ಈತನೇ ಆರ್ಸಿಬಿ ಭವಿಷ್ಯ, ಈತನಿಲ್ಲದೆ ಕಪ್ ಗೆಲ್ಲುವುದು ಕಷ್ಟವೇ ಸರಿ. ಈತನನ್ನು ಯಾವುದೇ ಕಾರಣಕ್ಕೂ ಹೊರಹಾಕಬಾರದು. ಯಾರು ಗೊತ್ತೇ?
ನಮ್ಮ ಮೆಚ್ಚಿನ ಆರ್.ಸಿ.ಬಿ ತಂಡವು 15 ವರ್ಷಗಳಿಂದ ಒಂದು ಸಾರಿಯು ಕಪ್ ಗೆಲ್ಲದೆ ಹೋದರು ಸಹ ನಮ್ಮ ತಂಡಕ್ಕೆ ಇರುವ ಅಭಿಮಾನಿ ಬಳಗ ಕಡಿಮೆಯಾಗಿಲ್ಲ. ನಮ್ಮ ಆರ್.ಸಿ.ಬಿ ತಂಡಕ್ಕೆ ಸಿಕ್ಕಿರುವ ಅಭಿಮಾನಿಗಳು ಎಲ್ಲರೂ ಸಹ ಬಹಳ ಲಾಯಲ್ ಆಗಿ ಹಾನೆಸ್ಟ್ ಆದ ಅಭಿಮಾನಿಗಳು. ಪ್ರತಿ ಸಾರಿ ತಂಡ ಕಪ್ ಗೆಲ್ಲದೆ ಹೋದರು ಸಹ, ಪ್ರತಿವರ್ಷ ಅಭಿಮಾನಿಗಳು ಅದೇ ಪ್ರೀತಿಯಿಂದ ಈ ಸಲ ಕಪ್ ನಮ್ಮದೇ ಎಂದು ಬರುತ್ತಾರೆ.
ನಮ್ಮ ಆರ್.ಸಿ.ಬಿ ತಂಡದ ಪ್ಲೇಯರ್ ಗಳ ವಿಚಾರಕ್ಕೆ ಬಂದರೆ, ಈ ವರ್ಷ ಎಂಟ್ರಿಯಾದ ರಜತ್ ಪಟಿದಾರ್ ಮತ್ತು ಆಕಾಶ್ ದೀಪ್ ಅವರನ್ನು ಆಯ್ಕೆಮಾಡಿದಾಗಲು ಸಹ, ಅವರಿಬ್ಬರನ್ನು ಆಯ್ಕೆ ಮಾಡಿದ್ದು ಯಾಕೆ, ಇವರಿಬ್ಬರ ಸಾಮರ್ಥ್ಯ ಏನು ಎನ್ನುವ ಬಗ್ಗೆ ದೊಡ್ಡದಾಗಿಯೇ ಚರ್ಚೆ ಆಗಿತ್ತು. ಇವರಿಬ್ಬರು ಮಾತ್ರವಲ್ಲದೆ, ಈ ಹಿಂದಿನ ಪ್ಲೇಯರ್ ಗಳಾದ ಯುಜವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದಾಗಲೂ ಸಹ, ಆರಂಭದಲ್ಲಿ ಅವರಿಬ್ಬರ ಬಗ್ಗೆ ಅನುಮಾನಗಳು ಮೂಡಿದ್ದವು, ಆದರೆ ಬರುಬರುತ್ತಾ ಚಾಹಲ್ ಅವರು ಮತ್ತು ಸಿರಾಜ್ ಇಬ್ಬರು ಸಹ ಉತ್ತಮವಾದ ಪ್ರದರ್ಶನ ನೀಡಿದ್ದರು. ಇದೀಗ ಮತ್ತೊಬ್ಬ ಆಟಗಾರನ ಬಗ್ಗೆ ಸಹ ಇದೇ ರೀತಿಯ ಮಾತುಗಳು ಕೇಳಿಬರುತ್ತಿವೆ.
ಆ ಆಟಗಾರ ಮತ್ಯಾರು ಅಲ್ಲ, ಆರ್.ಸಿ.ಬಿ ತಂಡದ ಆಲ್ ರೌಂಡರ್ ಶಹಬಾಜ್ ಅಹ್ಮದ್. ಕಳೆದ ಎರಡು ವರ್ಷಗಳಿಂದ ಆರ್.ಸಿ.ಬಿ ತಂಡದಲ್ಲಿರುವ ಶಹಬಾಜ್ ಅಹ್ಮದ್, ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇವರನ್ನು ನೋಡಿದರೆ, ಯಾರು ಈ ಹುಡುಗ ಎಂದುಕೊಳ್ಳುವವರೆ ಹೆಚ್ಚು, ಆದರೆ ಶಹಬಾಜ್ ಅಹ್ಮದ್ ಅವರು ಎಲ್ಲರೂ ಅಂದುಕೊಂಡ ಹಾಗಲ್ಲ, ಆರ್.ಸಿ.ಬಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದ ಶಹಬಾಜ್ ಅಹ್ಮದ್ ಅವರು, ಇದೀಗ ರಣಜಿ ಟ್ರೋಫಿ ಪಂದ್ಯಗಳಲ್ಲಿ ಸಹ ಭರ್ಜರಿಯಾದ ಪ್ರದರ್ಶನ ನೀಡಿದ್ದಾರೆ. ರಣಜಿ ಪಂದ್ಯದಲ್ಲಿ ವೆಸ್ಟ್ ಬೆಂಗಾಲ್ ತಂಡದ ಪರವಾಗಿ ಆಡುತ್ತಿರುವ ಆಲ್ ರೌಂಡರ್ ಶಹಬಾಜ್ ಅಹ್ಮದ್, ಬೌಲಿಂಗ್ ನಲ್ಲಿ 86 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಕಬಳಿಸಿದ್ದು, ಬ್ಯಾಟಿಂಗ್ ನಲ್ಲಿ ಬರೋಬ್ಬರಿ 116 ರನ್ ಗಳನ್ನು ಭಾರಿಸಿದ್ದಾರೆ. ಸೆಂಚುರಿ ಭಾರಿಸಿ ಅದ್ಭುತವಾದ ಪ್ರದರ್ಶನ ನೀಡಿರುವ ಶಹಬಾಜ್ ಅಹ್ಮದ್ ಅವರು ತಂಡದಲ್ಲೇ ಉಳಿಯಬೇಕು ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ ಆಗಿದೆ.
Comments are closed.