Neer Dose Karnataka
Take a fresh look at your lifestyle.

ದಿನೇಶ್ ಕಾರ್ತಿಕ್ ಗೆ ಅವರದ್ದೇ ಚಿಂತೆ: ಉತ್ತಮ ಪ್ರದರ್ಶನ ನೀಡಿದರೂ ಕೂಡ ಇವರಿಬ್ಬರಿಗೆ ಪೈಪೋಟಿ ನೀಡಲು ಸಾಧ್ಯವೇ?? ಯಾರ್ಯಾರು ಗೊತ್ತೇ?

12

ಕ್ರಿಕೆಟ್ ಪಂದ್ಯಗಳಲ್ಲಿ, ಅದರಲ್ಲೂ ಟಿ20 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ಮನ್ ಗಳು ಎಷ್ಟು ಮುಖ್ಯವಾಗುತ್ತಾರೋ, ಫಿನಿಷರ್ ಪಾತ್ರ ವಹಿಸುವ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಸಹ ಅಷ್ಟೇ ಮುಖ್ಯವಾಗುತ್ತಾರೆ. ಟೀಮ್ ಇಂಡಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಸ್ಟ್ ಫಿನಿಷರ್ ಆಗಿದ್ದವರು ಎಂ.ಎಸ್.ಧೋನಿ ಅವರು, ಅವರ ಬಳಿಕ ಟೀಮ್ ಇಂಡಿಯಾಗೆ ಫಿನಿಷರ್ ಸ್ಥಾನ ತುಂಬುವವರ ಕೊರತೆ ಇತ್ತು ಎಂದರೆ ತಪ್ಪಾಗುವುದಿಲ್ಲ. ಆದರೆ ಈಗ ಆ ಸ್ಥಾನ ತುಂಬುವ ಪ್ಲೇಯರ್ ಗಳು ಇದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪ್ರಸ್ತುತ ಟಿ20 ಪಂದ್ಯಗಳಲ್ಲಿ ಫಿನಿಷರ್ ಸ್ಥಾನಕ್ಕೆ ಒಬ್ಬರಲ್ಲ, ಇಬ್ಬರಲ್ಲ ಬದಲಾಗಿ ಮೂವರು ಆಟಗಾರರು ಇದ್ದಾರೆ. ಒಬ್ಬರು ದಿನೇಶ್ ಕಾರ್ತಿಕ್ ಅವರು, ಭಾರತ ಕ್ರಿಕೆಟ್ ತಂಡದ ಸೀನಿಯರ್ ಪ್ಲೇಯರ್ ಇವರು, ಈ ವರ್ಷ ಐಪಿಎಲ್ ನಲ್ಲಿ ನೀಡಿದ ಅದ್ಭುತವಾದ ಪ್ರದರ್ಶನದಿಂದ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ, ಡಿಕೆ ಅವರು ಸತತವಾಗಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಕೆರೆಬಿಯನ್ನರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 19 ಬಾಲ್ ಗಳಲ್ಲಿ 41 ರನ್ ಗಳಿಸಿ, ಯುವ ಆಟಗಾರರಿಗೆ ಸವಾಲು ಎನ್ನುವ ಹಾಗೆ ಪ್ರದರ್ಶನ ನೀಡಿದ್ದರು, ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಸಹ ಒಳ್ಳೆಯ ಪ್ರದರ್ಶನ ನೀಡಿದ್ದರು. ಡಿಕೆ ಅದ್ಭುತವಾದ ಫಿನಿಷರ್ ಎಂದು ಹೆಸರು ಪಡೆದುಕೊಂಡಿದ್ದಾರೆ. ಈ ವರ್ಷದ ಟಿ20 ಪಂದ್ಯಗಳಲ್ಲಿ ಡಿಕೆ ಅವರು ಆಡಿರುವ 11 ಟಿ20 ಪಂದ್ಯಗಳಲ್ಲಿ 174 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ 138.08 ಇದೆ.

ಆದರೆ ಈಗ ಡಿಕೆ ಅವರಿಗೆ ಪೈಪೋಟಿ ಎನ್ನುವ ಹಾಗೆ ಇನ್ನಿಬ್ಬರು ಆಲ್ ರೌಂಡರ್ ಗಳು ಭಾರತ ತಂಡಕ್ಕೆ ಫಿನಿಷರ್ ಸ್ಥಾನ ತುಂಬಲು ತಯಾರಾಗಿದ್ದಾರೆ. ಅವರಿಬ್ಬರು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ. ಹಾರ್ದಿಕ್ ಪಾಂಡ್ಯ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ, ತಂಡವನ್ನು ಗೆಲ್ಲಿಸಿ, ಇದೀಗ ನ್ಯಾಶನಲ್ ಟೀಮ್ ಗೆ ಕಂಬ್ಯಾಕ್ ಮಾಡಿ, ಇಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ, ಇತ್ತ ರವೀಂದ್ರ ಜಡೇಜಾ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದರು ಸಹ, ನ್ಯಾಷನಲ್ ಟೀಮ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಈವರೆಗೂ ಆಡಿರುವ 10 ಇನ್ನಿಂಗ್ಸ್ ಗಳಲ್ಲಿ, 249 ರನ್ ಗಳಿಸಿದ್ದು, ಇವರ ಸ್ಟ್ರೈಕ್ ರೇಟ್ 139.10 ಇದೆ. ಇನ್ನು ರವೀಂದ್ರ ಜಡೇಜಾ ಅವರು 7 ಇನ್ನಿಂಗ್ಸ್ ಗಳಲ್ಲಿ 146 ರನ್ ಗಳಿಸಿದ್ದು, ಇವರ ಸ್ಟ್ರೈಕ್ ರೇಟ್, 146.90 ಇದೆ. ಈ ಮೂವರ ಸ್ಟ್ರೈಕ್ ಕಡಿಮೆ ಇದ್ದರೂ ಸಹ, ದಿನೇಶ್ ಕಾರ್ತಿಕ್ ಅವರಿಗೆ ಜಡೇಜಾ ಮತ್ತು ಪಾಂಡ್ಯ ಇಬ್ಬರು ಸಹ ಟಫ್ ಕಾಂಪಿಟೇಶನ್ ನೀಡಲಿದ್ದಾರೆ. ಇವರಿಬ್ಬರಿಗೆ ಡಿಕೆ ಪೈಪೋಟಿ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.