ಮತ್ತೆ ವಾಪಸ್ಸು ಬರುತ್ತಿರುವ ಮಗಳು ಜಾನಕಿ ಧಾರವಾಹಿ ಎಲ್ಲಿ ಪ್ರಸಾರವಾಗಿದೆ ಗೊತ್ತೇ?? ಅಭಿಮಾನಿಗಳಿಗೆ ಇದು ನಿಜಕ್ಕೂ ನಿರಾಸೆ ಎಂದ ಗೃಹಿಣಿಯರು.
ಕನ್ನಡ ಕಿರುತೆರೆಯಲ್ಲಿ ಭಾರಿ ಫೇಮಸ್ ಆಗಿದ್ದ ಧಾರವಾಹಿ ಮಗಳು ಜಾನಕಿ. ಟಿ.ಎನ್.ಸೀತಾರಾಮ್ ಅವರು ನಿರ್ದೇಶನ ಮಾಡಿದ್ದ ಈ ಧಾರವಾಹಿ ಅಪಾರವಾದ ಅಭಿಮಾನಿ ಬಳಗ ಗಳಿಸಿತ್ತು. ಸ್ಪಷ್ಟವಾದ ಅದ್ಭುತವಾದ ಕನ್ನಡ ಸಂಭಾಷಣೆ, ಆಸಕ್ತಿದಾಯಕ ಕಥೆ, ಇವುಗಳಿಂದ ಮಗಳು ಜಾನಕಿ ಧಾರವಾಹಿ ವೀಕ್ಷಕರ ಬಳಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿತ್ತು. 2020ರಲ್ಲಿ ಶುರುವಾಸ ಕೋವಿಡ್ ಸಮಯದಲ್ಲಿ ಹಲವು ಧಾರವಾಹಿಗಳು ಪ್ರಸಾರ ನಿಲ್ಲಿಸಿದವು, ಆ ಸಮಯದಲ್ಲಿ ಮಗಳು ಜಾನಕಿ ಧಾರವಾಹಿ ಸಹ ಅರ್ಧಕ್ಕೆ ನಿಂತಿತ್ತು.
ಚೆನ್ನಾಗಿ ಮೂಡಿಬರುತ್ತಿದ್ದ ಧಾರವಾಹಿ ಅರ್ಧಕ್ಕೆ ನಿಂತಿದ್ದು, ವೀಕ್ಷಕರಿಗೂ ಸಹ ಬಹಳ ಬೇಜಾರಾಗಿತ್ತು, ಮಗಳು ಜಾನಕಿ ಧಾರವಾಹಿ ಮತ್ತೆ ಮುಂದುವರಿಯಬೇಕು, ಜಾನಕಿ ಕಥೆ ಮುಂದಕ್ಕೆ ಸಾಗಬೇಕು ಎಂದು ವೀಕ್ಷಕರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಆ ಎಲ್ಲಾ ವೀಕ್ಷಕರಿಗೂ ಸಿಹಿ ಸುದ್ದಿ ಸಿಕ್ಕಿದೆ, ಮಗಳು ಜಾನಕಿ ಧಾರವಾಹಿ ಮರುಪ್ರಸಾರವಾಗಲಿದೆ, ಆದರೆ ಟಿವಿಯಲ್ಲಿ ಬರುವುದಿಲ್ಲ. ಬದಲಾಗಿ ಸೀತಾರಾಮ್ ಅವರ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಜಾನಕಿಯ ಮುಂದಿನ ಅಧ್ಯಾಯ ಶುರುವಾಗುವುದಂತೂ ಖಚಿತವಾಗಿದೆ. ಆದರೆ ಈ ಬಾರಿ ಮಗಳು ಜಾನಕಿಯಲ್ಲಿ ನಟಿಸಿದ್ದಾ ಗಾನವಿ ಲಕ್ಷ್ಮಣ್ ಅವರು ಇರುವುದಿಲ್ಲ ಎನ್ನಲಾಗುತ್ತಿದೆ.
ಆದರೆ ವೀಕ್ಷಕರು ಫ್ರೀಯಾಗಿ ಮಗಳು ಜಾನಕಿ ಧಾರವಾಹಿಯನ್ನು ನೋಡಲು ಆಗುವುದಿಲ್ಲ, ಇಂತಿಷ್ಟು ಎಂದು ಹಣ ಕಟ್ಟಿ ಮಗಳು ಜಾನಕಿ ಧಾರವಾಹಿ ನೋಡಬೇಕು ಎನ್ನುವ ಮಾಹಿತಿ ಸಿಕ್ಕಿದೆ. ಮಗಳು ಜಾನಕಿ ಚಿತ್ರೀಕರಣ ಸಹ ಈಗಾಗಲೇ ಈ ತಿಂಗಳು ಶುರುವಾಗಿದ್ದು, ಬಹುಶಃ ಆಗಸ್ಟ್ ತಿಂಗಳಿನಿಂದ ಧಾರವಾಹಿಯ ಪ್ರಸಾರ ಶುರುವಾಗಲಿದೆಯಂತೆ. ಮಗಳು ಜಾನಕಿ ಒಂದೇ ಅಲ್ಲದೆ, ಕತೆಗಾರ, ಮಾಯಾ ಮಾಡಿದ ಮರ್ಡರ್ ಧಾರವಾಹಿ ಸಹ ಪ್ರಸಾರವಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಾಗಲೇ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾಯಾಮೃಗ ಮತ್ತು ಮುಕ್ತ ಮುಕ್ತ ಶೋ ಶುರುವಾಗಿದೆ. ಆದರೆ ಧಾರವಾಹಿ ಅಭಿಮಾನಿಗಳು ಮಾತ್ರ ದುಡ್ಡು ಕೊಟ್ಟು ಧಾರವಾಹಿ ವೀಕ್ಷಿಸಲು ಬೇಸರ ವ್ಯಕ್ತಪಡಿಸಿದ್ದಾರೆ.
Comments are closed.