Neer Dose Karnataka
Take a fresh look at your lifestyle.

ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟ ಆಯ್ಕೆ ಸಮಿತಿ; ವಿಶ್ವಕಪ್ ತಂಡ ಘೋಷಣೆ: ಆಯ್ಕೆಯಾದ ಬಲಾಢ್ಯ ಆಟಗಾರರು ಯಾರ್ಯಾರು ಗೊತ್ತೇ?? ಫ್ಯಾನ್ಸ್ ಅಸಮಾಧಾನ.

ಬಿಸಿಸಿಐ ನಿನ್ನೆ ಸಭೆ ನಡೆಸಿ, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿ ಪ್ರಕಟಣೆ ಮಾಡಿದೆ, ಈ ಬಾರಿ ಐಸಿಸಿ ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಗೆಲ್ಲಬೇಕು ಎನ್ನುವುದು ಎಲ್ಲರ ಆಸೆ ಆಗಿದೆ. ಏಷ್ಯಾಕಪ್ ನಲ್ಲಿ ಭಾರತ ತಂಡ ಸೋತಿದ್ದರು ಸಹ, ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಮಾಡದೆ ಇರುವುದು ಶಾಕ್ ತಂದಿದೆ. ಈ ಬಾರಿ ಆಯ್ಕೆಯಾಗಿರುವ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಅವರು ಇದೇ ಮೊದಲ ಸಾರಿ ಐಸಿಸಿ ವರ್ಲ್ಡ್ ಕಪ್ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯಾಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು ಸಹ ಕೆ.ಎಲ್.ರಾಹುಲ್ ಅವರನ್ನು ಆರಂಭಿಕ ಬ್ಯಾಟ್ಸ್ಮನ್ ಹಾಗೂ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಮರಳಿರುವುದು ತಂಡದ ಬೌಲಿಂಗ್ ಶಕ್ತಿ ಹೆಚ್ಚಿಸಿದೆ. ರವೀಂದ್ರ ಜಡೇಜಾ ಅವರ ಬದಲು ರವಿ ಬಿಶ್ನೋಯ್ ಅವರಿಗೆ ಸ್ಥಾನ ಸಿಕ್ಕಿದೆ. ಏಷ್ಯಾಕಪ್ ನಲ್ಲಿದ್ದ ಬಹುತೇಕ ತಂಡ ಟಿ20 ವಿಶ್ವಕಪ್ ನಲ್ಲಿ ಕೂಡ ಮುಂದುವರೆದಿದೆ. ವಿರಾಟ್ ಕೋಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಆರಂಭದ ಕ್ರಮಾಂಕದ ಬ್ಯಾಟ್ಸ್ಮನ್ ಗಳಾಗಿದ್ದು, ನಂತರ ದೀಪಕ್ ಹೂಡಾ ಸಹ ಸೇರ್ಪಡೆಯಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಆಲ್ ರೌಂಡರ್, ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್, ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಯ್ಕೆಯಾಗಿದ್ದಾರೆ. ಯುಜವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ ಸ್ಪಿನ್ ಬೌಲರ್ ಗಳಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಅಕ್ಷರ್ ಪಟೇಲ್ ಇದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ವೇಗಿಗಳಾಗಿದ್ದಾರೆ. ಮೊಹಮ್ಮದ್ ಶಮಿ, ರವಿ ಬಿಶ್ನೋಯ್, ದೀಪಕ್ ಚಹರ್, ಶ್ರೇಯಸ್ ಅಯ್ಯರ್ ಈ ನಾಲ್ವರು ಸ್ಟ್ಯಾಂಡ್ ಬೈ ಆಟಗಾರರಾಗಿರುತ್ತಾರೆ.

ಟಿ20 ವಿಶ್ವಕಪ್ ಭಾರತ ತಂಡ :- ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ವೈಸ್ ಕ್ಯಾಪ್ಟನ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್. ಸ್ಟ್ಯಾಂಡ್ ಬೈ ಆಟಗಾರರು :- ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

Comments are closed.