ಖ್ಯಾತ ನಟ ಸುಚೇಂದ್ರ ಹಾಗೂ ನಟಿ ಪವಿತ್ರ ಲೋಕೇಶ್ ರವರ ಜೀವನದಲ್ಲಿ ಬಿರುಕು ಬರಲು ಕಾರಣವೇನಂತೆ ಗೊತ್ತೇ?? ದೂರ ಆಗಲು ಅದೊಂದು ತಪ್ಪು ಕಾರಣವಾಯಿತೆ??
ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಇದೀಗ ಮತ್ತೊಂದು ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. 2007ರಲ್ಲಿ ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು, ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಸಂತೋಷವಾಗಿಯೇ ಇದ್ದ ಹಾಗೆ ಕಾಣುತ್ತಿದ್ದ ಪವಿತ್ರಾ ಲೋಕೇಶ್ ಅವರು ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ಅವರೊಡನೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಎರಡು ಕಡೆ ಸದ್ದು ಮಾಡುತ್ತಿದೆ.
ನರೇಶ್ ಅವರು ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅವರ ಸಹೋದರ. ಬಹಳ ಆಸ್ತಿ ಹೊಂದಿದ್ದು, ಇವರ ಆಸ್ತಿ ಮೌಲ್ಯ 6000 ಕೋಟಿ ಎನ್ನಲಾಗುತ್ತಿದೆ. ಪವಿತ್ರ ಲೋಕೇಶ್ ಅವರು ಮತ್ತು ಸುಚೇಂದ್ರ ಪ್ರಸಾದ್ ಅವರು ಸಹ ಕೆಲವು ವರ್ಷಗಳಿಂದ ಜೊತೆಯಾಗಿಲ್ಲ, ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸುಚೇಂದ್ರ ಪ್ರಸಾದ್ ಅವರು ಅಪ್ಪಟ ಕನ್ನಡದ ಪ್ರತಿಭೆ, ಅದ್ಭುತವಾದ ನಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪವಿತ್ರಾ ಲೋಕೇಶ್ ಅವರು ಮತ್ತು ಸುಚೇಂದ್ರ ಪ್ರಸಾದ್ ಅವರು ದೂರವಾಗಲು ಸುಚೇಂದ್ರ ಪ್ರಸಾದ್ ಅವರಿಗೆ ಇದ್ದ ಅತಿಯಾದ ಕೋಪವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ..
ಇನ್ನು ಪವಿತ್ರಾ ಲೋಕೇಶ್ ಅವರು ಕೆಲವು ಸಮಯದಿಂದ ನಟ ನರೇಶ್ ಅವರೊಡನೆ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು, ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಕೆಲವು ಕಡೆಗಳಲ್ಲಿ ಪವಿತ್ರಾ ಲೋಕೇಶ್ ಅವರು ನರೇಶ್ ಅವರು ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗಿ ಸ್ವಾಮಿಜಿಯವರನ್ನು ಭೇಟಿ ಮಾಡಿದ್ದ, ಅವರ ಎದುರು ಮದುವೆ ಆಗಿಯೇ ಬಿಟ್ಟಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಆದರೆ ಈ ವಿಚಾರ ನಿಜವೋ ಸುಳ್ಳೋ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ನರೇಶ್ ಅವರಿಗೆ ಈಗ 62 ವರ್ಷ ವಯಸ್ಸು, ಪವಿತ್ರಾ ಲೋಕೇಶ್ ಅವರಿಗೆ 43 ವಯಸ್ಸು. ಜೊತೆಗೆ ನರೇಶ್ ಅವರಿಗೆ ಇದು 4ನೇ ಮದುವೆ ಎನ್ನುವ ಸುದ್ದಿ ಸಹ ವೈರಲ್ ಆಗುತ್ತಿದೆ.
Comments are closed.