ಬಿಗ್ ನ್ಯೂಸ್: ಬಿಗ್ ಬಾಸ್ ಪ್ರಿಯರಿಗೆ ಕಿಚ್ಚನ ಕಡೆಯಿಂದ ಸಿಹಿ ಸುದ್ದಿ, ಆರಂಭಕ್ಕೂ ಮುಹೂರ್ತ ಫಿಕ್ಸ್ ಮಾಡಿ, ವಿಶೇಷತೆ ಬಗ್ಗೆ ಹೇಳಿದ್ದೇನು ಗೊತ್ತೇ??
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಪಡೆದುಕೊಂಡಿರುವ ಶೋ ಬಿಗ್ ಬಾಸ್. ಈ ಶೋ ಮೊದಲು ಶುರುವಾಗಿದ್ದು, ಹೊರದೇಶದಲ್ಲಿ. ಭಾರತಕ್ಕೂ ಕಾಲಿಟ್ಟ ಈ ಶೋ ಮೊದಲು ಶುರುವಾಗಿದ್ದು ಹಿಂದಿ ಭಾಷೆಯಲ್ಲಿ. ಹಿಂದಿಯಲ್ಲಿ 15 ಸೀಸನ್ ಪೂರೈಸಿದೆ ಬಿಗ್ ಬಾಸ್. ನಂತರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಹಾಗೂ ಉತ್ತರ ಭಾರತದ ಇನ್ನಿತರ ಭಾಷೆಗಳಲ್ಲಿ ಬಿಗ್ ಬಾಸ್ ಶುರುವಾಗಿದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರತಿದಿನ ಟಿವಿಯಲ್ಲಿ ನೋಡುವುದೇ ಒಂದು ರೀತಿಯ ಕುತೂಹಲ ಆಗಿದೆ.
13 ರಿಂದ 15 ಸೆಲೆಬ್ರಿಟಿಗಳು ಈ ಮನೆಯೊಳಗೆ ಹೇಗಿರುತ್ತಾರೆ ಎನ್ನುವುದನ್ನು ನೋಡುವ ಕುತೂಹಲ ಜನರಿಗೆ. ಬಿಗ್ ಬಾಸ್ ಕೊಡುವ ಟಾಸ್ಕ್ ಗಳು, ಸ್ಪರ್ಧಿಗಳ ನಡುವೆ ನಡೆಯುವ ಜಗಳ, ಇದೆಲ್ಲವನ್ನು ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಎಲ್ಲಾ ಭಾಷೆಗಳಲ್ಲೂ ಬಿಗ್ ಬಾಸ್ ಶೋ ತುಂಬಾ ಫೇಮಸ್ ಆಗಿದೆ. ಕನ್ನಡದಲ್ಲಿ. ಬಿಗ್ ಬಾಸ್ ಕನ್ನಡ ಶೋ 8 ಸೀಸನ್ ಗಳನ್ನು ಪೂರೈಸಿದ್ದು, 9ನೇ ಸೀಸನ್ ಯಾವಾಗ ಶುರುವಾಗುತ್ತದೆ ಎಂದು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ. ಇದೀಗ ಬಿಬಿಕೆ9 ಬಗ್ಗೆ ಭರ್ಜರಿಯಾದ ಅಪ್ಡೇಟ್ ಸಿಕ್ಕಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 9 ಶೋ, ಆಗಸ್ಟ್ ಮೊದಲ ವಾರದಿಂದ ಶುರುವಾಗುತ್ತದೆ ಎನ್ನುವ ಮಾಹಿತಿ ಇದೆ. ಆದರೆ ಈ ಬಾರಿ ಬಿಗ್ ಬಾಸ್ ಶೋ ಬಹಳಷ್ಟು ವಿಶೇಷತೆಗಳ ಜೊತೆಗೆ ಶುರುವಾಗಲಿದೆಯಂತೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ವೂಟ್ ಸೆಲೆಕ್ಟ್ ಎರಡರಲ್ಲೂ ಸಹ ಬಿಗ್ ಬಾಸ್ ಶೋ ಶುರುವಾಗಲಿದೆ. ಅದು ಹೇಗೆ ಅಂದ್ರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಶೋ ಶುರುವಾಗುವ ಮೊದಲ ವೂಟ್ ಸೆಲೆಕ್ಟ್ ಆಪ್ ನಲ್ಲಿ ಶುರುವಾಗಲಿದೆಯಂತೆ. ಇದು ಬಿಗ್ ಬಾಸ್ ಮಿನಿ ಸೀಸನ್ ಆಗಿರಲಿದೆ.
ಈ ಮಿನಿ ಸೀಸನ್ 42 ದಿನಗಳ ಕಾಲ ನಡೆಯುತ್ತದೆ. ಇದರಲ್ಲಿ ಸೋಷಿಯಲ್ ಮೀಡಿಯಾ ಇಂದ ಫೇಮಸ್ ಆಗಿರುವವರು, influencer ಗಳು ಸ್ಪರ್ಧಿಸಲಿದ್ದಾರೆ, ಇದರಲ್ಲಿ ಸೆಲೆಕ್ಟ್ ಆಗುವ ಒಂದಿಬ್ಬರು ಸ್ಪರ್ಧಿಗಳು ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುವ ಶೋನಲ್ಲಿ ಸ್ಪರ್ಧಿಯಾಗಿ ಬರಲಿದ್ದಾರಂತೆ. ಇದೇ ಕಾನ್ಸೆಪ್ಟ್ ಹಿಂದಿಯಲ್ಲಿ ಸಹ ತರಲಾಗಿತ್ತು, ಬಿಗ್ ಬಾಸ್ ಓಟಿಟಿ ಸೀಸನ್ ಅನ್ನು ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ ಕನ್ನಡದಲ್ಲಿ ಸುದೀಪ್ ಅವರೇ ಈ ಮಿನಿ ಸೀಸನ್ ನಿರೂಪಣೆ ಮಾಡಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಈ ಮಿನಿ ಸೀಸನ್ ಗಾಗಿ ಈಗಾಗಲೇ ತಯಾರಿಗಳು ನಡೆಸಲಾಗುತ್ತಿದೆ. ಬಿಗ್ ಬಾಸ್ ಮನೆಯ ವಿನ್ಯಾಸ ಹಾಗೂ ಇನ್ನಿತರ ವಿಚಾರಗಳು ಸಹ ಈ ಸೀಸನ್ ನಲ್ಲಿ ಬಹಳ ವಿಭಿನ್ನವಾಗಿರಲಿದೆಯಂತೆ. ಬಿಗ್ ಬಾಸ್ ಶೋ ಗೆ ಸ್ಪರ್ಧಿಗಳಾಗಿ ಯಾರೆಲ್ಲಾ ಬರುತ್ತಾರೆ ಎನ್ನುವ ಕುತೂಹಲ ಸಹ ಜನರಲ್ಲಿ ಶುರುವಾಗಿದ್ದು, ಇದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಒಟ್ಟಿನಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಬಿಗ್ ಬಾಸ್ ಮಿನಿ ಸೀಸನ್ ಶುರುವಾಗುತ್ತದೆ ಎನ್ನುವ ಮಾತುಗಳು ಮಾತ್ರ ಸ್ಟ್ರಾಂಗ್ ಆಗಿ ಕೇಳಿಬರುತ್ತಿದೆ..
ಬಿಗ್ ಬಾಸ್ ಕನ್ನಡ ಸೀಸನ್ 9ರ ಬಗ್ಗೆ ಸುದೀಪ್ ಅವರು ಸಹ ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ಹೊಸ ಸೀಸನ್ ಗಾಗಿ ಪರಮೇಶ್ವರ್ ಗುಂಡ್ಕಲ್ ಅವರು ಹೊಸ ಪ್ರಯತ್ನ ಮಾಡುತ್ತಿದ್ದು, ಬಿಗ್ ಬಾಸ್ ತಂಡ ಸೇರಿಕೊಳ್ಳಲು ಬಹಳ ಎಕ್ಸೈಟ್ ಆಗಿದ್ದೇನೆ ಎಂದು ಸುದೀಪ್ ಅವರು ಹೇಳಿದ್ದಾರೆ. ಸುದೀಪ್ ಅವರ ಈ ಮಾತುಗಳನ್ನು ಕೇಳಿದಮೇಲೆ, ಜನರಲ್ಲಿ ಇನ್ನು ಕುತೂಹಲ ಹೆಚ್ಚಾಗಿದೆ
Comments are closed.