದ್ದಾರೆ. ಇನ್ನು ಮಗುವಿಗೆ ಅವ್ಯಾನ್ ದೇವ್ ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರನ್ನು ಗಮನಿಸಿದರೆ ಅವ್ಯಾನ್ ಎನ್ನುವುದು ಬಹಳ ವಿಶಿಷ್ಟವಾದ ಹೆಸರು, ಆ ಹೆಸರಿನ ಜೊತೆಗೆ ದೇವ್ ಎಂದು ಸೇರಿಸಲಾಗಿದೆ, ದೇವ್ ಎನ್ನುವುದು ದೇವೇಗೌಡ ಅವರ ಹೆಸರನ್ನು ಚಿಕ್ಕದಾಗಿ ದೇವ್ ಎಂದು ಹೆಸರು ಇಟ್ಟಿರುವುದು ಇನ್ನಷ್ಟು ವಿಶೇಷವಾಗಿದೆ. ಮಗುವನ್ನು ನೋಡಿದ ಎಲ್ಲರೂ ಸಹ ನೋಡಲು ದೇವೇಗೌಡರ ಹಾಗೆಯೇ ಕಾಣುತ್ತಿದೆ ಎಂದು ಸಹ ಹೇಳುತ್ತಿದ್ದಾರೆ. ಅವ್ಯಾನ್ ದೇವ್ ನಾಮಕರಣದ ಫೋಟೋಸ್ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.