ಕೊನೆಗೂ ನರೇಶ್ ರವರ ಜೊತೆ ಮದುವೆಯ ಕುರಿತು ಪವಿತ್ರ ಲೋಕೇಶ್ ಮೊದಲ ಬಾರಿಗೆ ಹೇಳಿದ್ದೇನು ಗೊತ್ತೇ??
ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರೊಡನೆ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಇವರಿಬ್ಬರು ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ, ಆದರೆ ನರೇಶ್ ಅವರು ಬೇರೆ ರೀತಿ ಹೇಳಿಕೆ ನೀಡಿ, ನರೇಶ್ ಅವರ 3ನೇ ಪತಿ ರಮ್ಯಾ ರಘುಪತಿ ಅವರು ಮತ್ತೊಂದು ರೀತಿ ಹೇಳಿಕೆ ನೀಡಿದ್ದರು. ಆದರೆ ಪವಿತ್ರಾ ಲೋಕೇಶ್ ಅವರು ಈವರೆಗೂ ಈ ಮದುವೆ ವಿಚಾರದ ಬಗ್ಗೆ ಏನು ಹೇಳಿಕೆ ನೀಡಿರಲಿಲ್ಲ. ನಿನ್ನೆಯಷ್ಟೇ ಖಾಸಗಿ ವಾಹಿನಿ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ ಅವರು ಮಾತನಾಡಿರುವುದು ತಿಳಿದುಬಂದಿದ್ದು, ಪವಿತ್ರಾ ಲೋಕೇಶ್ ಅವರು ಬೇರೆ ರೀತಿಯಲ್ಲೇ ಮಾತನಾಡಿದ್ದಾರೆ. ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಪವಿತ್ರಾ ಲೋಕೇಶ್ ಅವರು ಹೇಳಿರುವ ಪ್ರಕಾರ, ನರೇಶ್ ಅವರ ಕುಟುಂಬಕ್ಕೆ ಪವಿತ್ರಾ ಲೋಕೇಶ್ ಅವರು ಒಪ್ಪಿಗೆ ಆಗುತ್ತಾರಂತೆ. ನರೇಶ್ ಅವರಲ್ಲಿ ಯಾವುದೇ ಮೋಸ ಕಾಣಿಸಲಿಲ್ಲ ಎನ್ನುತ್ತಾರೆ ಪವಿತ್ರಾ. ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರ ಬಗ್ಗೆ ಮಾತನಾಡಿರುವ ಪವಿತ್ರಾ ಲೋಕೇಶ್ ಅವರು, “ಅದು ಅವರ ಜೀವನ, ಅವರಿಗೆ ಹೇಗೆ ಸರಿ ಅನ್ನಿಸುತ್ತದೆ ಆ ರೀತಿ ಮಾಡಲಿ. ಅವರು ಸರಿ ಇದ್ದಿದ್ದರೆ ಕುಟುಂಬ ಅವರ ಜೊತೆಗೆ ನಿಲ್ಲುತ್ತಿತ್ತು, ಅವರನ್ನು ನಾನು ದೂರದಿಂದ ನೋಡಿದ್ದೇನೆ. ನನ್ನ ವಿರುದ್ಧ ಫೈಟ್ ಮಾಡುತ್ತಿರುವವರಿಗೆ ನಾನು ಆಲ್ ದಿ ಬೆಸ್ಟ್ ಎಂದು ಹೇಳುತ್ತೇನೆ ಅಷ್ಟೇ. ಒಂದು ವೇಳೆ ನನಗೆ ಸರಿ ಇಲ್ಲ ಎನ್ನಿಸಿದರೆ ನಾನು ನನ್ನ ಗಂಡನ ಜೊತೆಗೆ ಇರುವುದಿಲ್ಲ. ನಾನು ಈ ರೀತಿ, ಆಕೆ ಆ ರೀತಿ..ಎಂದಿದ್ದಾರೆ ಪವಿತ್ರಾ ಲೋಕೇಶ್.
ಇನ್ನು ಮಾತನಾಡಿರುವವ ಅವರು.. ನಾನು ಮಹೇಶ್ ಬಾಬು ಅವರ ತಂದೆ ಕೃಷ್ಣ ಮತ್ತು ಅವರ ಕುಟುಂಬದ ಜೊತೆಗೆ ತೋಟದ ಮನೆಯಲ್ಲೇ ಇದ್ದೇನೆ. ಅವರೆಲ್ಲರೂ ನನ್ನ ಜೊತೆ ಇದ್ದಾರೆ. ಆಕೆ ಮಾತ್ರ ಅಲ್ಲಿಲ್ಲ. ನರೇಶ್ ಅವರು ಮೋಸ ಮಾಡುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಸುಚೇಂದ್ರ ಪ್ರಸಾದ್ ಅವರೊಡನೆ ನಾನು ಮದುವೆಯಾಗಿಲ್ಲ, ಅದರ ಡಾಕ್ಯುಮೆಂಟ್ ಕೂಡ ನನ್ನ ಬಳಿ ಇಲ್ಲ. ನಾನು ಸುಚೇಂದ್ರ ಪ್ರಸಾದ್ ಅವರೊಡನೆ ಲಿವ್ ಇನ್ ರಿಲೇಶನ್ಷಿಪ್ ನಲ್ಲಿದ್ದೆ. ತುಂಬಾ ಸಮಯದಿಂದ ನಾನು ಮತ್ತು ಸುಚೇಂದ್ರ ಪ್ರಸಾದ್ ಅವರು ದೂರವಾಗಿದ್ದೇವೆ. ಆದರೆ ಈಗಲೂ ಕೂಡ ಅವರ ಮನೆಯವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ನನ್ನ ಜೊತೆ ಮಾತನಾಡುತ್ತಾರೆ. ನಾನು ತುಂಬಾ ಸಂತೋಷವಾಗಿದ್ದೇನೆ, ನನಗೆ ಯಾವುದೇ ಡಿಮ್ಯಾಂಡ್ ಗಳು ಇಲ್ಲ..ಎಂದಿದ್ದಾರೆ ನಟಿ ಪವಿತ್ರಾ ಲೋಕೇಶ್
Comments are closed.