ಮೊದಲ ಬಾರಿಗೆ ಮೌನ ಮುರಿದ ಸುಚೇಂದ್ರ ಪ್ರಸಾದ್, ನರೇಶ್ ರವರ ಮೂರನೇ ಪತ್ನಿ ಕುರಿತು ಕನಿಕರ ತೋರಿಸಿ ಹೇಳಿದ್ದೇನು ಗೊತ್ತೇ?
ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರೊಡನೆ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಇವರಿಬ್ಬರು ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ, ಆದರೆ ನರೇಶ್ ಅವರು ಬೇರೆ ರೀತಿ ಹೇಳಿಕೆ ನೀಡಿ, ನರೇಶ್ ಅವರ 3ನೇ ಪತಿ ರಮ್ಯಾ ರಘುಪತಿ ಅವರು ಮತ್ತೊಂದು ರೀತಿ ಹೇಳಿಕೆ ನೀಡಿದ್ದರು. ಆದರೆ ಪವಿತ್ರಾ ಲೋಕೇಶ್ ಅವರು ಈವರೆಗೂ ಈ ಮದುವೆ ವಿಚಾರದ ಬಗ್ಗೆ ಏನು ಹೇಳಿಕೆ ನೀಡಿರಲಿಲ್ಲ. ನಿನ್ನೆಯಷ್ಟೇ ಖಾಸಗಿ ವಾಹಿನಿ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ ಪವಿತ್ರಾ ಲೋಕೇಶ್ ಅವರು ಮಾತನಾಡಿ, ರಮ್ಯಾ ರಘುಪತಿ ಅವರ ಬಗ್ಗೆ ಕೆಲವು ಮಾತುಗಳನ್ನಾಡಿದ್ದರು.
ಇನ್ನು ರಮ್ಯಾ ರಘುಪತಿ ಅವರು ಸಹ ಮಾಧ್ಯಮದ ಎದುರು ಬಂದು, ಪವಿತ್ರಾ ಲೋಕೇಶ್ ಅವರ ವಿರುದ್ಧವಾಗಿ ಮಾತನಾಡಿದ್ದರು. ಆದರೆ ಪವಿತ್ರಾ ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಅವರು ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಸುಚೇಂದ್ರ ಪ್ರಸಾದ್ ಅವರು ಖಾಸಗಿ ವಾಹಿನಿಯ ಪ್ರತಿನಿಧಿಯೊಬ್ಬರ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಅದರಲ್ಲಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಮಾತನಾಡಿ, ರಮ್ಯಾ ರಘುಪತಿ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಈಗಾಗಲೇ ಅವರ ಜೊತೆಗೆ ಮಾತನಾಡಿದ್ದೇನೆ, ಅವರಿ ನನ್ನ ಜೊತೆ ಅಂಥದ್ದೇನು ಇಲ್ಲ ಎಂದು ಹೇಳಿದರು. ನಾನು ಈಗ ಏನು ಮಾಡಲಾಗದ ಪರಿಸ್ಥಿತಿಯಲ್ಲಿದ್ದೇನೆ. ನನ್ನ ಮಕ್ಕಳಿಗೂ ಇದರ ಬಗ್ಗೆ ಅರ್ಥ ಮಾಡಿಸಿದ್ದೇನೆ.
ಇದು ಹೆಚ್ಚು ದಿನ ನಡೆಯುವುದಿಲ್ಲ. ಇವರ ವಿಚಾರದಲ್ಲಿ ನಾನು ಹಿಂಸೆ ಅನುಭವಿಸಿದ್ದೇನೆ. ಆತ ಲಂಪಟ, ಈಕೆ ಲಪಟಾಯಿಸವವಳು 6 ತಿಂಗಳಿಗಿಂತ ಹೆಚ್ಚಿನ ಸಮಯ ಇದು ನಡೆಯುವುದಿಲ್ಲ..”ಎಂದಿದ್ದಾರೆ ಸುಚೇಂದ್ರ ಪ್ರಸಾದ್. ಜೊತೆಗೆ ರಮ್ಯಾ ರಘುಪತಿ ಅವರ ಬಗ್ಗೆ ಸಹ ಮಾತನಾಡಿದ್ದು, “ಅವರನ್ನು ನೋಡಿದರೆ, ಅವರ ಬಗ್ಗೆ ನೆನೆದರೆ ಬಹಳ ನೋವಾಗುತ್ತದೆ. ನನ್ನ ಕರುಳು ಹಿಂಡುತ್ತದೆ. ಆದರೆ, ನಾನು ಈಗ ನಿಸ್ಸಹಾಯಕ ಸ್ಥಿತಿಯಲ್ಲಿದ್ದೇನೆ. ಏನು ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ಆಕೆಯ ನೋವು, ಕಷ್ಟ ನನಗೆ ಅರ್ಥವಾಗುತ್ತದೆ..”ಎಂದು ಹೇಳುವ ಮೂಲಕ ರಮ್ಯಾ ರಘುಪತಿ ಅವರ ಬಗ್ಗೆ ಮಾತನಾಡಿದ್ದಾರೆ ಸುಚೇಂದ್ರ ಪ್ರಸಾದ್.
Comments are closed.