Neer Dose Karnataka
Take a fresh look at your lifestyle.

ತನ್ನ ಹೆಂಡತಿ ಅನುಷ್ಕಾ ರವರೊಂದಿಗೆ ಟ್ರಿಪ್ ಮುಗಿಸಿ ಬಂದ ಕೊಹ್ಲಿ ಸೀದಾ ಹೋಗಿದ್ದು ಆಸ್ಪತ್ರೆಗೆ ಯಾಕೆ ಗೊತ್ತೇ??

ನಮ್ಮ ಆರ್.ಸಿ.ಬಿ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಲೆಜೆಂಡರಿ ಬ್ಯಾಟ್ಸ್ಮನ್ ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ. ಭಾರತ ತಂಡದ ಕ್ಯಾಪ್ಟನ್ ಆಗಿ ವಿರಾಟ್ ಕೋಹ್ಲಿ ಅವರು ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ಆರ್.ಸಿ.ಬಿ ತಂಡದ ಪರವಾಗಿ ಅದ್ಭುತವಾದ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ ವಿರಾಟ್ ಕೋಹ್ಲಿ ಅವರು. ಕಳೆದ 14 ಆವೃತ್ತಿಗಳಲ್ಲಿ ಆರ್.ಸಿ.ಬಿ ತಂಡ ಕಪ್ ಗೆಲ್ಲದೆ ಇದ್ದರೂ ಸಹ, ಜನರಿಗೆ ಆರ್.ಸಿ.ಬಿ ತಂಡದ ಮೇಲಿರುವ ಪ್ರೀತಿ ಕಡಿಮೆಯಾಗಿಲ್ಲ.

ಸತತವಾಗಿ ಕ್ರಿಕೆಟ್ ಆಡುತ್ತಲೇ ಇರುವುದರಿಂದ ಕೋಹ್ಲಿ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ ಎಂದು ಹೇಳಿ, ಐಪಿಎಲ್ ಪಂದ್ಯಗಳ ಬಳಿಕ ಕೋಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೆಲವು ದಿನಗಳು ಕುಟುಂಬದ ಜೊತೆಗೆ ಸಮಯ ಕಳೆದಿದ್ದಾರೆ ಕಿಂಗ್ ಕೋಹ್ಲಿ. ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶೆಟ್ಟಿ ಜೋಡಿ ವಿಶ್ರಾಂತಿ ಸಮಯದ, ಜಾಲಿ ಮೂಡ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಹ ಬಹಳ ಸಂತೋಷಪಟ್ಟಿದ್ದರು. ಇದೀಗ ವಿಶ್ರಾಂತಿ ಸಮಯ ಮುಗಿದ ಬಳಿಕ ಕೋಹ್ಲಿ ಮತ್ತು ಅನುಷ್ಕಾ ದಂಪತಿ ಮುಂಬೈಗೆ ವಾಪಸ್ ಬಂದಿದ್ದಾರೆ. ಮುಂಬೈಗೆ ಬಂದ ತಕ್ಷಣವೇ ಕೋಹ್ಲಿ ಅವರು ಆಸ್ಪತ್ರೆಗೆ ತೆರಳಿದ್ದಾರೆ.

ಕೋಹ್ಲಿ ಅವರು ಆಸ್ಪತ್ರೆಗೆ ತೆರಳಿದ್ದು ಯಾಕೆ ಎನ್ನುವ ವಿಚಾರಕ್ಕೆ ಉತ್ತರ ಸಿಕ್ಕಿಲ್ಲ, ಆದರೆ ಆಸ್ಪತ್ರೆಗೆ ಹೋಗಿ ಬಂದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಗಾಬರಿ ಆಗಿದ್ದಂತೂ ನಿಜ. ಕೋಹ್ಲಿ ಅವರು ಇಂದು ಇಂಗ್ಲೆಂಡ್ ನಲ್ಲಿ ನಡೆಯುವ ಸರಣಿ ಪಂದ್ಯಗಳಿಗೆ, ಇಂಗ್ಲೆಂಡ್ ಗೆ ಹಾರಿದ್ದಾರೆ. 3 ಟೆಸ್ಟ್ ಮತ್ತು 3 ಒನ್ ಡೇ ಕ್ರಿಕೆಟ್ ಪಂದ್ಯಗಳನ್ನು ಭಾರತ ತಂಡ ಆಡಲಿದೆ. ಐಪಿಎಲ್ ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಕೋಹ್ಲಿ ಅವರು ಈಗಿನಿಂದ ಫಾರ್ಮ್ ಗೆ ಮರಳಿ ಬರುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Comments are closed.