Neer Dose Karnataka
Take a fresh look at your lifestyle.

ಮದುವೆಯಾಗಿ ಹತ್ತು ವರ್ಷಗಳು ಆದಮೇಲೆ ಸಿಹಿ ಸುದ್ದಿ ಕೊಡಲು ತಯಾರು ಆಗಿದ್ದಾರಾ ರಾಮ್ ಚರಣ್ ಪತ್ನಿ ಉಪಾಸನಾ. ಏನು ಗೊತ್ತೇ??

ಪ್ರೀತಿಸಿ ಹಿರಿಯರ ಮನವೊಲಿಸಿ ಮದುವೆಯಾದ ರಾಮ್ ಚರಣ್ ಉಪಾಸನಾ ಜೋಡಿ ಅದೆಷ್ಟೋ ಜನರಿಗೆ ಮಾದರಿಯಾಗಿ ನಿಂತಿದ್ದಾರೆ. ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಉಪಾಸನಾ ಮತ್ತು ಚರಣ್ ಯಶಸ್ವಿ ಪಯಣ ನಡೆಸುತ್ತಿದ್ದಾರೆ. ಆದರೆ ಸಮಾಜದ ದೃಷ್ಟಿಯಲ್ಲಿ ಅವರಿಗೆ ಒಂದು ಕೊರತೆಯಿದೆ. ಮದುವೆಯಾಗಿ ಹತ್ತು ವರ್ಷ ಕಳೆದರೂ ಉಪಾಸನಾ ಚರಣ್ ದಂಪತಿಗೆ ಮಕ್ಕಳಾಗಿಲ್ಲ. ಇದಕ್ಕೆ ಕಾರಣ ಏನು ಎಂದು ಗೊತ್ತಿಲ್ಲ, ಆದರೆ ಉಪಾಸನ ಅವರನ್ನು ಪ್ರತಿ ಬಾರಿ ಇದರ ಬಗ್ಗೆ ಇದರ ಕೇಳಲಾತುತ್ತದೆ. ಅಲ್ಲು ಅರ್ಜುನ್ ಸ್ನೇಹಾರೆಡ್ಡಿ ಜೋಡಿ 2011 ರಲ್ಲಿ ವಿವಾಹವಾದರು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಅಯಾನ್‌ ಗೆ ಏಳು ವರ್ಷ, ಮಗಳು ಅರ್ಹಾಗೆ ನಾಲ್ಕು ವರ್ಷ.

ಆದರೆ ರಾಮ್ ಚರಣ್ ದಂಪತಿಗೆ ಇನ್ನೂ ಮಕ್ಕಳಾಗದಿರುವ ಬಗ್ಗೆ ಮೆಗಾ ಅಭಿಮಾನಿಗಳು ಕಂಗಾಲಾಗಿದ್ದಾರೆ. ಉಪಾಸನಾ ತೆಲುಗಿನವರಿಗೆ ಮೆಗಾ ಮನೆಯ ಸೊಸೆ ಎನ್ನುವುದಕ್ಕಿಂತ ತನ್ನದೇ ಆದ ಐಡೆಂಟಿಟಿಯಲ್ಲಿ ಪರಿಚಿತರು. ಅಪೋಲೋ ವೈಸ್ ಚೇರ್ಮನ್ ಎಂಬುದೂ ಗೊತ್ತೇ ಇದೆ. ಹಾಗೆಯೇ ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿರುತ್ತಾರೆ. ಜನರಿಗೆ ಹೆಲ್ತ್ ಟಿಪ್ಸ್ ವಿವರಿಸುತ್ತಾರೆ. ಉಪಾಸನಾ 2012 ರಲ್ಲಿ ರಾಮ್ ಚರಣ್ ಅವರೊಡನೆ ಮದುವೆಯಾದರು.. ಮದುವೆಯಾಗಿ 10 ವರ್ಷ ಕಳೆದರೂ ಇನ್ನೂ ಮಕ್ಕಳಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಇದಲ್ಲದೆ, ಅವರು ತಮ್ಮ ಮಕ್ಕಳ ಬಗ್ಗೆ ಅಭಿಮಾನಿಗಳಿಂದ ಮತ್ತು ಮಾಧ್ಯಮಗಳಿಂದ ಅನೇಕ ಪ್ರಶ್ನೆಗಳನ್ನು ಎದುರಿಸಿದಾಗ, ಉಪಾಸನಾ ಅವರ ಬಗ್ಗೆ ಅನೇಕ ಬಾರಿ ಪ್ರತಿಕ್ರಿಯಿಸಿದರು. ಅಲ್ಲಿ ಕೆಲವೊಮ್ಮೆ ಆ ಪ್ರಶ್ನೆಗಳನ್ನು ಅಲ್ಲಗಳೆದರು. ಆದರೆ ಈಗಲೂ ಈ ಮೆಗಾ ಸೊಸೆ ಮಕ್ಕಳ ಪ್ರಶ್ನೆಯಿಂದ ತಪ್ಪಿಸಿಕೊಂಡಿಲ್ಲ. ಆದರೆ ಈ ಬಾರಿ ವಿನಾಯಕನ ವಿಸರ್ಜನೆ ಸಂದರ್ಭದಲ್ಲಿ ಉಪಾಸನಾ ರಾಮಚರಣ್ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಉಪಾಸನಾ ಬೇಬಿ ಬಂಪ್‌ ನೊಂದಿಗೆ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಉಪಾಸನಾ ತಾಯಿಯಾಗುತ್ತಾರಾ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಉಪಾಸನಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಈ ಬಗ್ಗೆ ಉಪಾಸನಾ ಅಥವಾ ಮೆಗಾ ಫ್ಯಾಮಿಲಿಯಿಂದ ಯಾವುದೇ ಮಾಹಿತಿ ಬಂದಿಲ್ಲ.

Comments are closed.