Neer Dose Karnataka
Take a fresh look at your lifestyle.

ನಿಮ್ಮ ಮನೆಗೆ ಲಕ್ಷ್ಮಿ ಬರುತ್ತಿಲ್ಲವೇ? ಹಾಗಿದ್ದರೆ, ನಿಮಗೆ ಈ ಚಿಕ್ಕ 6 ಅಭ್ಯಾಸಗಳು ಇವೆ ಎಂದರ್ಥ. ನಿಲ್ಲಿಸಿ ನೋಡಿ, ಹಣದ ಮಳೆಯೇ ಬರುತ್ತದೆ. ಯಾವ್ಯಾವು ಗೊತ್ತೇ?

ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು ಚಾಣಕ್ಯ, ಇವರು ಅಪರೂಪದ ಜ್ಞಾನಿ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜತಂತ್ರಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿರುವವರು. ಭಾರತ ಇತಿಹಾಸದ ದೊಡ್ಡ ವಿದ್ವಾಂಸರು ಎಂದು ಚಾಣಕ್ಯನನ್ನು ಪರಿಗಣಿಸಲಾಗಿದೆ. ಚಾಣಕ್ಯನ ನೀತಿಯಲ್ಲಿ ಇವರು ತಿಳಿಸಿರುವ ವಿಚಾರಗಳು ಈಗಿನ ಕಾಲಕ್ಕೂ ಉಪಯೋಗ ಆಗುವಂಥದ್ದು. ಚಾಣಕ್ಯನ ನೀತಿಯಲ್ಲಿ ಎಲ್ಲ ವಿಚಾರಗಳಿಗೂ ಉತ್ತರ ಸಿಗುತ್ತದೆ. ನಾವೆಲ್ಲರೂ ಜೀವನದಲ್ಲಿ ಕಷ್ಟಪಡುವುದು ಚೆನ್ನಾಗಿ ಹಣ ಗಳಿಸಿ, ಒಳ್ಳೆಯ ಜೀವನ ನಡೆಸಲು. ಎಲ್ಲರೂ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ನಿಮ್ಮ ಮನೆಯಲ್ಲಿ ನೀವು ಮಾಡುವ ಕೆಲಸಗಳು, ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸದೆ ಇರಲು ಕಾರಣ ಆಗಬಹುದು. ಹಾಗಾಗಿ ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂದರೆ, ಈ ಕೆಲಸಗಳನ್ನು ಮಾಡಿ..

ಮನೆಯನ್ನು ಯಾವಾಗಲೂ ಶ್ರುಭವಾಗಿ ಇಡಿ :- ಕೊಳಕು ಇರುವ ಜಾಗದಲಿ ಲಕ್ಷ್ಮಿದೇವಿ ನೆಲೆಸಲು ಇಷ್ಟಪಡುವುದಿಲ್ಲ. ಹಗಾಗಿ ನಿಮ್ಮ ಮನೆಯನ್ನು ಯಾವಾಗಲೂ ಕ್ಲೀನ್ ಆಗಿಡಲು ಪ್ರಯತ್ನ ಮಾಡಿ. ಶುಭ್ರವಾಗಿರುವ ಜಾಗದಲ್ಲಿ ಲಕ್ಷ್ಮೀದೇವಿ ಸದಾ ಇರುತ್ತಾಳೆ. ಹಾಗಾಗಿ ಮನೆಯನ್ನು ಶುಭ್ರವಾಗಿ ಇಡಿ.
ಹಲ್ಲುಗಳನ್ನು ಸ್ವಚ್ಛವಾಗಿಡಿ :- ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು, ಹಲ್ಲುಗಳನ್ನು ಸ್ವಚ್ಛವಾಗಿ ಇಡುವುದು ಬಹಳ ಮುಖ್ಯ ಆಗುತ್ತದೆ. ಬಾಯಿ ಮತ್ತು ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳದೆ ಇರುವವರಿಗೆ ಲಕ್ಷ್ಮೀದೇವಿ ಒಲಿಯುವುದಿಲ್ಲ ಎನ್ನುತ್ತಾರೆ. ಇದರಿಂದ ನಿಮಗೆ ಹಣ ನಷ್ಟವಾಗಬಹುದು.
ಹಿತಮಿತವಾಗಿ ಆಹಾರ ಸೇವಿಸಿ :- ಲಕ್ಷ್ಮೀದೇವಿಯು ಹಸಿದವರಿಗಿಂತ ಹೆಚ್ಚಾಗಿ ತಿನ್ನುವವರ ಜೊತೆಗೆ ಇರಲು ಬಯಸುವುದಿಲ್ಲ. ಇದರಿಂದ ನಿಮಗೆ ಬಡತನ ಬರಬಹುದು. ಹಾಗಾಗಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು, ಆದಷ್ಟು ಹಿತಮಿತವಾಗಿ ತಿನ್ನಿ.

ಕಹಿಯಾಗಿ ಮಾತನಾಡಬರದು :- ತೀಕ್ಷ್ಣವಾಗಿ ಮಾತನಾಡುವ ಸ್ವಭಾವ ಇರುವವರ ಮನೆಯಲ್ಲಿ ಲಕ್ಷ್ಮೀದೇವಿ ನೆಲಸಲು ಇಷ್ಟಪಡುವುದಿಲ್ಲ. ಹಾಗಾಗಿ ಎಲ್ಲರ ಜೊತೆ ಚೆನ್ನಾಗಿರಿ. ಕಹಿಯಾಗಿ ಮಾತನಾಡುವುದರಿಂದ ಸ್ನೇಹಿತರು ಹಾಗೂ ಸಂಬಂಧಿಕರನ್ನು ನೀವು ಕಳೆದುಕೊಳ್ಳಬಹುದು.
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೆ ಇರುವುದು :- ಲಕ್ಷ್ಮೀದೇವಿ ಮನೆಗೆ ಬರುವುದು ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ. ಹಾಗಾಗಿ ಆ ಸಮಯದಲ್ಲಿ ಹೆಚ್ಚು ನಿದ್ದೆ ಮಾಡಬಾರದು. ಹೆಚ್ಚು ನಿದ್ದೆ ಮಾಡುವವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.
ಸುಳ್ಳು ಹೇಳುವುದು ಹಾಗೂ ಅಪ್ರಮಾಣಿಕ ಹಣ :- ಕೆಲವು ಜನರು ಹೆಚ್ಚು ಹಣ ಗಳಿಸಲು, ಅಪ್ರಮಾಣಿಕತೆಯ ದಾರಿಯಲ್ಲಿ, ಸುಳ್ಳು ಹೇಳಿ ಹಣ ಸಂಪಾದನೆ ಮಾಡುತ್ತಾರೆ. ಆ ರೀತಿ ಮಾಡುವವರ ಮಮೆಯ ಲಕ್ಷ್ಮಿದೇವಿ ನೆಲೆಸುವುದಿಲ್ಲ ಎಂದು ಚಾಣಕ್ಯನ ನೀತಿಯಲ್ಲಿ ಹೇಳಲಾಗಿದೆ.

Comments are closed.