ವಿಚ್ಚೇದನದ ಕುರಿತು ಮೊದಲ ಬಾರಿಗೆ ಮಾತನಾಡಿದ ಖ್ಯಾತ ನಟಿ ಸೋನು ಗೌಡ. ಹೇಳಿದ್ದೇನು ಗೊತ್ತೇ??
ಚಂದನವನದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ನಟಿ ಸೋನು ಗೌಡ ಅವರು. ಇವರ ತಂದೆ ಸ್ಯಾಂಡಲ್ ವುಡ್ ನಲ್ಲಿ ಕೇಶ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಕಾರಣ, ಚಿತ್ರರಂಗವೇನು ಸೋನು ಅವರಿಗೆ ಹೊಸದಲ್ಲ. 1990, ಮಾರ್ಚ್ 23 ರಂದು ಹುಟ್ಟಿದ ಸೋನು ಅವರು, ಮೌಂಟ್ ಕಾರ್ಮಲ್ ಶಾಲೆಯಲ್ಲಿ ಓದಿದರು. ನಟನೆಯಲ್ಲಿ ಆಸಕ್ತಿ ಇದ್ದ ಕಾರಣ, 2008ರಲ್ಲಿ ಇಂತಿ ನಿನ್ನ ಪ್ರೀತಿಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಸೋನು ಅವರು ಗುಲಾಮ, ಪರಮೇಶ ಪಾನ್ ವಾಲಾ ಸೇರಿದಂತೆ ಕೆಲವು ಒಳ್ಳೆಯ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸ್ತುತ ಸೋನು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ವಿಚ್ಛೇದನದಿಂದ ಆದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
ಸೋನು ಗೌಡ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗಲೇ ಮದುವೆಯಾದರು, ಆದರೆ ಇವರ ಮದುವೆ ಬೇಗ ಮುರಿದು ಬಿದ್ದಿತು. ಇದೀಗ ಸೋನು ಗೌಡ ಅವರು ವೆಡ್ಡಿಂಗ್ ಗಿಫ್ಟ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಕುರಿತ ಸಂದರ್ಶನದಲ್ಲಿ ವಿಚ್ಛೇದನದಿಂದ ತಮಗೆ ಆದ ನೋವಿನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. “ಜೀವನದ ಅನುಭವ ನಿಮಗೆ ಎಲ್ಲವನ್ನು ಹೇಳಿಕೊಡುತ್ತದೆ. ಯಾರ್ ಜೊತೆ ಸ್ನೇಹ ಮಾಡಬೇಕು, ಯಾರ್ ಜೊತೆ ಸ್ನೇಹ ಮಾಡಬಾರದು, ಫ್ರೆಂಡ್ ಶಿಪ್ ಅಂದ್ರೆ ಬ್ಯುಸಿನೆಸ್ ಅಂದ್ರೆ ಎಮೋಷನ್ಸ್. ನಾನು ಅತ್ತಾಗ ನನ್ನ ಜೊತೆ ಇಬ್ಬರು ಫ್ರೆಂಡ್ಸ್ ಇದ್ದರು ಸಾಕು, ಅವರೇ ನನಗೆ ಎಲ್ಲಾ, ನನಗೆ 100 ಜನ ಸ್ನೇಹಿತರು ಬೇಕಾಗಿಲ್ಲ. ಈ ಮೊದಲು ನನಗೆ ತುಂಬಾ ಫ್ರೆಂಡ್ಸ್ ಇದ್ರು, ಆದರೆ ಒಂದು ಘಟನೆ ಎಲ್ಲವನ್ನು ಬದಲು ಮಾಡಿತು, ಆಗ ನಾನು ಒಂಟಿಯಾಗಿದ್ದಾಗ ಯಾರು ಬರಲಿಲ್ಲ.
ಆಗಲೇ ನನಗೆ ನನ್ನ ನಿಜವಾದ ಫ್ರೆಂಡ್ಸ್ ಯಾರು, ನಿಜವಾದ ಸಂಬಂಧಿಕರು ಯಾರು ಅಂತ ಅರ್ಥ ಆಯ್ತು, ಆ ಘಟನೆ ನಡೆಯದೆ ಹೋಗಿದ್ದರೆ, ನಾನು ಫೇಕ್ ಪ್ರಪಂಚದಲ್ಲೇ ಇರ್ತಾ ಇದ್ದೆ. ಒಂದು ವೇಳೆ ನಾನು ಅದೇ ರೀತಿ ಇದ್ದಿದ್ದರೆ, ಅವರೇ ನನ್ನ ಬೆಸ್ಟ್ ಫ್ರೆಂಡ್ಸ್, ಅವರೇ ನನಗೆ ಎಲ್ಲಾ, ಅವರೇ ನನ್ನ ಪ್ರಪಂಚ ಅಂದುಕೊಳ್ಳುತ್ತಾ ಇದ್ದೆ. ಆಗಿದ್ದೆಲ್ಲವು ಒಳ್ಳೆಯದೇ ಆಯ್ತು. ಏನು ಮಾಡೋಕೆ ಆಗಲ್ಲ. ನಾನು ಮೂವ್ ಆನ್ ಆಗಬೇಕು ಅಷ್ಟೇ ಎಂದಿದ್ದಾರೆ ಸೋನು. ಹಾಗೆಯೇ ವಿಚ್ಛೇದನದ ಬಗ್ಗೆ ಮಾತನಾಡಿ, ಅದರಿಂದ ಹೊರಗೆ ಬಂದಿದ್ದೀನಿ ಅಂತ ಹೇಳೋದಕ್ಕೆ ಆಗಲ್ಲ, ಕೊನೆಗೆ ನನ್ನ ಜೀವನ ಈ ಥರಾ ಆಗಬಾರದಿತ್ತು ಅಂತ ಯಾರಿಗೆ ಆದರೂ ಅನ್ನಿಸುತ್ತೆ. My life was beautiful, why did I ruin myself ಎಂದು ಹೇಳಿದ್ದಾರೆ ಸೋನು ಗೌಡ.
Comments are closed.