Neer Dose Karnataka
Take a fresh look at your lifestyle.

ನಿಮಿಷಗಳಲ್ಲಿ ಕೋಟಿ ಕೋಟಿ ದುಡಿಯುವ ರೇಸರ್ ಐಶ್ವರ್ಯ, ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಇರಲು ಪಡೆದ ಸಂಭಾವನೆ ಎಷ್ಟು ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಈ ಬಾರಿ ಬಹಳ ವಿಶೇಷತೆಯಿಂದ ಕೂಡಿದೆ, 9 ಪ್ರವೀಣರು ಮತ್ತು 9 ನವೀನರು ಈ ಸಾರಿ ಬಿಗ್ ಬಾಸ್ ಮನೇ ಪ್ರವೇಶಿಸಿದ್ದು, ಈಗಾಗಲೇ ಮೊದಲ ವಾರ ಕಳೆದು, ಮೊದಲ ಎಲಿಮಿನೇಷನ್ ಸಹ ನಡೆದಿದೆ. ಮೊದಲ ವಾರದಲ್ಲೇ ಮನೆಯಿಂದ ಹೊರಹೋಗಲು 12 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರಲ್ಲಿ ಮೂವರನ್ನು ಶನಿವಾರದ ಸಂಚಿಕೆಯಲ್ಲಿ ಸೇಫ್ ಮಾಡಿದ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಎಲಿಮಿನೇಶನ್ ನಡೆಸಿದರು. ಬೈಕ್ ರೆಸಾರ್ಟ್} ಐಶ್ವರ್ಯ ಪಿಸ್ಸೇ ಅವರು ಮೊದಲ ವಾರ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ರೇಸರ್ ಆಗಿರುಗ ಐಶ್ವರ್ಯ ಪಿಸ್ಸೇ ಅವರು ವಿಶ್ವಮಟ್ಟದಲ್ಲಿ ದಾಖಲೆ ಮಾಡಿದ್ದಾರೆ, ಸತತವಾಗಿ ವರ್ಲ್ಡ್ ಚಾಂಪಿಯನ್ಶಿಪ್ ಗೆದ್ದಿದ್ದಾರೆ. ಹಲವು ಸಾಧನೆಗಳನ್ನು ಮಾಡಿರುವ ಐಶ್ವರ್ಯ ಅವರನ್ನು ಕಿಚ್ಚ ಸುದೀಪ್ ಅವರೇ ಮೆಚ್ಚಿಕೊಂಡಿದ್ದರು. ಆದರೆ ಇವರು ಸಿನಿಮಾ ಅಥವಾ ಮನರಂಜನೆಯ ಕ್ಷೇತ್ರದಲ್ಲಿ ಇರದ ಕಾರಣ, ಮನೆಯಲ್ಲಿ ಎಲ್ಲರ ಜೊತೆಗೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟಪಟ್ಟರು, ಹಾಗೆಯೇ ಜನರಿಗೆ ಮನರಂಜನೇ ನೀಡುವಲ್ಲಿ ಕೂಡ ಹಿಂದೆ ಬಿದ್ದರು, ಇಡೀ ವಾರ ಐಶ್ವರ್ಯ ಅವರು ಮನೆಯೊಳಗೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ, ವೀಕ್ಷಕರಿಗೆ ಇಂಪ್ರೆಸ್ ಆಗುವ ಹಾಗೆ ಹೆಚ್ಚಿನದೇನನ್ನು ಮಾಡಿರಲಿಲ್ಲ.

ಈ ಕಾರಣಗಳಿಂದಲೋ ಏನೋ, ಐಶ್ವರ್ಯ ಪಿಸ್ಸೇ ಅವರು ಕಡಿಮೆ ವೋಟ್ಸ್ ಪಡೆದು, ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್ ಮನೆಯೊಳಗೆ ಐಶ್ವರ್ಯ ಅವರು ದಿವ್ಯ ಉರುಡುಗ ಅವರೊಡನೆ ಬಹಳ ಆತ್ಮೀಯವಾಗಿದ್ದರು, ಮೊದಲ ವಾರವೇ ಅವರು ಮನೆಯಿಂದ ಹೊರಬಂದಿರುವುದು ದಿವ್ಯ ಅವರಿಗೂ ಬೇಸರ ತಂದಿದೆ. ಇನ್ನು ಮೊದಲ ವಾರ ಎಲಿಮಿನೇಟ್ ಆದ ಐಶ್ವರ್ಯ ಅವರು ಬೈಕ್ ರೇಸಿಂಗ್ ನಲ್ಲಿ ಕೋಟಿ ಕೋಟಿ ಹಣ ಪಡೆಯುತ್ತಾರೆ, ಆದರೆ ಬಿಗ್ ಬಾಸ್ ಮನೆಯಲ್ಲಿ ಇವರು ಒಂದು ವಾರಕ್ಕೆ ಪಡೆದ ಸಂಭಾವನೆ ಎಷ್ಟು ಎಂದು ಚರ್ಚೆ ಶುರುವಾಗಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ, ಐಶ್ವರ್ಯ ಪಿಸ್ಸೇ ಅವರು ಒಂದು ವಾರಕ್ಕೆ ₹1.30 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ.

Comments are closed.