ದಕ್ಷಿಣ ಭಾರತದ ಟಾಪ್ ನಟಿಗೆ, ಇಡೀ ಭಾರತವೇ ಮನಸೋತಿದ್ದು ಹೇಗೆ ಗೊತ್ತೇ?? ಸಮಂತಾ ಹೇಗೆ ಮನಗೆದ್ದಿದ್ದಾರೆ ಗೊತ್ತೇ??
ಸಮಂತಾ ರುತ್ ಪ್ರಭು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ದಕ್ಷಿಣ ಭಾರತದಲ್ಲಿ ಸಕ್ರಿಯಾಗಿರುವ ನಟಿ. ಇವರ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸಮಂತಾ ಅವರು ವೈಯಕ್ತಿಕ ಜೀವನದಲ್ಲಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡಾಗ, ಎಲ್ಲರೂ ಇಲ್ಲಿಗೆ ಸಮಂತಾ ಕೆರಿಯರ್ ಮುಗಿದು ಹೋಯಿತು, ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಂತಾ ಯೋಚನೆ ಮಾಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ ಸಮಂತಾ ಅದೆಲ್ಲವನ್ನು ಸುಳ್ಳಾಗಿಸಿದ್ದಾರೆ. ಇಂದು ಭಾರತದ ಎಲ್ಲಾ ನಟಿಯರಿಗಿಂತ ಅಗ್ರಸ್ಥಾನದಲ್ಲಿದ್ದಾರೆ ಸಮಂತಾ. ಸಮಂತಾ ಅವರು ಇಷ್ಟು ಎತ್ತರಕ್ಕೆ ಬೆಳೆದದ್ದು ಹೇಗೆ ಗೊತ್ತಾ?
ನಟಿ ಸಮಂತಾ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವರು, ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ನಾಯಕಿಯಾಗಿ ಬಂದವರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು, ಸ್ಟಾರ್ ನಟರಿಗೆ ಹೀರೋಗಳಾಗಿ ಸ್ಟಾರ್ ಹೀರೋಯಿನ್ ಆಗಿ ಬೆಳೆದರು ಸಮಂತಾ. ನಾಗಚೈತನ್ಯ ಅವರನ್ನು ಆರೇಳು ವರ್ಷಗಳಿಂದ ಪ್ರೀತಿಸಿ ಮದುವೆಯಾದರು. ಆದರೆ ಇಬ್ಬರ ನಡುವೆ ಏನು ನಡೆಯಿತೋ, ಈ ಜೋಡಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಈ ನಿರ್ಧಾರದ ಬಳಿಕ, ಸಮಂತಾ ಅವರನ್ನು ಹಲವರು ಟೀಕಿಸಿದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಮಂತಾ, ಗಟ್ಟಿಗಿತ್ತಿಯಾಗಿ ಜೀವನ ನಡೆಸುತ್ತಿದ್ದಾರೆ. ಸೋತು ಗೆಲ್ಲಬಹುದು ಎನ್ನುವ ತಕ್ಕ ಉದಾಹರಣೆ ಆಗಿದ್ದಾರೆ.
ಎಲ್ಲರೂ ಅಂದುಕೊಂಡಿದ್ದನ್ನು ಸುಳ್ಳು ಮಾಡಿದ್ದಾರೆ ಸಮಂತಾ. ಪ್ರತಿಷ್ಠಿತ ಸಂಸ್ಥೆಯಿಂದ ನಡೆಸಿರುವ ಸಮೀಕ್ಷೆಯಲ್ಲಿ, ನಯನತಾರ, ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಇವರೆಲ್ಲರನ್ನು ಹಿಂದಿಕ್ಕಿ ಸಮಂತಾ ಅವರು ಜನಪ್ರಿಯತೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಸಮಂತಾ ಅವರಿಗೆ ಇಷ್ಟರ ಮಟ್ಟಿಗೆ ಜನಪ್ರಿಯತೆ ಸಿಗಲು ಮುಖ್ಯಕಾರಣ ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ಮತ್ತು ಪುಷ್ಪ ಸಿನಿಮಾದ ಸ್ಪೆಷಲ್ ಸಾಂಗ್. ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ನಲ್ಲಿ ಸಮಂತಾ ಅವರು ನಟಿಸಿದ ರಾಜಿ ಪಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟಿತು, ಇನ್ನು ಪುಷ್ಪ ಸಿನಿಮಾ ಹಾಡು ಎಷ್ಟು ದೊಡ್ಡ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಎಲ್ಲಾ ಕಾರಣಗಳಿಂದ ಸಮಂತಾ ಅವರಿಗೆ ಬೇಡಿಕೆ ಅತಿಹೆಚ್ಚಾಗಿದೆ, ಜನರು ಸಹ ಅವರನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.
Comments are closed.