ಹೊಸ ಟಿ ಶರ್ಟ್ ಧರಿಸಿ ಸಕತ್ ಟ್ರೊಲ್ ಆದ ಕರೀನಾ ಕಪೂರ್. ಯಾಕೆ ಗೊತ್ತೇ?? ಆ ಟಿ ಶರ್ಟ್ ಬೆಲೆ ಎಷ್ಟು ಗೊತ್ತೇ?? ಜೀವನದಲ್ಲಿ ದುಡ್ಡಿಗೆ ಬೆಲೆನೇ ಇಲ್ಲವೇ???
ಬಾಲಿವುಡ್ ನ ದೊಡ್ಡ ಕುಟುಂಬದಿಂದ ಬಂದು ಸಕ್ಸಸ್ ಕಂಡಿರುವ ನಟಿ ಕರೀನಾ ಕಪೂರ್. ಕಪೂರ್ ಮನೆತನದ ಕುಡಿಯಾದರು ತನ್ನ ಆಕ್ಟಿಂಗ್ ಟ್ಯಾಲೆಂಟ್ ಇಂದ ಕರೀನಾ ಕಪೂರ್ ಅವರು ಯಶಸ್ಸು ಕಂಡರು. ಕರೀನಾ ಕಪೂರ್ ಅವರಿಗೆ ಈಗ 40 ವರ್ಷ. ಬಾಲಿವುಡ್ ನಲ್ಲಿ ಎರಡು ದಶಕಗಳಿಂದ ಸಕ್ರಿಯರಾಗಿರುವ ಕರೀನಾ ಕಪೂರ್ ಸುಮಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ನಟಿ ಕರೀನಾ 2012 ರಲ್ಲಿ ನಟ ಸೈಫ್ ಅಲಿ ಖಾನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ವಿಚಾರ ಭಾರಿ ವಿವಾದ ಸೃಷ್ಟಿಸಿತ್ತು.
ವಿವಾದಗಳಿಗೆ ಮುಖ್ಯಕಾರಣ ಸೈಫ್ ಮತ್ತು ಕರೀನಾ ನಡುವಿನ ವಯಸ್ಸಿನ ವ್ಯತ್ಯಾಸ. 2016 ರಲ್ಲಿ ಕರೀನಾ ಕಪೂರ್ ಮೊದಲ ಮಗುವಿಗೆ ಜನ್ಮ ನೀಡಿದರೆ. ತಮ್ಮ ಮೊದಲ ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟರು. ಇದರಿಂದ ವಿವಾದಕ್ಕೂ ಕಾರಣವಾಗಿದ್ದರು. ಇದೀಗ ನಟಿ ಕರೀನಾ ಕಪೂರ್ ಅವರು ಮತ್ತೊಂದು ಗಂಭೀರವಾದ ವಿಚಾರದಿಂದ ಸುದ್ದಿಯಲ್ಲಿದ್ದಾರೆ, ಜೊತೆಗೆ ಟ್ರೋಲ್ ಸಹ ಆಗುತ್ತಿದ್ದಾರೆ. ಈಗ ಕರೀನಾ ಕಪೂರ್ ಅವರು ಟ್ರೋಲ್ ಆಗುತ್ತಿರುವುದು ಅವರು ಧರಿಸಿರುವ ಟೀಶರ್ಟ್ ಇಂದಾಗಿ. ಕರೀನಾ ಕಪೂರ್ ಧರಿಸಿರುವ ಟೀ ಶರ್ಟ್ ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು ಈಗ ಕರೀನಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಕರೀನಾ ಕಪೂರ್ ಅವರು ಹಳದಿ ಬಣ್ಣದ Gucci ಟೀ ಶರ್ಟ್ ನ ಬೆಲೆ ಬರೋಬ್ಬರಿ 40 ಸಾವಿರ ರೂಪಾಯಿ ಎಂದು ಮಾಹಿತಿ ಸಿಕ್ಕಿದೆ. ಈ ಟೀ ಶರ್ಟ್ ನ ಬೆಲೆ ಇಷ್ಟು ದುಬಾರಿ ಎಂದು ತಿಳಿದ ನೆಟ್ಟಿಗರು ಕರೀನಾ ಕಪೂರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 150 ರೂಪಾಯಿಗೂ ಚೆನ್ನಾಗಿರುವ ಟೀ ಶರ್ಟ್ ಸಿಗುತ್ತದೆ ಎಂದು ಹೇಳಲು ಶುರು ಮಾಡಿದ್ದಾರೆ. ಸೆಲೆಬ್ರಿಟಿಗಳು ದುಬಾರಿ ಬೆಲೆಯ ಬಟ್ಟೆ ಧರಿಸುವುದು ಕಾಮನ್, ಹಲವು ಸೆಲೆಬ್ರಿಟಿಗಳು ಈ ಕರಣಕ್ಕೆ ಸುದ್ದಿಯಾಗಿದ್ದಾರೆ, ಈಗ ನಟಿ ಕರೀನಾ ಕಪೂರ್ ಅವರು, ತಾವು ಧರಿಸಿರುವ 40 ಸಾವಿರ ರೂಪಾಯಿಯ ಟೀಶರ್ಟ್ ಇಂದ ಟ್ರೋಲ್ ಆಗಿದ್ದಾರೆ.
Comments are closed.