ನಯನತಾರ ರವರ ಪತಿ ವಿಗ್ನೇಶ್ ರವರ ಬಗ್ಗೆ ನಿಮಗೆ ತಿಳಿಯದ ಷಾಕಿಂಗ್ ವಿಷಯಗಳು ಯಾವ್ಯಾವು ಗೊತ್ತೇ?
ಕಳೆದ ಕೆಲವು ವರ್ಷಗಳಿಂದ ನಯನತಾರಾ ವಿಘ್ನೇಶ್ ಶಿವನ್ ಪ್ರೀತಿಸುತ್ತಿದ್ದರು. ಜೂನ್ 09 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ದಂಪತಿಗಳು ವಿವಾಹವಾದರು. ಮದುವೆಯಲ್ಲಿ ತಮಿಳುನಾಡಿನ ಹಲವಾರು ಸಿನಿಮಾ ಲೋಕದ ಮತ್ತು ರಾಜಕೀಯ ಗಣ್ಯರು ಭಾಗವಹಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ರಜನಿಕಾಂತ್, ಮಣಿರತ್ನಂ, ಶಾರುಖ್ ಖಾನ್ ಮುಂತಾದ ಸೆಲೆಬ್ರಿಟಿಗಳು ಆಗಮಿಸಿ ನವದಂಪತಿಗಳಿಗೆ ಆಶೀರ್ವಾದ ಮಾಡಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಬಗ್ಗೆ ಪ್ರೇಕ್ಷಕರಿಗೆ ನಯನತಾರಾ ಬಾಯ್ ಫ್ರೆಂಡ್ ಆಗಿ ಅಷ್ಟೇ ಅಲ್ಲ ನಿರ್ದೇಶಕರಾಗಿಯೂ ಗೊತ್ತು. ಈಗ ವಿಘ್ನೇಶ್ ಶಿವನ್ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಇಂದು ನಿಮಗೆ ತಿಳಿಸುತ್ತೇವೆ..
ಈ ಜೋಡಿ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು ಅಂತಿಮವಾಗಿ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿಘ್ನೇಶ್ ಶಿವನ್ ಅವರು ನಯನತಾರಾ ಅವರಿಗಿಂತ ಒಂದು ವರ್ಷ ಚಿಕ್ಕವರು. ಇವರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ನಯನತಾರಾ ಅವರನ್ನು ಮದುವೆಯಾಗುವ ಮುನ್ನ ವಿಘ್ನೇಶ್ ಅವರು ನಯನತಾರ ಅವರ ದೊಡ್ಡ ಅಭಿಮಾನಿಯಾಗಿದ್ದರು. ವಿಘ್ನೇಶ್ ಬಹುಮುಖ ಪ್ರತಿಭೆಯೂ ಹೌದು. ವಿಘ್ನೇಶ್ ಶಿವನ್ ಅವರು ನಿರ್ದೇಶಕರಾಗುವ ಮೊದಲು ಗೀತರಚನೆಕಾರರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.ತಮಿಳಿನಲ್ಲಿ ಇದುವರೆಗೆ 50 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಇವರು ಸಾಹಿತ್ಯ ಬರೆದಿರುವ ಈ ಹಾಡಿಗೆ ಅನಿರುದ್ಧ್ ರವಿಚಂದ್ರನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ್ ಅವರ ಆತ್ಮೀಯ ಗೆಳೆಯನೂ ವಿಘ್ನೇಶ್. ವಿಘ್ನೇಶ್ ಶಿವನ್ ನಿರ್ದೇಶನದ ಹಲವು ಚಿತ್ರಗಳಿಗೆ ಅನಿರುದ್ಧ್ ಸಂಗೀತ ನೀಡಿದ್ದಾರೆ.
ವಿಘ್ನೇಶ್ ಅವರು ಗೀತರಚನೆಕಾರ ಮಾತ್ರವಲ್ಲದೆ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಸಂಗೀತ ಆಲ್ಬಮ್‌ಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಆ ಸಮಯದಲ್ಲಿ, ಅವರು ಪ್ರೇಕ್ಷಕ ವರ್ಗದಲ್ಲಿ ಜನಪ್ರಿಯರಾಗಿದ್ದರು. ವಿಘ್ನೇಶ್ ಶಿವನ್ ನಿರ್ದೇಶನದ ನಾನುಂ ರೌಡಿ ಧಾನ್ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆಗಿನಿಂದ ಇಬ್ಬರು ಪ್ರೀತಿಸುತ್ತಿದ್ದರು. ಈ ಚಿತ್ರವನ್ನು ತೆಲುಗಿನಲ್ಲಿ ಸಹ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಅದರ ನಂತರ, ವಿಘ್ನೇಶ್ ಶಿವನ್ ಅವರು ರೌಡಿಪಿಕ್ಚರ್ಸ್ ಎಂಬ ಕಂಪನಿಯನ್ನು ಶುರು ಮಾಡಿದರು, ಅದರ ಮೂಲಕ ನೇಟ್ರಿಕನ್ ಹಾಗೂ ಇನ್ನು ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಗೀತರಚನೆಕಾರ, ಸಂಗೀತ ನಿರ್ದೇಶಕ, ನಿರ್ದೇಶಕ ಮತ್ತು ನಿರ್ಮಾಪಕ ವಿಘ್ನೇಶ್ ಶಿವನ್ ಅವರು ರಾಖಿ ಹೆಸರಿನ ಸಾಹಸಮಯ ಚಿತ್ರ ಬಿಡುಗಡೆ ಮಾಡಿದ್ದಾರೆ. ಅರುಣ್ ಮಾತೇಶ್ವರನ್ ಈ ಸಿನಿಮಾ ನಿರ್ದೇಶಕರು. ಈ ಸಿನಿಮಾ ಮೂಲಕ ವಿಘ್ನೇಶ್ ಅವರು ಉತ್ತಮ ಲಾಭ ಗಳಿಸಿದರು. ವಿಘ್ನೇಶ್ ಶಿವನ್ ಒಬ್ಬ ನಟ ಕೂಡ ಹೌದು.
ಸಿವಿ, ಪೋಡ ಪೋಡಿ ಮುಂತಾದ ಚಿತ್ರಗಳಲ್ಲಿ ನಟನೆ ಸಹ ಮಾಡಿದ್ದಾರೆ. ಪೋಡಾ ಪೋಡಿ ಚಿತ್ರದ ನಿರ್ದೇಶಕರಾಗಿರುವುದು ವಿಘ್ನೇಶ್ ಅವರ ಅದೃಷ್ಟ. ನಿರ್ದೇಶಕರಾಗಿ, ಅವರು ಪೋಡಾ ಪೋಡಿ, ನಾನುಂ ರೌಡಿ ಧಾನ್, ತಾನಾ ಸೆರ್ನ್ಧ ಕೂಟ್ಟಂ, ಪಾವ ಕಧೈಗಳ್ ಮತ್ತು ಕಾತು ವಾಕುಲ ರೆಂಡು ಕಾದಲ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ವಿಘ್ನೇಶ್ ಈ ಸಿನಿಮಾಗಳಿಗೆ ಬರಹಗಾರರಾಗಿ ಸಹ ಕೆಲಸ ಮಾಡಿದ್ದಾರೆ. ತಾನಾ ಸೆರ್ನ್ಧ ಕೂಟ್ಟಂ ಸಿನಿಮಾ ತೆಲುಗಿನಲ್ಲಿ ಗ್ಯಾಂಗ್ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆ ಆಯಿತು. ಸೂರ್ಯ ಹೀರೋ ಆಗಿ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು. ಸೂರ್ಯ ಮತ್ತು ಕೀರ್ತಿ ಸುರೇಶ್ ಇದರಲ್ಲಿ ನಾಯಕ-ನಾಯಕಿಯರು. ಕಾತುವಾಕುಲ ರೆಂಡು ಕಾದಲ್ ಸಿನಿಮಾ ತೆಲುಗಿನಲ್ಲಿ ಕಣ್ಮಣಿ ರಾಂಬೋ ಖತೀಜ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ತೆಲುಗಿನಲ್ಲಿ ಉತ್ತಮ ಪ್ರದರ್ಶನ ಕಾಣದಿದ್ದರೂ ತಮಿಳಿನಲ್ಲಿ ಸೂಪರ್ ಹಿಟ್ ಆಯಿತು. ವಿಜಯ್ ಸೇತುಪತಿ ನಾಯಕನಾಗಿ, ನಯನ್ ತಾರಾ ಮತ್ತು ಸಮಂತಾ ನಾಯಕಿಯರಾಗಿ ನಟಿಸಿದ್ದಾರೆ.
ಇನ್ನು ವಿಘ್ನೇಶ್ ಶಿವನ್ ಸ್ನೇಹಿತರ ವಿಚಾರದ ಬಗ್ಗೆ ಹೇಳುವುದಾದರೆ ವಿಜಯ್ ಸೇತುಪತಿ, ಸಿಂಬು, ಅನಿರುದ್ಧ್ ಮತ್ತು ಸಮಂತಾ ಇವರ ಆತ್ಮೀಯ ಸ್ನೇಹಿತರು. ನಾನಂ ರೌಡಿ ಧಾನ್ ಸಿನಿಮಾದಲ್ಲಿ ನಯನತಾರಾ ಅವರಿಗೆ ತುಂಬಾ ಹತ್ತಿರವಾದರು. ಅದರಲ್ಲೂ ರಾಜಾ ರಾಣಿ ಚಿತ್ರದಿಂದ ನಯನತಾರಾ ಅವರ ಜೊತೆ ಇನ್ನಷ್ಟು ಆತ್ಮೀಯರಾದರು. ನಯಯನತಾರ ಅವರು ಲೇಡಿ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲು ವಿಘ್ನೇಶ್ ಶಿವನ್ ಅವರ ಪಾತ್ರ ಸಹ ಮುಖ್ಯವಾದದ್ದು. ಇಬ್ಬರೂ ಪ್ರೀತಿಸಿದ ನಂತರ ವಿಘ್ನೇಶ್ ನಯನತಾರಾ ಹತ್ತಿರವೇ ಇದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರಂತೆ. ನಯನ್ ಅವರು ಯಾವುದಾದರೂ ಸಿನಿಮಾದಲ್ಲಿ ನಟಿಸಬೇಕೆಂದಿದ್ದರೆ, ವಿಘ್ನೇಶ್ ಅವರ ಬಳಿಗೆ ಮೊದಲು ಸಿನಿಮಾ ಕಥೆ ಹೋಗಿ, ಅದು ಅವರಿಗೆ ಇಷ್ಟವಾದರೆ ಮಾತ್ರ ನಯನತಾರ ಅವರ ಬಳಿಗೆ ಬರುತ್ತಿತ್ತಂತೆ. ನಂತರ ನಯನತಾರ ಅಭಿನಯದ ಸಿನಿಮಾ ಸೆಟ್ಟೇರುತ್ತಿತ್ತು. ಸುಮಾರು ಏಳು ವರ್ಷಗಳ ಕಾಲ ಕಾದು ಮನೆಯವರ ಮನವೊಲಿಸಿದ ನಂತರ ವಿಘ್ನೇಶ್ ಅವರು ನಯನತಾರಾ ಅವರನ್ನು ವಿವಾಹವಾದರು.
Comments are closed.