ವಂಶಿಕ ರವರಿಗೆ ಸಿಗುವ ಸಂಭಾವನೆ ಕುರಿತು ಮಾತನಾಡಿದ ಯಶಸ್ವಿನಿ ಕಣ್ಣೀರಿಟ್ಟು ಹೇಳಿದ್ದೇನು ಗೊತ್ತೇ? ಎಷ್ಟು ಹಣ ಬರುತ್ತದೆ ಅಂತೇ ಗೊತ್ತೇ??
ಮಾಸ್ಟರ್ ಆನಂದ್, ಚಂದನವನದ ಖ್ಯಾತ ಬಾಲನಟ, ಇಂದಿಗೂ ಸಹ ಆನಂದ್ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಆನಂದ್ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ, ಇವರಿಬ್ಬರು ಈಗ ಬಹಳ ಫೇಮಸ್ ಆಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ, ವಂಶಿಕಾ ಈಗ ಕರ್ನಾಟಕದ ಫೇವರೆಟ್ ಕ್ಯೂಟ್ ಬೇಬಿ ಆಗಿದ್ದಾಳೆ ಅಂದರೆ ತಪ್ಪಾಗುವುದಿಲ್ಲ. ವಂಶಿಯ ಮುದ್ದು ಮಾತುಗಳನ್ನು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ. ವಂಶಿಕಾ ಅಂಜನಿ ಕಶ್ಯಪ ಎಂದು ನನ್ನಮ್ಮ ಸೂಪರ್ ಸ್ಟಾರ್ ಮೊದಲ ಎಪಿಸೋಡ್ ನಲ್ಲಿ ಹೇಳಿದ್ದು ಕೇಳಿಗಯೇ ಎಲ್ಲರೂ ಫಿದಾ ಆಗಿದ್ದರು. ಶಾಲೆಗೆ ಸೇರುವ ಮೊದಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ವಂಶಿಕಾ, ತಂದೆಯ ಹಾಗೆ ಪ್ರತಿಭಾವಂತೆ. ಚಿಕ್ಕ ವಯಸ್ಸಿಗೆ ಎಲ್ಲಾ ಡೈಲಾಗ್ಸ್ ನೆನಪಿಟ್ಟುಕೊಂಡು ಹೇಳುವ ಬುದ್ಧಿವಂತೆ ವಂಶಿಕಾ. ಈ ಮುದ್ದು ಮತ್ತು ಅವರ ತಾಯಿ ಯಶಸ್ವಿನಿ ಇಬ್ಬರು ನನ್ನಮ್ಮ ಸೂಪರ್ ಸ್ಟಾರ್ ಶೋ ವಿನ್ನರ್ ಆಗಿ ಹೊರಹೊಮ್ಮಿದರು.
ವಿನ್ನರ್ ಗಳಾಗಿ ಇವರಿಗೆ ಸುಮಾರು 5 ಲಕ್ಷ ರೂಪಾಯಿ ಹಣ ಬಹುಮಾನವಾಗಿ ಸಹ ಸಿಕ್ಕಿದೆ. ಅದರಿಂದ ಈ ಅಮ್ಮ ಮಗಳು ಹೊಸ ಕಾರ್ ಸಹ ಖರೀದಿ ಮಾಡಿದರು. ಇದೀಗ ವಂಶಿಕಾ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸಹ ಸ್ಪರ್ಧಿಸುತ್ತಿದ್ದಾಳೆ. ಇದು ದೊಡ್ಡವರ ಶೋ ಆಗಿರುವುದರಿಂದ ವಂಶಿಕಾಳನ್ನು ಯಾಕೆ ಕಳಿಸಿದ್ದೀರಿ ಎಂದು ಕೆಲವರು ಬೇರೆಯದೇ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ. ವಂಶಿಕಾ ಸಂಪಾದನೆ ಮಾಡುವುದಕ್ಕಾಗಿ ನೀವು ಶೋಗೆ ಕಳಿಸಿದ್ದೀರಿ, ವಂಶಿಕಾಳ ವಿದ್ಯಾಭ್ಯಾಸ ಇದರಿಂದ ಹಾಳಾಗುತ್ತಿದೆ ಎಂದು ಕೆಲವರು ಖಾರವಾದ ಮಾತುಗಳನ್ನಾಡಿದ್ದರು. ಅದ್ಕಕೀಗ ವಂಶಿಕಾ ಅಪ್ಪ ಅಮ್ಮ ಇಬ್ಬರು ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಆನಂದ್ ಅವರು ಜನರ ಮಾತುಗಳ ಬಗ್ಗೆ ಮಾತನಾಡಿ, ಅವಳ ವಿದ್ಯಾಭ್ಯಾಸ ಹಾಳಾಗುತ್ತಿದೆ ಎಂದು ಹೇಳುತ್ತಿದ್ದಾರೆ, ಅವಳೇನು ಐಎಎಸ್ ಮಾಡ್ತಾ ಇದ್ದಾಳಾ, ಅವಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಯಾವುದರಲ್ಲಿ ಸಂತೋಷವಿದೆ ಅದನ್ನು ಮಾಡುವ ಅವಕಾಶ ಸಿಕ್ಕಿದ್ದು, ಅದನ್ನು ಮಾಡುತ್ತಿದ್ದಾಳೆ ಎಂದು ಹೇಳಿದ್ದಾರೆ ಮಾಸ್ಟರ್ ಆನಂದ್. ಇನ್ನು ಯಶಸ್ವಿನಿ ಅವರು ವಂಶಿಕಾ ಸಂಭಾವನೆ ಬಗ್ಗೆ ಮಾತನಾಡಿ, ವಂಶಿಕಾ ಸಂಭಾವನೆಯಲ್ಲಿ ಜೀವನ ಮಾಡುವ ಪರಿಸ್ಥಿತಿಯನ್ನು ದೇವರು ನಮಗೆ ಇನ್ನು ಕೊಟ್ಟಿಲ್ಲ. ನಮಗೆ ಬೇರೆ ಬೇರೆ ಕೆಲಸ ಇದೆ ಅದರಿಂದ ಎಲ್ಲವೂ ಚೆನ್ನಾಗಿ ಆಗುತ್ತಿದೆ. ಹಣಕ್ಕಾಗಿ ವಂಶಿಕಾನ ಶೋಗೆ ಕಳಿಸುತ್ತಿದ್ದೀರಾ ಎಂದು ಹೇಳುತ್ತಾರೆ.. ವಾಸ್ತವ ಬೇರೆಯೇ ಇರುತ್ತೆ. ಜನರಿಗೆ ಅದು ಆರ್ಥಆಗುವುದಿಲ್ಲ.. ಕಂಟೆಂಟ್ ಗಾಗಿ ಇದೆಲ್ಲಾ ಮಾಡ್ತಾರೆ. ಇದು ಆಕೆಯ ಜೀವನ, ಆಕೆಗೆ ಯಾವುದರಲ್ಲಿ ಆಸಕ್ತಿ ಇದೆ ಅದರಲ್ಲಿ ತೊಡಗಿಕೊಳ್ಳುವ ಹಾಗೆ ಮಾಡುವುದು ತಂದೆ ತಾಯಿಯಾಗಿ ನಮ್ಮ ಕರ್ತವ್ಯ ಅಲ್ವಾ.. ಹಣಕ್ಕಾಗಿ ಕಳಿಸುತ್ತಿದ್ದೀರಾ ಎಂದು ತೀರ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ ಎಂದು ಬೇಸರ ಪಟ್ಟುಕೊಂಡಿದ್ದಾರೆ ಯಶಸ್ವಿನಿ.
Comments are closed.