ಬಿಗ್ ನ್ಯೂಸ್: ಬಾಲಿವುಡ್ ನ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಸೋನಾಲಿ ಬೇಂದ್ರೆ, ಅಸಲಿಗೆ ಬಾಲಿವುಡ್ ಗೆ ಎಲ್ಲಿಯವರೆಗೂ ಲಿಂಕ್ ಇದೆ ಗೊತ್ತೇ?
ನಟಿ ಸೋನಾಲಿ ಬೇಂದ್ರೆ ಇತ್ತೀಚಿಗೆ ಭೂಗತಲೋಕದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ತಮಗೆ ಎಷ್ಟೋ ಸಿನಿಮಾ ಆಫರ್ ಗಳು ಗಳು ಕೈತಪ್ಪಲು ಭೂಗತಲೋಕದ ಕಾರಣ ಎಂದಿದ್ದಾರೆ. ನಟಿ ಸೋನಾಲಿ ಬೇಂದ್ರೆ ಒಂದು ಕಾಲದ ಬಾಲಿವುಡ್ ಖ್ಯಾತ ನಟಿ 90ರ ದಶಕದಲ್ಲಿ ಅವರು ಹೆಸರುಗಳಿಸಿದ್ದರು. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆ ಹಂಚಿ ಕೊಂಡಿದ್ದರು. 2013 ನಂತರ ಅವರು ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ, ಆದರೆ ಈಗ ಅವರು ಒಂದು ವೆಬ್ ಸೀರಿಸ್ ಅಲ್ಲಿ ನಟಿಸುವ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಇದರಲ್ಲಿ ಆಮಿನಾ ಖುರೇಶಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಪ್ರಚಾರದ ವೇಳೆ ಅವರು ಒಂದು ಶಾಕಿಂಗ್ ವಿಚಾರದ ಕುರಿತು ಮಾತನಾಡಿದ್ದಾರೆ. ಬಾಲಿವುಡ್ಗೆ ಭೂಗತಲೋಕದ ಸಂಪರ್ಕ ಇತ್ತು ಎಂದು ಅವರು ಬಾಯಿಬಿಟ್ಟಿದ್ದಾರೆ. ಸೋನಾಲಿ ಬೇಂದ್ರೆ ಅವರು ನಟಿಸಿದ ಮೊದಲ ಚಿತ್ರ ಆಗ್. 1994 ರಲ್ಲಿ ಚಿತ್ರ ತೆರೆಕಂಡಾಗ ಅವರಿಗೆ ಕೇವಲ 19 ವರ್ಷ. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ನಟಿಯಾಗಿ ಗುರುತಿಸಿಕೊಂಡರು. ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. ಈ ಸಮಯದಲ್ಲಿ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಕೈತಪ್ಪಿ ಹೋಗಿತ್ತು, ಅದಕ್ಕೆ ಕಾರಣ ಭೂಗತಲೋಕ ಎಂದು ಅವರು ಹೇಳಿಕೊಂಡಿದ್ದಾರೆ. ಒಳ್ಳೆಯ ನಿರ್ಮಾಣ ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹಾಕಿದರೆ ಬೇರೆ ಮೂಲಗಳಿಂದಲೂ ಹಣ ಹರಿದು ಬರುತ್ತಿತ್ತು ಎಂದು ಹೇಳಿಕೆ ನೀಡುವ ಮೂಲಕ ಅವರು ಬಾಲಿವುಡ್ ಗೆ ಭೂಗತ ಲೋಕದ ಸಂಪರ್ಕವಿತ್ತು ಎಂದಿದ್ದಾರೆ.
ಆಗ ನನಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿದ್ದವು ಆದರೆ ಎಷ್ಟು ಆಫರ್ಗಳು ಚಿತ್ರದಲ್ಲಿ ನಟಿಸುವ ಮೊದಲೇ ತಪ್ಪಿಹೋಗುತ್ತಿತ್ತು ಎಂದಿದ್ದಾರೆ. ನಿರ್ಮಾಪಕರಿಗೆ ಬೇರೆ ಕಡೆಯಿಂದ ಬುಲಾವ್ ಬರುತ್ತಿತ್ತು. ಒತ್ತಡಕ್ಕೆ ಮಣಿದ ನಿರ್ಮಾಪಕರು ನನ್ನ ಬದಲಾಗಿ ಬೇರೆಯವರನ್ನು ಆ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ಹಾಗೂ ಚಿತ್ರತಂಡ ನಾವು ಒತ್ತಾಡದಲ್ಲಿದ್ದೇವೆ ನಾವು ಏನು ಮಾಡಲಾಗುವುದಿಲ್ಲ ಎಂದು ನನಗೆ ಹೇಳುತ್ತಿದ್ದರು ಎಂದು ಹೇಳುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಭೂಗತಲೋಕದ ಸಂಪರ್ಕ ಇತ್ತು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
Comments are closed.