Neer Dose Karnataka
Take a fresh look at your lifestyle.

ಮತ್ತದೇ ಕೆಲಸಕ್ಕೆ ಕೈ ಹಾಕಿದ ಸಮಂತಾ: ಒಮ್ಮೆ ಶಾಕ್ ಕೊಟ್ಟರೂ ಕೂಡ ಕ್ಯಾರೇ ಎನ್ನದ ಸಮಂತಾ ಮತ್ತೆ ಮಾಡುತ್ತಿರುವುದೇನು ಗೊತ್ತೇ??

84

ಸಮಂತಾ ಒಂದು ದಶಕಕ್ಕಿಂತ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಸ್ಯಾಮ್ ಇದುವರೆಗೆ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಎಲ್ಲಾ ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ ಹಾಗೂ ಅದ್ಭುತ ಯಶಸ್ಸನ್ನು ಪಡೆದಿದ್ದಾಈ ಸಮಂತಾ. ಆಕೆಯ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. ಸದ್ಯ ಸಮಂತಾ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರಿದಿದ್ದಾರೆ. ಈ ಅನುಕ್ರಮದಲ್ಲಿ ಸಮಂತಾ ಹೆಚ್ಚಿನ ಸಾಧನೆ ಮಾಡಲು ಬಯಸುತ್ತಿದ್ದಾರೆ. ಹೀಗಿರುವಾಗ ಆಕೆಗೆ ಸಂಬಂಧಿಸಿದ ಯಾವುದೇ ವಿಷಯ ಈಗ ಹಾಟ್ ಟಾಪಿಕ್ ಆಗುತ್ತಿದೆ..

ಸದ್ಯದ ಚಿತ್ರಗಳತ್ತ ಗಮನ ಹರಿಸುತ್ತಿರುವುದರಿಂದ ಚಿಕ್ಕ ಚಿಕ್ಕ ಅವಕಾಶವನ್ನೂ ಬಿಡದೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಸಮಂತಾ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಬಾಲಿವುಡ್ ನಲ್ಲಿ ಸಹ ಹೆಚ್ಚಿನ ಅವಕಾಶಗಳು ಬರುತ್ತಿದ್ದು, ಅಲ್ಲಿ ಕೂಡ ಸ್ಟಾರ್ ಹೀರೋಯಿನ್ ಆಗಿ ಮಿಂಚಲು ಉತ್ಸುಕರಾಗಿದ್ದಾರೆ ಸಮಂತಾ. ಬಿಟೌನ್ ನತ್ತ ಗಮನ ಹರಿಸಿರುವ ಸ್ಯಾಮ್ ಇದೀಗ ಮತ್ತೊಂದು ಡೇರಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಈ ವಿಚಾರದಲ್ಲಿ ಈ ಹಿಂದೆಯೂ ಆಕೆಗೆ ಪೆಟ್ಟು ಬಿದ್ದಿತ್ತು.

ಆದರೆ ಈಗ ಮತ್ತೆ ಅದೇ ರೀತಿ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಸದ್ಯ ಆಕೆ ಕಮಿಟ್ ಆಗಿರುವ ಬಾಲಿವುಡ್ ಸಿನಿಮಾ ಈಗ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ. ಅಮರ್ ಕೌಶಿಕ್ ನಿರ್ದೇಶನದಲ್ಲಿ ಸಮಂತಾ ಹಾರರ್ ಸಿನಿಮಾ ಮಾಡಲಿದ್ದಾರಂತೆ ಸ್ಯಾಮ್. ಇದರಲ್ಲಿ ಸಮಂತಾ ರಜಪೂತ್ ರಾಣಿ ಮತ್ತು ಪ್ರೇತಾತ್ಮ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಹಿಂದೆ ರಾಜುಗಾರಿ ಕಧಿ 2 ಚಿತ್ರದಲ್ಲಿ ಪ್ರೆತಾತ್ಮದ ಪಾತ್ರದಲ್ಲಿ ನಟಿಸಿದ್ದರು ಸಮಂತಾ,ಆ ಸಿನಿಮಾ ಫ್ಲಾಪ್ ಆಗಿದ್ದರು ಮತ್ತೊಮ್ಮೆ ಅದೇ ಪಾತ್ರಕ್ಕೆ ಓಕೆ ಹೇಳಿದ್ದಾರೆ. ಈ ಸಿನಿಮಾ ಹೇಗಿರುತ್ತದೆ ಎನ್ನುವ ನಿರೀಕ್ಷೆ ಈಗ ಹೆಚ್ಚಾಗಿದೆ.

Leave A Reply

Your email address will not be published.