ತೆಲುಗಿನ ಮತ್ತೊಂದು ಸಿನೆಮಾದಲ್ಲಿ ಒಟ್ಟಾರೆಯಾಗಿ ನರೇಶ್-ಪವಿತ್ರ ಕಾಣಿಸಿಕೊಂಡ ಪಾತ್ರ ನೋಡಿ ಬಿದ್ದು ಬಿದ್ದು ನಕ್ಕ ಜನ. ಯಾಕೆ ಗೊತ್ತೇ? ಇವರ ಪಾತ್ರವೇನು ಗೊತ್ತೇ?
ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ವಿಚಾರ ಯಾವ ಮಟ್ಟಕ್ಕೆ ತಲುಪಿದೆ ಎಂದು ಎಲ್ಲರಿಗೂ ಗೊತ್ತಿದೆ. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿಯೊಂದು ಕೇಳಿಬಂದು, ನರೇಶ ಅವದ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಮತ್ತು ಪವಿತ್ರಾ ಬಗ್ಗೆ ಹೇಳಿಕೆಗಳನ್ನು ನೀಡಿ, ಮೈಸೂರಿನ ಹೋಟೆಲ್ ನಲ್ಲಿ ನರೇಶ್ ಮತ್ತು ಪವಿತ್ರಾ ಅವರು ಜೊತೆಯಾಗಿ ಸಿಕ್ಕಿಹಾಕಿಕೊಂಡರು. ಹೋಟೆಲ್ ಗೆ ರಮ್ಯಾ ರಘುಪತಿ ಅವರು ಸಹ ಬಂದು, ದೊಡ್ಡ ಹೈಡ್ರಾಮ ನಡೆಯಿತು. ಈಗಲು ನರೇಶ್ ಮತ್ತು ಪವಿತ್ರಾ ಅವರ ಸಂಬಂಧದ ಬಗ್ಗೆ ಚರ್ಚೆ ನಡೆಯುತ್ತಿದೆ.
ಆದರೆ ಇವರಿಬ್ಬರು ಇತ್ತೀಚೆಗೆ ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಸಿನಿಮಾ ನೋಡಿದ ಸಿನಿಪ್ರಿಯರು ಇವರಿಬ್ಬರ ಪಾತ್ರ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಖ್ಯಾತ ನಟ ರವಿತೇಜ ಅಭಿನಯದ ರಾಮಾರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ಅವರು ನಟಿಸಿದ್ದು ಇವರಿಬ್ಬರ ಪಾತ್ರ ನೋಡಿ ಸಿನಿಪ್ರಿಯರು ನಗು ತಡೆಯಲಾಗದೆ ಎಂಜಾಯ್ ಮಾಡಿದ್ದಾರೆ. ಯಾಕಂದರೆ ಇವರಿಬ್ಬರ ಪಾತ್ರ ಸಿನಿಮಾದಲ್ಲಿ ಆ ರೀತಿ ಇದೆ. ನರೇಶ್ ಹಾಗೂ ಪವಿತ್ರಾ ಅವರ ಪಾತ್ರ ಸಹೋದರ ಸಹೋದರಿಯ ಪಾತ್ರದ ಹಾಗೆ ಇದೆ. ನಾಯಕ ರವಿತೇಜ ತಾಯಿಯ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಅವರು ನಟಿಸಿದ್ದು, ನಾಯಕಿಯ ತಂದೆಯ ಪಾತ್ರದಲ್ಲಿ ನರೇಶ್ ಅವರು ನಟಿಸಿದ್ದಾರೆ..
ನರೇಶ್ ಅವರು ಸಿನಿಮಾದಲ್ಲಿ ರವಿತೇಜ ಅವರಿಗೆ ಸೋದರ ಮಾವ ಆಗುತ್ತಾರೆ. ಹಾಗಾಗಿ ಸಿನಿಮಾದಲ್ಲಿ ನರೇಶ್ ಅವರು ಪವಿತ್ರಾ ಅವರ ಸಹೋದರ ಆಗಲಿದ್ದು, ನಿಜ ಜೀವನದಲ್ಲಿ ಅವರ ಸಂಬಂಧ ಹೇಗಿದೆ, ತೆರೆಯ ಮೇಲೆ ಹೇಗಿದೆ ಎನ್ನುವುದನ್ನು ನೋಡಿ ಸಿನಿಪ್ರಿಯರು ಬಿದ್ದು ಬಿದ್ದು ನಕ್ಕಿದ್ದಾರೆ. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಸುದ್ದಿ ಆಗಿದೆ. ಆದರೆ ತೆರೆಯಮೇಲೆ ಈ ರೀತಿಯ ಪಾತ್ರ ನೋಡಿ ಎಲ್ಲವೂ ವಿಚಿತ್ರ ಎನ್ನುತ್ತಿದ್ದಾರೆ ಸಿನಿಪ್ರಿಯರು
Comments are closed.