ಪೂಜಾ ಹೆಗ್ಡೆ ಗೆ ಶಾಕ್ ನೀಡಿದ ವಿಜಯ್ ಬೀಸ್ಟ್ ಚಿತ್ರತಂಡ: ಸರಿಯಾಗಿ ದೌಲತ್ತು ಇಳಿಸಿದ್ದೀರಾ ಎಂದ ನೆಟ್ಟಿಗರು. ಯಾಕೆ ಗೊತ್ತೇ? ಪೂಜಾ ಮಾಡಿದ್ದೇನು ಗೊತ್ತೇ?
ನಟಿ ಪೂಜಾ ಹೆಗ್ಡೆ ಲಕ್ ಮಾಮೂಲಿಯಾಗಿಲ್ಲ. ಹಿಂದಿನ ಮೂರು ಸಿನಿಮಾಗಳು ಫ್ಲಾಪ್ ಆಗಿದ್ದರು ಸಹ, ಈ ನಟಿಗೆ ಬಿಗ್ ಸಿನಿಮಾ ಆಫರ್ ಗಳು ಬರುತ್ತಲೇ ಇದೆ. ಆಚಾರ್ಯ, ಬೀಸ್ಟ್, ರಾಧೆ ಶ್ಯಾಮ್ ಮೂರು ಸಿನಿಮಾಗಳು ಡಿಸಾಸ್ಟರ್ ಆಗಿ, ಈ ನಟಿಗೆ ಫ್ಲಾಪ್ ಸಿನಿಮಾ ಆದರೂ ಸಹ, ಈ ನಟಿಯ ಮೇಲಿರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಹೀರೋಗಳು ತಮ್ಮ ಸಿನಿಮಾದಲ್ಲಿ ನಟಿಸಲು ಪೂಜಾ ಹೆಗ್ಡೆ ಅವರಿಗೆ ಅವಕಾಶ ನೀಡುತ್ತಿದ್ದಾರೆ. ರಾಧೆ ಶ್ಯಾಮ್ ಬಿಡುಗಡೆ ಆಗುವ ಮೊದಲು, ಪೂಜಾ ಹೆಗ್ಡೆ ಅವರನ್ನು ಲಕ್ಕಿ ಹೀರೋಯಿನ್ ಎಂದು ಕರೆಯಲಾಗಿತ್ತು, ಫ್ಲಾಪ್ ಹೀರೋಗಳಿಗೂ ಸಹ ಇವರೊಡನೆ ನಟಿಸಿದರೆ ಸಿನಿಮಾ ಹಿಟ್ ಎನ್ನಲಾಗಿತ್ತು.
ಹಾಗಾಗಿ ಎಲ್ಲಾ ಹೀರೋಗಳು ತಮ್ಮ ಸಿನಿಮಾಗೆ ಪೂಜಾ ಹೀರೋಯಿನ್ ಆಗಬೇಕು ಎಂದು ಆಫರ್ ನೀಡುತ್ತಿದ್ದರು. ಆದರೆ, ರಾಧ್ಯೆ ಶ್ಯಾಮ್, ಬೀಸ್ಟ್ ಮತ್ತು ಆಚಾರ್ಯ ಸಿನಿಮಾ ಫ್ಲಾಪ್ ಆದರು ಸಹ ಇವರಿಗೆ ಸಿಗುತ್ತಿರುವ ಅವಕಾಶಗಳು ಮತ್ತು ಪೂಜಾ ಹೆಗ್ಡೆ ಹವಾ ಮಾತ್ರ ಕಡಿಮೆ ಆಗಿಲ್ಲ. ಪ್ರಸ್ತುತ ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ಬ್ಯಸಿ ಇದ್ದಾರೆ ಪೂಜಾ ಹೆಗ್ಡೆ. ಎಲ್ಲಾ ಭಾಷೆಗಳಲ್ಲೂ ಸ್ಟಾರ್ ನಟರ ಜೊತೆಗೆ ಬಿಗ್ ಬಜೆಟ್ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. ಪೂಜಾ ಅವರ ಸಿನಿಮಾಗಳು ಫ್ಲಾಪ್ ಆಗಿದ್ದರು ಸಹ ಅವರಿಗೆ ಸಿಗುತ್ತಿರುವ ಅವಕಾಶಗಳು ಕಡಿಮೆ ಆಗಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ಬಹಳಷ್ಟು ಬದಲಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ಸಿನಿಮಾ ಸೆಟ್ ಗೆ ಇಬ್ಬರ ಜೊತೆ ಬರುತ್ತಿದ್ದ ಪೂಜಾ, 10 ಜನರನ್ನು ಕರೆದುಕೊಂಡು ಬರುತ್ತಾರೆ ಎನ್ನಲಾಗಿದೆ, ಜೊತೆಗೆ ಸಿನಿಮಾ ಸಂಭಾವನೆಯನ್ನು ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದಾರೆ, ಇವರ ಸಂಭಾವನೆ ಬಗ್ಗೆ ತಮಿಳು ನಿರ್ದೇಶಕ ಆರ್.ಕೆ.ಸೆಲ್ವಮಣಿ ಕೋಪಗೊಂಡು ಪ್ರತಿಕ್ರಿಯೆ ನೀಡಿದ್ದರು. ಅದರ ಜೊತೆಗೆ ಈಗ ಪೂಜಾ ಹೆಗ್ಡೆ ಅವರಿಗೆ ಕನ್ಸ್ಟ್ರಕ್ಷನ್ ಕಂಪನಿಯ ಮ್ಯಾನೇಜರ್ ಶಾಕ್ ನೀಡಿದ್ದಾರೆ, ಪೂಜಾ ಹೆಗ್ಡೆ ಅವರ ಜೊತೆಗೆ ಬರುತ್ತಿದ್ದವರ ಖರ್ಚು ವೆಚ್ಚದ ಬಿಲ್ ಅನ್ನು ಪೂಜಾ ಅವರ ಮನೆಗೆ ಕಳಿಸಿದ್ದು, ಬಿಲ್ ಮೊತ್ತ ನೋಡಿ ಶಾಕ್ ಆಗಿದ್ದಾರಂತೆ ಪೂಜಾ. ಬೀಸ್ಟ್ ಸಿನಿಮಾ ನಿರ್ಮಾಪಕರಿಗೆ ಈ ಸಿಬ್ಬಂದಿಗಳ ಖರ್ಚು ಒಂದು ರೀತಿ ಹೊರೆಯಾಗಿತ್ತು, ಇದೀಗ ಆ ಹೊರೆಯನ್ನು ನಿರ್ಮಾಪಕರು ಇಳಿಸಿಕೊಂಡಿದ್ದಾರೆ.
Comments are closed.