Neer Dose Karnataka
Take a fresh look at your lifestyle.

ತನ್ನ ಮೂರನೇ ಪತ್ನಿಯನ್ನು ದೂರ ಮಾಡಿ ಮತ್ತೊಂದು ಮದುವೆಯಾಗಲು ನರೇಶ್ ರವರು ಏನು ಮಾಡಿದ್ದಾರೆ ಗೊತ್ತೇ?? ಯಪ್ಪಾ ಹೀಗೂ ಮಾಡ್ತಾರಾ??

ತೆಲುಗಿನ ಖ್ಯಾತ ನಟ ನರೇಶ್ ಅವರು ಈಗಾಗಲೇ ಮೂರು ಮದುವೆ ಆಗಿ, ಚಂದನವನದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಜೊತೆ ನಾಲ್ಕನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ಜೋರಾಗುಗೆ ಸದ್ದು ಮಾಡುತ್ತಿದೆ. ನರೇಶ್ ಅವರ ಬಗ್ಗೆ ಸಾಕಷ್ಟು ವಿಚಾರಗಳು ಸಹ ಹೊರಬರುತ್ತಿದೆ. ಪವಿತ್ರಾ ಲೋಕೇಶ್ ಅವರು ಈಗಾಗಲೇ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರೊಡನೆ ಎರಡನೇ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಪವಿತ್ರಾ ಲೋಕೇಶ್ ಅವರು ಮೂರನೆ ಬಾರಿ ನರೇಶ್ ಅವರೊಡನೆ ಮದುವೆ ಆಗುತ್ತಾರೆ ಎನ್ನುವ ವಿಚಾರ ಸುದ್ದಿಯಾಗಿತ್ತು.

ಪವಿತ್ರಾ ಲೋಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ 20 ವರ್ಷಕ್ಕಿಂತ ಹೆಚ್ಚು ಸಮಯದಿಂದ ಸಕ್ರಿಯರಾಗಿದ್ದಾರೆ. 150ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಹ ನಟಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ನರೇಶ್ ಅವರ ಜೊತೆಗೆ ಸಹ ಪವಿತ್ರಾ ಲೋಕೇಶ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ಆ ಸಮಯದಿಂದಲೇ ಇಬ್ಬರ ನಡುವೆ ಸ್ನೇಹ, ಪ್ರೇಮ ಶುರುವಾಗಿದೆ ಎನ್ನಲಾಗುತ್ತಿದೆ. ಇವರಿಬ್ಬರು ಕೆಲವು ವರ್ಷಗಳಿಂದ ಲವಿನ್ ರಿಲೇಶನ್ಷಿಪ್ ನಲ್ಲಿದ್ದು ಯಾರಿಗೂ ಗೊತ್ತಾಗದ ಹಾಗೆ ನರೇಶ್ ಅವರೊಡನೆ ಪವಿತ್ರ ಲೋಕೇಶ್ ಅವರ ಮದುವೆ ನಡೆದಿದೆ ಎನ್ನಲಾಗುತ್ತಿದೆ.

ಈ ವಿಚಾರದ ಬಗ್ಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಇಷ್ಟು ದಿನಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ರಮ್ಯಾ ರಘುಪತಿ ಅವರು ನರೇಶ್ ಅವರ ಬಗ್ಗೆ ಮಾತನಾಡಿದ್ದು, ಹಲವು ಶಾಕಿಂಗ್ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಮ್ಯಾ ರಘುಪತಿ ಕನ್ನಡತಿ ಆಗಿದ್ದು, ರಾಜಕೀಯ ಮತ್ತು ಉದ್ಯಮದಲ್ಲಿ ಅವರ ಕುಟುಂಬ ತೊಡಗಿಕೊಂಡಿತ್ತು. ಸ್ವತಃ ರಮ್ಯಾ ಅವರು ಸಹ ಉದ್ಯಮಿ ಆಗಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ರಮ್ಯಾ ಅವರು, ನರೇಶ್ ಅವರ ವ್ಯಕ್ತಿತ್ವ ಹೇಗಿತ್ತು, ತಮ್ಮ ವಿರುದ್ಧ ನರೇಶ್ ಅವರು ಏನೆಲ್ಲಾ ಹುನ್ನಾರ ಮಾಡಿದ್ದರು ಎನ್ನುವುದನ್ನು ತಿಳಿಸಿದ್ದಾರೆ.

ರಮ್ಯಾ ಅವರು ಹೇಳಿರುವ ಪ್ರಕಾರ, ನರೇಶ್ ಅವರಿಗೆ ಹೆಣ್ಣುಮಕ್ಕಳ ವೀಕ್ನೆಸ್ ಇತ್ತು ಎಂದಿದ್ದಾರೆ. ಪವಿತ್ರಾ ಲೋಕೇಶ್ ಅವರೊಡನೆ 6 ವರ್ಷಗಳಿಂದ ಇದ್ದರು, ಒಂದೆರಡು ವರ್ಷಗಳಿಂದ ವಿಚ್ಛೇದನ ಬೇಕು ಎಂದು ರಮ್ಯಾ ರಘುಪತಿ ಅವರಿಗೂ ಪೀಡಿಸುತ್ತಿದರಂತೆ. ನನಗೆ ಸ್ವಾತಂತ್ರ್ಯ ಬೇಕು ಎಂದು ಹೇಳುತ್ತಿದ್ದರಂತೆ. ಆದರೆ ರಮ್ಯಾ ಅವರು ವಿಚ್ಛೇದನಕ್ಕೆ ಒಪ್ಪದ ಕಾರಣ, ರಮ್ಯಾ ಅವರ ವಿರುದ್ಧವೇ ಕುತಂತ್ರ ಮಾಡಿದ್ದರಂತೆ. ರಮ್ಯಾ ಅವರು ಅಗರಬತ್ತಿ ಉದ್ಯಮ ಹೊಂದಿದ್ದಾರೆ. ಈ ಉದ್ಯಮ ನಡೆಸಲು ಕೆಲವು ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.

ಸಾಲ ಪಡೆದ ಹಣವನ್ನು ಸರಿಯಾಗಿ ಕಟ್ಟುತ್ತಿದ್ದರು. ಆದರೆ ನರೇಶ್, ರಮ್ಯಾ ಅವರ ವಿರುದ್ಧ ಪಿತೂರಿ ಮಾಡಿ, ಆಕೆ ಯಾರ ಬಲಿಯಿಂದ ಹಣವನ್ನು ಸಾಲ ಪಡೆದಿದ್ದರು ಅವರನ್ನು ಸಂಪರ್ಕಿಸಿ, ರಮ್ಯಾ ಅವರಿಂದೆಲ್ಲಾ 500 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ, ಅದನ್ನು ಹಿಂದಿರುಗಿ ನೀಡಿಲ್ಲ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರು. ಮಾಧ್ಯಮಗಳಲ್ಲಿ ಸಹ ಈ ವರದಿ ಪ್ರಸಾರವಾಗಿತ್ತು. ರಮ್ಯಾ ಅವರಿಗೆ ಇದರಿಂದಾಗಿ ಬಹಳ ತೊಂದರೆಯಾಗಿತ್ತು, ಸಾಲ ಕೊಟ್ಟಿದ್ದವರು ಬೇಗ ಹಣ ಪಾವತಿ ಮಾಡಬೇಕು ಎಂದು ಬಲವಂತ ಮಾಡಲು ಶುರು ಮಾಡಿದರು. ಕೆಲಸಗಾರರು ಕೆಲಸ ಬಿಟ್ಟು ಹೋದರು, ಸಂಬಂಧಿಕರನ್ನು ಕಳೆದುಕೊಂಡರು, ಸಮಾಜದಲ್ಲಿ ಅಪಮಾನ ಎದುರಿಸಿದರು.

ನರೇಶ್ ಅವರಿಂದ 5 ಜನರು ರಮ್ಯಾ ಅವರ ವಿರುದ್ಧವಾಗಿ ಸಾಕ್ಷಿಯನ್ನು ಸಹ ಹೇಳಿದ್ದರು. ಆದರೆ ಎಲ್ಲವನ್ನು ಪರಿಶೀಲಿಸಿದಾಗ, ಸುಳ್ಳು ಸಾಕ್ಷಿ ಹೇಳಿದವರು ತಮ್ಮ ತಪ್ಪನ್ನು ಒಪ್ಪಿಕೊಂಡು, ನರೇಶ್ ಅವರಿಂದಲೇ ಸುಳ್ಳು ಹೇಳಿದ್ದು ಎಂದಿದ್ದಾರೆ, ಹಾಗೆಯೇ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರೆ ಎಂದು ಸಹ ಹೇಳಿದ್ದಾರೆ. ಈ ಮೂಲಕ ನರೇಶ್ ಅವರು ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಿ ಅವರ ಜೊತೆಗಿರಲು ಮೂರನೇ ಹೆಂಡತಿ ರಮ್ಯಾ ರಘುಪತಿ ಅವರ ವಿರುದ್ಧ ಏನೆಲ್ಲಾ ಪಿತೂರಿ ಮಾಡಿದ್ದರು, ಎನ್ನುವುದು ಬಯಲಾಗಿದೆ. ಸ್ವತಃ ರಮ್ಯಾ ಅವರೇ ಈ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ.

Comments are closed.