ಟೀಮ್ ಇಂಡಿಯಾ ಸೇರಿಕೊಂಡು ಮಿಂಚುತ್ತಿರುವ ದಿನೇಶ್ ರವರಿಗೆ ಸೃಷ್ಟಿಯಾದ ಐತಿಹಾಸಿಕ ದಾಖಲೆ. ಯಾರು ಮಾಡಿಲ್ಲ, ಮಾಡಲು ಕೂಡ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು..
ದಿನೇಶ್ ಕಾರ್ತಿಕ್, ಈ ವರ್ಷ ಐಪಿಎಲ್ ನಲ್ಲಿ ಅದ್ಭುತವಾದ ಫಿನಿಷರ್ ಎಂದೇ ಹೆಸರು ಪಡೆದುಕೊಂಡವರು. ಇವರ ಬ್ಯಾಟಿಂಗ್ ವೈಖರಿಯನ್ನು ಇಷ್ಟಪಡದೆ ಇರುವವರು, ಹೋಗಳದೆ ಇರುವವರು ಇರಲು ಸಾಧ್ಯವೇ ಇಲ್ಲ ಎನ್ನಬಹುದು. ನಮ್ಮ ಆರ್.ಸಿ.ಬಿ ತಂಡದ ಪಾಲಿಗೆ ಈ ವರ್ಷ ಲಕ್ಕಿ ಸ್ಟಾರ್, ಆಪತ್ಬಾಂಧವ ಎಂದೇ ಹೆಸರಾಗಿದ್ದರು ಡಿಕೆ. ದಿನೇಶ್ ಕಾರ್ತಿಕ್ ಅವರು ಇಂದು ಎಲ್ಲರು ಇಷ್ಟಪಡುವ ಬ್ಯಾಟ್ಸ್ಮನ್ ಆಗಿದ್ದಾರೆ, ಆರ್.ಸಿ.ಬಿ ತಂಡದ ಪರವಾಗಿ ನೀಡಿದ ಪ್ರದರ್ಶನದಿಂದ ಡಿಕೆ ಅವರು ಇದೀಗ ಭಾರತ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರು ಆಡುತ್ತಿದ್ದಾರೆ, ದಿನೇಶ್ ಅವರು ಭಾರತ ತಂಡದ ಪರವಾಗಿ ಆಡಿ ಬಹಳ ಸಮಯ ಆಗಿತ್ತು. 2019ರ ನಂತರ ಭಾರತ ತಂಡದಿಂದ ಹೊರಬಂದಿದ್ದರು ದಿನೇಶ್ ಕಾರ್ತಿಕ್. ಇದೀಗ ಆರ್.ಸಿ.ಬಿ ತಂಡದ ಪರವಾಗಿ ಇವರು ನೀಡಿದ ಅದ್ಭುತವಾದ ಪ್ರದರ್ಶನದಿಂದ ದಿನೇಶ್ ಕಾರ್ತಿಕ್ ಅವರು ಮತ್ತೊಮ್ಮೆ ನ್ಯಾಷನಲ್ ಟೀಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ ಜೊತೆಗೆ ವಿಕೆಟ್ ಕೀಪರ್ ಸಹ ಆಗಿದ್ದಾರೆ. ಇದೀಗ ಟಿ20 ಪಂದ್ಯಗಳಲ್ಲಿ ಈವರೆಗೂ ಯಾವ ಭಾರತದ ಕ್ರಿಕೆಟರ್ ಸಹ ಮಾಡದ ಸಾಧನೆಯನ್ನು ಮಾಡಿದ್ದಾರೆ ಡಿಕೆ ಬಾಸ್. ದಿನೇಶ್ ಕಾರ್ತಿಕ್ ಅವರು ಟಿ20 ಪಂದ್ಯಗಳನ್ನು ಆಡಲು ಶುರು ಮಾಡಿದ್ದು, 2006ರಲ್ಲಿ.
ಇದೀಗ ದಿನೇಶ್ ಕಾರ್ತಿಕ್ ಅವರು ಟಿ20 ಪಂದ್ಯಗಳಿಗೆ ಎಂಟ್ರಿ ಕೊಟ್ಟು 15 ವರ್ಷ ಕಳೆದಿದೆ, ಟಿ20 ಪಂದ್ಯಗಳಲ್ಲಿ 15 ವರ್ಷ ಪೂರೈಸಿರುವ ಏಕೈಕ ಆಟಗಾರ ಎನ್ನಿಸಿಕೊಂಡಿದ್ದಾರೆ ಡಿಕೆ. ಅಷ್ಟೇ ಅಲ್ಲದೆ, ಟಿ20 ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವ ಏಕೈಕ ಭಾರತದ ಕ್ರಿಕೆಟ್ ಆಟಗಾರ ಸಹ ಆಗಿದ್ದಾರೆ. ಈ ಎರಡು ದಾಖಲೆಗಳು ಡಿಕೆ ಅವರ ಹೆಸರಲ್ಲಿದೆ. ಬೇರೆ ಯಾವ ಆಟಗಾರನು ಈ ದಾಖಲೆ ಮುರಿಯಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಡಿಕೆ ಅವರು 15 ವರ್ಷಗಳಿಂದ ಟಿ20 ಪಂದ್ಯಗಳನ್ನು ಆಡುತ್ತಿದ್ದರೂ ಸಹ, ಇವರು 36 ಟಿ20 ಪಂದ್ಯಗಳಲ್ಲಿ ಪಾಲ್ಗೊಂಡಿದ್ದು, ಅವುಗಳಲ್ಲಿ 17 ಇನ್ನಿಂಗ್ಸ್ ಗಳಲ್ಲಿ ಮಾತ್ರ ಡಿಕೆ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು, ಆದರೆ ಡಿಕೆ ಅವರು ಇಲ್ಲಿಯವರೆಗೂ ಟಿ20 ಪಂದ್ಯಗಳಲ್ಲಿ ಭಾರತದ ಪರವಾಗಿ ಅರ್ಧಶತಕ ಗಳಿಸಿಲ್ಲ, ಇವುಗಳಲ್ಲಿ 400 ರನ್ಸ್ ಗಳನ್ನು ಮಾತ್ರ ಪಡೆದಿದ್ದಾರೆ.
Comments are closed.