ಮದುವೆಯಾದ ನಯನತಾರ ಹಾಗೂ ವಿಜ್ಞೇಶ್, ಇವರಿಬ್ಬರಲ್ಲಿ ಯಾರು ಶ್ರೀಮಂತರು ಗೊತ್ತೇ?? ಇವರಿಬ್ಬರಲ್ಲಿ ಆಸ್ತಿ ಯಾರ ಬಳಿ ಎಷ್ಟಿದೆ ಗೊತ್ತೇ?
ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದಿರುವವರು ನಟಿ ನಯನತಾರ. ಇವರಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ನಯನತಾರ ಅವರು ಇಂದು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಘ್ನೇಶ್ ಶಿವನ್ ಮತ್ತು ನಯನತಾರ ಜೋಡಿಯ ಮದುವೆ ಬಹಳ ಖಾಸಗಿ ಸಮಾರಂಭವಾಗಿ, ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ವೇಳೆಗೆ ವಿಘ್ನೇಶ್ ಶಿವನ್ ಅವರು ಮದುವೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಜೋಡಿಯ ಮದುವೆಯ ಸುಂದರ ಕ್ಷಣಗಳನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಮಂಗಳವಾರದಿಂದಲೇ ಇವರ ಮನೆಯಲ್ಲಿ ಮದುವೆಯ ಸಂಭ್ರಮ ಶುರುವಾಗಿತ್ತು, ಇಂದು ನಡೆದಿರುವ ಮದುವೆ ಸಮಾರಂಭದಲ್ಲಿ ಇವರಿಬ್ಬರ ಕುಟುಂಬದವರು, ಹಾಗೂ ಕೆಲವೇ ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ರಿಸೆಪ್ಷನ್ ನಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇನ್ನು ಈ ಜೋಡಿಯ ಮದುವೆ ವಿಚಾರ ಚರ್ಚೆಯಾಗಲು ಶುರುವಾಗುತ್ತಿದ್ದ ಹಾಗೆ ಇವರಿಬ್ಬರ ಆಸ್ತಿ ಬಗ್ಗೆ ಸಹ ಚರ್ಚೆಯಾಗುತ್ತಿದೆ. ಹಾಗಿದ್ರೆ ಇವರಿಬ್ಬರಲ್ಲಿ ಹೆಚ್ಚು ಆಸ್ತಿ ಹೊಂದಿರುವವರು ಯಾರು ಗೊತ್ತಾ?
ನಟಿ ನಯನತಾರ ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಫೇಮಸ್ ಆಗಿದ್ದು, ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಇವರಾಗಿದ್ದಾರೆ. ನಯನತಾರ ಅವರು ಒಂದು ಸಿನಿಮಾಗೆ 4 ರಿಂದ 5ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವಾಯುಪಡೆ ಆಫೀಸರ್ ಮಗಳಾಗಿರುವ ಇವರ ಒಟ್ಟು ಆಸ್ತಿ ಸುಮಾರು 70 ಕೋಟಿ ರೂಪಾಯಿ ಆಗಿದೆ. ಸಿನಿಮಾ ಜೊತೆಗೆ ಹಲವು ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ ನಯನತಾರ. ಇನ್ನು ನಿರ್ದೇಶಕ ಆಗಿರುವ ವಿಘ್ನೇಶ್ ಶಿವನ್ ಅವರ ಒಟ್ಟು ಆಸ್ತಿ ಸುಮಾರು 50 ಕೋಟಿ ರೂಪಾಯಿ ಎನ್ನಲಾಗಿದೆ. ಒಂದು ಸಿನಿಮಾಗೆ ಇವರು 1ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಇವರು ಗೀತರಚನೆಕಾರರು ಆಗಿದ್ದು, ಒಂದು ಹಾಡು ರಚಿಸಲು 1 ರಿಂದ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರಿಬ್ಬರಸ್ ಒಟ್ಟು ಆಸ್ತಿ 120 ಕೋಟಿಗಿಂತ ಹೆಚ್ಚು ಎನ್ನಲಾಗಿದೆ.
Comments are closed.