ಕನ್ನಡದ ಭವಿಷ್ಯದಲ್ಲಿ ನಾಯಕಿಯಾಗಬಹುದಾದ ಸೋಶಿಯಲ್ ಮೀಡಿಯಾ ಪ್ರತಿಭೆ ಸೋನು ರವರು ಒಂದು ತಿಂಗಳಿಗೆ ಎಷ್ಟು ದುಡಿಯುತ್ತಾರೆ ಗೊತ್ತೆ?
ಟಿಕ್ ಟಾಕ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರಿಗೆ ಈಗ ಇನ್ಸ್ಟಾಗ್ರಾಮ್ ನಲ್ಲಿ 4.5ಲಕ್ಷ ಫಾಲೋವರ್ಸ್ ಗಳಿದ್ದಾರೆ. ಆಗಾಗ ಏನಾದರೂ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಾರೆ ಸೋನು ಶ್ರೀನಿವಾಸ್ ಗೌಡ. ಈಕೆಯ ನಿಜವಾದ ಹೆಸರು ಶಾಂಭವಿ, ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಹೆಸರಿನಿಂದ ಫೇಮಸ್ ಆಗಿದ್ದಾರೆ. ಟಿಕ್ ಟಾಕ್ ನಲ್ಲಿ ವಿಡಿಯೋಗಳು, ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಹೇಳಿ ವಿಡಿಯೋ ಮಾಡಿ, ಇನ್ಸ್ಟಾಗ್ರಾಮ್ ಲೈವ್ ಬಂದು ಜನರ ಜೊತೆ ಮಾತನಾಡುವ ಸೋನು, ಹಲವಾರು ಬಾರಿ ಟ್ರೋಲ್ ಸಹ ಆಗಿದ್ದಾರೆ. .
ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಸೋನು ಒಂದು ಫೋಟೋಶೂಟ್ ಗೆ ಇವರು 10,000 ರೂಪಾಯಿ ಪಡೆಯುತ್ತಾರೆ. ಸಿನಿಮಾದಲ್ಲಿ ನಟಿಸಬೇಕು ಎನ್ನುವ ಕನಸನ್ನು ಹೊಂದಿದ್ದರು. ಕೆಲ ಸಮಯದ ಹಿಂದೆ ಸೋನು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಒಂದು ಸಂದರ್ಶನದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಬರನ್ನ ಬೆಳೆಸುವುದಿಲ್ಲ ತುಳಿಯುತ್ತಾರೆ ಎಂದು ಹೇಳಿಕೆ ನೀಡಿದ್ದರು, ಈ ಹೇಳಿಕೆ ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೆಲ ದಿನಗಳ ನಂತರ ಅದೇ ವಾಹಿನಿಯಲ್ಲಿ ಕುಳಿತು, ಕನ್ನಡಿಗರಿಗೆ ಅಳುತ್ತಾ ಕ್ಷಮೆ ಕೇಳಿದ್ದರು. ಕೆಲವು ಶಾರ್ಟ್ ಫಿಲ್ಮ್ ಗಳಲ್ಲಿ ಕೂಡ ನಟಿಸಿರುವ ಸೋನು ಶ್ರೀನಿವಾಸ್ ಗೌಡ.
ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ 10 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಶುರುವಾದರೆ, ಇವರು ಶೋಗೆ ಹೋಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಹಲವು ಫೋಟೋಶೂಟ್ ಮತ್ತು ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡುತ್ತಾರೆ, ಜೊತೆಗೆ ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಸಹ ಶೇರ್ ಮಾಡಿ, ಅವುಗಳು ಲಕ್ಷಗಟ್ಟಲೇ ವ್ಯುಸ್ ಪಡೆಯುತ್ತವೆ. ಬ್ರ್ಯಾಂಡ್ ಪ್ರೊಮೋಶನ್ ಇದೆಲ್ಲದರಿಂದ ಸೋನು ಶ್ರೀನಿವಾಸ್ ಗೌಡ ಅವರು ಪ್ರತಿ ತಿಂಗಳಿಗೆ 2 ರಿಂದ 3 ಲಕ್ಷ ರೂಪಾಯಿ ಸಂಪಾಡನೆ ಮಾಡುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.
Comments are closed.