Neer Dose Karnataka
Take a fresh look at your lifestyle.

ನಿಮ್ಮ ಕಷ್ಟವೆಲ್ಲ ಕೊನೆಗೂ ಮುಗಿಯಿತು. ಮುಂದಿನ 28 ದಿನ ನಿಮ್ಮನ್ನು ತಡೆಯಲು ಸಾಧ್ಯವೇ ಇಲ್ಲ. ಯಾವ್ಯಾವ ರಾಶಿಯವರಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಗ್ರಹಗಳ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ. ಇದೀಗ ಮಂಗಳ ಗ್ರಹವು ವೃಷಭ ರಾಶಿಯಲ್ಲಿದ್ದು, ಅಕ್ಟೋಬರ್ 10ರ ವರೆಗೂ ಅದೇ ರಾಶಿಯಲ್ಲಿ ಇರಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲು ಇರುತ್ತದೆ, ಆದರೆ 3 ರಾಶಿಗಳಿಗೆ ಇದರಿಂದ ರಾಜಯೋಗ ಉಂಟಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.

ಕರ್ಕಾಟಕ ರಾಶಿ :- ಗ್ರಹದ ಸಂಕ್ರಮಣ ಈ ರಾಶಿಯವರಿಗೆ ಪ್ರಯೋಜನ ನೀಡುತ್ತದೆ. ಇದರಿಂದ ರಾಜಯೋಗ ಶುರುವಾಗುತ್ತದೆ. ಈ ರಾಶಿಯವರ ಜಾತಕದಲ್ಲಿ ಮಂಗಳ ಗ್ರಹದ ಸಂಕ್ರಮಣ ನಡೆಯುವುದು 11ನೇ ಮನೆಯಲ್ಲಿ, ಇದು ಲಾಭ ಮತ್ತು ಆದಾಯದ ಮನೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ನಿಮ್ಮ ಆದಾಯದಲ್ಲಿ ಏರಿಕೆಯಾಗುತ್ತದೆ, ಹಾಗೂ ವ್ಯವಹಾರಗಳು ಬ್ಯುಸಿನೆಸ್ ನಲ್ಲಿ ಲಾಭ ಕಾಣುತ್ತೀರಿ. ಆರ್ಥಿಕವಾಗಿ ನಿಮ್ಮ ಬಲ ಹೆಚ್ಚಾಗುತ್ತದೆ. ನೀವು ಕೆಲಸ ಮಾಡುವ ರೀತಿ ಸುಧಾರಿಸುತ್ತದೆ. ಅದರಿಂದ ವೃತ್ತಿಯಲ್ಲಿ ಮೆಚ್ಚುಗೆ ಪಡೆಯುತ್ತೀರಿ.

ಸಿಂಹ ರಾಶಿ :- ಮಂಗಳ ಗ್ರಹ ವೃಷಭ ರಾಶಿಯೆಡೆಗೆ ಸಾಗಿದ ಸಮಯದಿಂದ ನಿಮ್ಮ ಜೀವನದ ಒಳ್ಳೆಯ ದಿನಗಳು ಶುರುವಾಗುತ್ತದೆ. ನಿಮ್ಮ ಜಾತಕದ 10ನೇ ಮನೆಯಲ್ಲಿ ಸಂಕ್ರಮಣ ನಡೆಯಲಿದ್ದು, ಇದು ಉದ್ಯೋಗ ಹಾಗೂ ಕೆಲಸದ ಮನೆ ಎಂದು ಪರಿಗಣಿಸಲಾಗಿದೆ. ಈ ವೇಳೆ ನಿಮಗೆ ಹೊಸ ಕೆಲಸಕ್ಕೆ ಅವಕಾಶ ಸಿಗಬಹುದು. ಈಗಾಗಲೇ ಕೆಲಸ ಮಾಡುತ್ತಿರುವವರಿಗ್ಗೆ ಬಡ್ತಿ ಹಾಗೂ ಇನ್ಕ್ರಿಮೆಂಟ್ ಸಿಗಬಹುದು. ಹೊಸ ವ್ಯಾಪಾರ ಸಹ ಶುರುವಾಗಬಹುದು. ವ್ಯಾಪಾರ ವಿಸ್ತರಣೆ ಮಾಡಲು ಕೂಡ ಇದು ಒಳ್ಳೆಯ ಸಮಯ ಆಗಿದೆ.

ಕನ್ಯಾ ರಾಶಿ :- ಶಕ್ತಿಯುತವಾಗಿರುವ ರಾಜಯೋಗದಿಂದ ನಿಮಗೆ ಅದೃಷ್ಟದ ಬೆಂಬಲ ಸಿಗುತ್ತದೆ. ಮಂಗಳ ಗ್ರಹ ನಿಮ್ಮ ಜಾತಕದ 9ನೇಗೆ ಬರುವುದರಿಂದ, ಇದು ಅದೃಷ್ಟ ಮತ್ತು ವಿದೇಶದ ಮನೆ ಎಂದು ಪರಿಗಣಿಸಲಾಗಿದೆ. ಇದರಿಂದ ಅದೃಷ್ಟ ನಿಮ್ಮದಾಗುತ್ತದೆ, ಜೊತೆಗೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಬ್ಯುಸಿನೆಸ್ ವ್ಯವಹಾರದಿಂದ ಪ್ರಯಾಣ ಮಾಡುವ ಹಾಗೆ ಆಗಬಹುದು, ಇದರಿಂದ ಮುಂದಿನ ದಿನಗಳಲ್ಲಿ ಹಣ ಪಡೆಯುತ್ತೀರಿ. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರು ಈ ಸಾರಿ ಅದನ್ನು ಬೇಧಿಸುತ್ತೀರಿ. ಈಗ ನೀವು ಪಚ್ಚೆ ಅಥವಾ ಓನಿಕ್ಸ್ ರತ್ನ ಧರಿಸುವುದರಿಂದ ಒಳ್ಳೆಯದಾಗುತ್ತದೆ.

Comments are closed.