Neer Dose Karnataka
Take a fresh look at your lifestyle.

ಕೆಜಿಎಫ್ ಚಿತ್ರ ಯಶಸ್ಸು ಕಂಡ ನಂತರ, ರಾಧಿಕಾ ರವರು ಧರಿಸುತ್ತಿರುವ ಬಟ್ಟೆಗಳ ಬೆಲೆ ಎಷ್ಟು ಗೊತ್ತೇ? ಒಂದೊಂದು ಡ್ರೆಸ್ ಗೆ ಎಷ್ಟು ಗೊತ್ತೇ??

32

ಚಂದನವನದ ಕ್ಯೂಟ್ ಮತ್ತು ರಾಕಿಂಗ್ ಜೋಡಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್. ಚಂದನವನದಲ್ಲಿ ಎಲ್ಲರೂ ಇಷ್ಟಪಡುವ ಸ್ಟಾರ್ ಕಪಲ್ ಇವರು. ಈ ಜೋಡಿ ಇಂದು ಅನ್ಯೋನ್ಯವಾದ ದಂಪತಿಗಳಾಗಿ ಜೇವನ ಸಾಗಿಸುತ್ತಿದ್ದಾರೆ. ಕಷ್ಟದ ದಿನಗಳಲ್ಲಿ ಸಹ ಇವರಿಬ್ಬರು ಜೊತೆಯಾಗಿಯೇ ಇದ್ದರು. ಯಶ್ ಮತ್ತು ರಾಧಿಕಾ ಪಂಡಿತ್ ಕೆರಿಯರ್ ಶುರು ಮಾಡಿದ್ದು ಜೊತೆಯಾಗಿಯೇ. ಈಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಧಾರಾವಾಹಿ ಮೂಲಕ ಇವರಿಬ್ಬರು ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಹ ಒಂದೇ ಸಿನಿಮಾ ಮೂಲಕ..

ಮೊಗ್ಗಿನ ಮನಸ್ಸು ಸಿನಿಮಾ ಇಂದ ಇವರಿಬ್ಬರು ಹೀರೋ ಹೀರೋಯಿನ್ ಆದರು, ಮೊದಲ ಸಿನಿಮಾ ಯಶಸ್ಸಿನಿಂದ ಯಶ್ ಮತ್ತು ರಾಧಿಕಾ ಪಂಡಿತ್ ಹಿಂದಿರುಗಿ ನೋಡಿದ್ದೇ ಇಲ್ಲ. ಸಾಕಷ್ಟು ಹಿಟ್ ಸಿನಿಮಾಗಳಿಗೆ ನಾಯಕ ನಾಯಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಮೊಗ್ಗಿನ ಮನಸ್ಸು ಬಳಿಕ ಡ್ರಾಮಾ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ನಟಿಸತ್ತು. ಈ ಸ್ನೇಹ ಸಲುಗೆಯಾಗಿ, ಪ್ರೀತಿಯಾಗಿ, ಬಳಿಕ ಮದುವೆಯಾಗಿ ಇಂದು ಇಬ್ಬರು ಮಕ್ಕಳ ಜೊತೆ ಸಂತೋಷವಾಗಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಯಶ್ ಅವರ ರೇಂಜ್ ಬದಲಾಗಿದೆ, ಕೆಜಿಎಫ್ ಬಳಿಕ ಒಂದು ಸಿನಿಮಾಗೆ 25ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ, ಅವರ ಲೈಫ್ ಸ್ಟೈಲ್ ಎಲ್ಲವೂ ಬದಲಾಗಿದೆ. ಐಷಾರಾಮಿ ಕಾರ್ ಗಳನ್ನು ಖರೀದಿ ಮಾಡಿದ್ದಾರೆ ಯಶ್.

ಇನ್ನು ರಾಧಿಕಾ ಪಂಡಿತ್ ಅವರು ಸಹ ತಮ್ಮ ಲೈಫ್ ಸ್ಟೈಲ್ ಚೇಂಜ್ ಮಾಡಿಕೊಂಡಿದ್ದಾರೆ. ಕೆಜಿಎಫ್ ಬಳಿಕ ರಾಧಿಕಾ ಪಂಡಿತ್ ಮತ್ತು ಯಶ್ ಅವರು 80 ಕೋಟಿ ಬೆಲೆಬಾಳುವ ಐಷಾರಾಮಿ ಮನೆಯೊಂದನ್ನು ಸಹ ಖರೀದಿ ಮಾಡಿದ್ದಾರೆ. ಇನ್ನು ಕೆಜಿಎಫ್2 ಸಿನಿಮಾ 1200 ಕೋಟಿಗಿಂತ ಹೆಚ್ಚಿನ ಹಣ ಗಳಿಕೆ ಮಾಡಿದ್ದು, ಇಷ್ಟೊಂದು ಹಣ ಗಳಿಕೆ ಮಾಡಿರುವ ಮೊದಲ ಸಿನಿಮಾ ಆಗಿದೆ ಕೆಜಿಎಫ್2. ಈ ಯಶಸ್ಸಿನ ಬಳಿಕ ಈ ಜೋಡಿಯ ಲೈಫ್ ಸ್ಟೈಲ್ ಸಹ ಬದಲಾಗಿದ್ದು, ರಾಧಿಕಾ ಪಂಡಿತ್ ಅವರು ಈಗ ಧರಿಸುತ್ತಿರುವ ಬಟ್ಟೆಗಳ ಬೆಲೆ, 1 ರಿಂದ 2ಲಕ್ಷ ರೂಪಾಯಿ ಆಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹಲವು ಕಾರ್ಯಕ್ರಮಗಳಲ್ಲಿ ರಾಧಿಕಾ ಪಂಡಿತ್ ಅವರು ಡಿಸೈನರ್ ಡ್ರೆಸ್ ಗಳನ್ನು ಧರಿಸಿರುವುದನ್ನು ನೋಡಬಹುದು

Leave A Reply

Your email address will not be published.