ಕೇಳಿ ಬರುತ್ತಿರುವ ಪ್ರೀತಿಯ ವಿಷಯದ ಕುರಿತು ಮಾತನಾಡಿದ ಡಾಲಿ ಅಮೃತ, ಸ್ಪಷ್ಟನೆ ನೀಡಿ ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೇ??
ಚಿತ್ರರಂಗದಲ್ಲಿ ದಿನಕ್ಕೊಂದು ಹೊಸ ಸುದ್ದಿಗಳು, ಹೊಸ ಗಾಸಿಪ್ ಗಳು ಕೇಳಿ ಬರುತ್ತಲೇ ಇರುತ್ತವೆ. ಕಳೆದ ಕೆಲವು ದಿನಗಳಿಂದ ಚಂದನವನದಲ್ಲಿ ಕೇಳಿಬರುತ್ತಿರುವ ಹೊಸ ಗಾಸಿಪ್ ನಟ ಡಾಲಿ ಧನಂಜಯ್ ಮತ್ತು ನಟಿ ಅಮೃತಾ ಅಯ್ಯಂಗಾರ್ ಅವರ ಬಗ್ಗೆ. ಈ ಜೋಡಿ ಪ್ರೀತಿ ಮಾಡುತ್ತಿದ್ದಾರೆ,ಡೇಟ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಜೋರಾಗಿಯೇ ಕೇಳಿ ಬರುತ್ತಿದೆ. ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಬಡವ ರಾಸ್ಕಲ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು..
ಬಡವ ರಾಸ್ಕಲ್ ಸಿನಿಮಾದಲ್ಲಿ ಇವರಿಬ್ಬರ ಜೋಡಿ, ಕೆಮಿಸ್ಟ್ರಿ ಮತ್ತು ಗಿಣಿಮರಿಯೇ ಹಾಡು ನಿಜಕ್ಕೂ ಈ ಜೋಡಿ ಪ್ರೀತಿ ಮಾಡುತ್ತಿದ್ದಾರಾ ಎನ್ನುವ ಅನುಮಾನ ಸಿನಿಪ್ರಿಯರಲ್ಲಿ ಮೂಡುವ ಹಾಗೆ ಮಾಡಿತ್ತು. ಜೊತೆಗೆ ಇವರಿಬ್ಬರ ಪ್ರೀತಿ ಬಗ್ಗೆ ಹೆಚ್ಚಿನ ಗಾಸಿಪ್ ಹರಡುವ ಹಾಗೆ ಮಾಡಿದ್ದು, ಕಾರ್ಯಕ್ರಮ ಒಂದರಲ್ಲಿ ಡಾಲಿ ಧನಂಜಯ್ ಅವರು ಅಮೃತಾ ಅವರಿಗೆ ಪ್ರೊಪೋಸ್ ಮಾಡಿದ ದೃಶ್ಯ. ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಧನಂಜಯ್ ಅವರು ಕವಿತೆ ಹೇಳಿ ಅಮೃತಾ ಅವರಿಗೆ ಪ್ರೊಪೋಸ್ ಮಾಡಿದ್ದರು.. ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೆನು, ತೆಗೆದು ಬಚ್ಚಿಟ್ಟುಕೋ.. ಇಲ್ಲ ತುಳಿದು, ಕಾಲ್ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ..ಎಂದು ಕವಿತೆಯ ಮೂಲಕ ಪ್ರೊಪೋಸ್ ಮಾಡಿದ್ದರು ಡಾಲಿ.
ಇದಾದ ಬಳಿಕ ಈ ಜೋಡಿ ಖಂಡಿತವಾಗಿ ಪ್ರೀತಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು, ಆದರೆ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಅಮೃತಾ ಅಯ್ಯಂಗಾರ್, ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದರು. ನಮ್ಮಿಬ್ಬರ ನಡುವೆ ಏನು ಇಲ್ಲ, ನಾವು ಒಳ್ಳೆಯ ಸ್ನೇಹಿತರು ಅಷ್ಟೇ ಎಂದು ಹೇಳಿದ್ದರು ಅಮೃತಾ. ಜೊತೆಗೆ, “ನಾನು ಧನಂಜಯ್ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವುದಕ್ಕೆ ಈ ಥರ ಮಾತುಗಳು ಕೇಳಿ ಬರ್ತಾ ಇದೆ. ಧನಂಜಯ್ ಪ್ರೊಪೋಸ್ ಮಾಡಿದ್ದು, ಕಾರ್ಯಕ್ರಮಕ್ಕಾಗಿ ಮಾತ್ರ. ಅದಕ್ಕಾಗಿ ನಾವು ಪ್ರೇಮಿಗಳು ಎನ್ನುವುದು ಸರಿಯಲ್ಲ.. ” ಎಂದು ಅಮೃತಾ ಅಯ್ಯಂಗಾರ್ ಹೇಳಿದರು ಸಹ ಅಭಿಮಾನಿಗಳು ಮಾತ್ರ ಇವರಿಬ್ಬರು ನಿಜಕ್ಕೂ ಇಷ್ಟಪಡುತ್ತಿದ್ದಾರೆ ಎಂದೇ ತಿಳಿದುಕೊಳ್ಳುತ್ತಿದ್ದಾರೆ
Comments are closed.