ಸಾಯಿ ಪಲ್ಲವಿ: ಬೆಳ್ಳಿ ತೆರೆಯ ಬೆಳದಿಂಗಳಾಗಿ ಮಿಂಚುತ್ತಿರುವ ಸಾಯಿ ಪಲ್ಲವಿ: ಇವರು ನಿಜವಾದ ಲೇಡಿ ಸೂಪರ್ ಸ್ಟಾರ್..
ಗ್ಲಾಮರ್ ಎನ್ನುವುದರ ಹೊರತಾಗಿ ಬೆಳ್ಳಿತೆರೆಯಲ್ಲಿ ಕಾಣುವ ಸೌಂದರ್ಯಕ್ಕೆ ಹೊಸ ವ್ಯಾಖ್ಯಾನ ನೀಡಿದ ಸಹಜ ನಟಿ ಸಾಯಿಪಲ್ಲವಿ. ಈ ನಟಿ ಬೆಳ್ಳಿತೆರೆಯಲ್ಲಿ ಬಹಳ ಕಡಿಮೆ ಸಮಯದಲ್ಲಿ ವಿಶೇಷವಾದ ಕ್ರೇಜ್ ಮತ್ತು ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದರು. ಸ್ಕಿನ್ ಶೋನಿಂದ ದೂರ ಉಳಿದು ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆರಿಸಿಕೊಂಡರು. ಟಾಲಿವುಡ್‌ನಲ್ಲಿ ತನ್ನ ಮೊದಲ ಸಿನಿಮಾದಿಂದ ಪ್ರತಿ ಸಿನಿಮಾದಲ್ಲು ತಾನೇ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳ ಪ್ರೀತಿಯನ್ನು ಸಂಪಾಧಿಸಿದ್ದಾರೆ.
ಪರದೆಯ ಮೇಲೆ ಮಾತ್ರವಲ್ಲದೆ ಆಫ್ ಸ್ಕ್ರೀನ್ ಕೂಡ ತನ್ನ ನಿರ್ಧಾರಗಳು ಮತ್ತು ಸರಳತೆಯ ಮೂಲಕ ಹೆಚ್ಚಿನ ಜನರಿಗೆ ಹತ್ತಿರವಾಗುತ್ತಿದ್ದಾರೆ ಸಾಯಿಪಲ್ಲವಿ. ಫೇರ್‌ನೆಸ್ ಪ್ರಾಡಕ್ಟ್ಸ್ ನ ಭಾರೀ ಸಂಭಾವನೆಯನ್ನು ತಿರಸ್ಕರಿಸಿ ಸಾಯಿಪಲ್ಲವಿ, ಪ್ರತಿಭೆಯು ಸೌಂದರ್ಯಕ್ಕೆ ಪ್ರಮುಖವಲ್ಲ ಎಂದು ಈ ಪ್ರಪಂಚಕ್ಕೆ ಮನವರಿಕೆ ಮಾಡಿದರು. ಮತ್ತೊಂದೆಡೆ, ಸಾಯಿಪಲ್ಲವಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ತಮ್ಮದೇ ಆದ ಒಂದು ಬ್ರ್ಯಾಂಡ್ ಅನ್ನು ಶಾಶ್ವತವಾಗಿ ಬೆಳೆಸಿಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಅದು ಅವರ ಮುಂಬರುವ ಸಿನಿಮಾ ಬಗ್ಗೆ ಹೈಪ್ ಇರಲಿ ಅಥವಾ ಮೊದಲ ದಿನದ ಓಪನಿಂಗ್ ಇರಲಿ, ಸ್ಟಾರ್ ಕಾಸ್ಟ್ ಇರಲಿ ಸಾಯಿಪಲ್ಲವಿ ಅವರಿಗೆ ವಿಶೇಷವಾದ ಸ್ಥಾನ ಇದೆ ಎಂದರೆ ತಪ್ಪಾಗುವುದಿಲ್ಲ. ಬೇರೆ ಯಾವ ಸಾಯಿಪಲ್ಲವಿ ಅವರಿಗೆ ಇರುವಷ್ಟು ಕ್ರೇಜ್ ಇರುವ ಹಾಗೆ ಕಾಣುವುದಿಲ್ಲ..
ಇತ್ತೀಚೆಗೆ ಬಿಡುಗಡೆಯಾದ ವಿರಾಟಪರ್ವಂ ಟ್ರೈಲರ್ ನಲ್ಲಿ ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಮಳೆ ಬಂದರು ಸಹ ವೇದಿಕೆ ಮೇಲೆ ಸಾಯಿಪಲ್ಲವಿ ಅವರನ್ನು ನೋಡುವ ಸಲುವಾಗಿಯೇ ಸಾವಿರಾರು ಅಭಿಮಾನಿಗಳು ಕಾದಿದ್ದರು ಎಂದರೆ ಆಕೆಯ ಮೇಲೆ ಜನರಿಗೆ ಅದೆಷ್ಟು ಪ್ರೀತಿ ಇದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದೇ ವೇದಿಕೆಯಲ್ಲಿ ಸ್ವತಃ ನಟ ರಾಣಾನೇ ಅವರೇ, ‘ಇದು ಸಾಯಿಪಲ್ಲವಿ ಅವರ ಪಾತ್ರದ ಮೇಲೆ ಹೆಣೆದಿರುವ ಕಥೆ, ಇಡೀ ಕಥೆ ವೆನ್ನೆಲಾ ಎನ್ನುವ ಅವರ ಪಾತ್ರದ ಸುತ್ತ ಸುತ್ತುತ್ತದೆ. ಅವರೇ ಸಿನಿಮಾದ ಹೀರೋ..’ ಎಂದು ಹೇಳಿದಾಗ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿತ್ತು.
ಈ ಹಿಂದೆ ಶ್ಯಾಮ್ ಸಿಂಘಾ ರಾಯ್ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಸಹ ಇದೇ ರೀತಿಯ ಪ್ರೇಕ್ಷಕರ ಪ್ರತಿಕ್ರಿಯೆಗೆ ಭಾವುಕರಾಗಿದ್ದರು ಸಾಯಿಪಲ್ಲವಿ. ಅಂದು ಮಾತನಾಡಿದ್ದ ಅವರು, ರಾಷ್ಟ್ರ ಪ್ರಶಸ್ತಿ ಬಂದಾಗ ತುಂಬಾ ಮಾತನಾಡಲು ಬಯಸಿದ್ದೆ, ಆದರೆ ಕಲಾ ಪ್ರಪಂಚದಲ್ಲಿ ತನ್ನ ಉತ್ಸಾಹವನ್ನು ಹಂಚಿಕೊಳ್ಳಲು ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು..ಎಂದಿದ್ದರು. ಆಡವಾಳ್ಳು ಮೀಕು ಜೋಹಾರ್ಲ್ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಸಾಯಿಪಲ್ಲವಿ ಕ್ರೇಜ್ ನೋಡಿದ ನಿರ್ದೇಶಕ ಸುಕುಮಾರ್ ಒಂದು ಹೆಜ್ಜೆ ಮುಂದಿಟ್ಟು ಲೇಡಿ ಪವನ್ ಕಲ್ಯಾಣ್ ಎಂದು ಹೊಗಳಿದ್ದರು. ಈ ರೀತಿ ಎಷ್ಟೇ ಹೊಗಳಿದರೂ ಸಹ ದಿನೇ ದಿನೇ ಸಾಯಿಪಲ್ಲವಿ ಅವರ ಕ್ರೇಜ್ ಜಾಸ್ತಿಯಾಗುತ್ತಲೇ ಇದೆ.
ಆದರೆ ಇಂದಿನವರೆಗೂ ಅವರು ವಿವಾದಗಳಲ್ಲಿ ಸಿಲುಕಿಕೊಂಡಿಲ್ಲ ಎನ್ನುವುದು ಸಹ ವಿಶೇಷ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ “ನಿಮ್ಮ ಪಕ್ಕದಲ್ಲಿ ಡ್ಯಾನ್ಸ್ ಮಾಡುವಾಗ, ತೆರೆಯ ಮೇಲಿನ ಹೀರೋಗಳು ಚಿಕ್ಕವರಾಗಿ ಕಾಣುತ್ತಾರೆ” ಎಂಬ ಪ್ರಶ್ನೆಗೆ ಅತ್ಯಂತ ವಿನಮ್ರವಾಗಿ ಉತ್ತರಿಸಿದರು ಸಾಯಿಪಲ್ಲವಿ. ಮನೆಯಲ್ಲಿ ತನಗೆ ತಿಳಿಯದಂತೆ ಆಗಾಗ ತೆಲುಗಿನಲ್ಲಿ ಮಾತನಾಡುತ್ತಿದ್ದು, ತೆಲುಗು ಯುವಕನನ್ನು ಮದುವೆ ಆಗ್ತಿಯೋ ಏನೋ ಎಂದು ತಂದೆ ರೇಗಿಸುತ್ತಾರೆ ಎನ್ನುವ ತಮಾಷೆಯ ವಿಷಯವನ್ನು ಸಹ ತಿಳಿಸಿದ್ದಾರೆ.
ತನ್ನ ಸಮಕಾಲೀನ ಬಹುತೇಕ ಎಲ್ಲಾ ನಾಯಕಿಯರಿಗಿಂತ ಹೆಚ್ಚಿನ ಕ್ರೇಜ್ ಹೊಂದಿರುವ ಸಾಯಿಪಲ್ಲವಿ ಅವರು ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದ್ಧನ್ನು ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಷ್ಠಿತ ಪ್ರಾಜೆಕ್ಟ್ ಗಳೊಂದಿಗೆ ವೃತ್ತಿಜೀವನವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.
Comments are closed.