Neer Dose Karnataka
Take a fresh look at your lifestyle.

ಎರಡನೇ ಪಂದ್ಯವನ್ನು ಗೆದ್ದು ಬೀಗಿದ ಬೆನ್ನಲ್ಲೇ ಭಾರತ ತಂಡಕ್ಕೆ ಆತಂಕ ಶುರು. ಏನಾಗಿದೆ ಗೊತ್ತೇ??

ನಿನ್ನೆ ಗುವಾಹಟಿಯಲ್ಲಿ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ 2ನೇ ಟಿ20 ಮ್ಯಾಚ್ ನಲ್ಲಿ, ಸ್ಟೇಡಿಯಂ ನಲ್ಲಿ ನಡೆದ ಎರಡು ಇನ್ನಿಂಗ್ಸ್ ಇಂದ 458 ರನ್ ಗಳು ಬಂದವು, ಒಂದು ಸೆಂಚುರಿ, ಮೂರು ಹಾಫ್ ಸೆಂಚುರಿ ಗಳು ಬಂದವು. ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್, ವಿರಾಟ್ ಕೋಹ್ಲಿ, ಕೆ.ಎಲ್.ರಾಹುಲ್ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿನ್ನೆಯ ಪಂದ್ಯದಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ, ಭಾರತ ತಂಡ ನಿನ್ನೆಯ ಪಂದ್ಯವನ್ನು ಗೆದ್ದಿದ್ದರು, ಸಹ ಆತಂಕ ಮಾತ್ರ ಕಡಿಮೆ ಆಗಿಲ್ಲ. ಅದೊಂದು ವಿಚರದಲ್ಲಿ ಭಾರತ ಹಿನ್ನಡೆ ಅನುಭವಿಸುತ್ತಿದೆ..ಇತ್ತ ದಕ್ಷಿಣ ಆಫ್ರಿಕಾ ತಂಡಕ್ಕೆ ಪಂದ್ಯ ಸೋತಿದ್ದರು ಕೆಲವು ವಿಚಾರ ಒಳ್ಳೆಯದೇ ನಡೆದಿದೆ..

ದಕ್ಷಿಣ ಆಫ್ರಿಕಾ ತಂಡದ ಡೇವಿಡ್ ಮಿಲ್ಲರ್ ಅವರು ಸೆಂಚುರಿ ಭಾರಿಸಿದರು, ಡಿ ಕಾಕ್ ಅವರು ಅರ್ಧ ಶತಕ ಭಾರಿಸಿದರು ಅವರ ತಂಡಕ್ಕೆ ಇದು ಒಳ್ಳೆಯ ವಿಚಾರವೇ ಆಗಿದೆ. ಆದರೆ ಭಾರತ ತಂಡ ಗೆದ್ದಿದ್ದರು ಸಹ, ಬೌಲಿಂಗ್ ಲೈನಪ್ ಸಮಸ್ಯೆ ಕಡಿಮೆ ಆಗಿಲ್ಲ. ಅದರಲ್ಲೂ ಡೆತ್ ಓವರ್ ಗಳಲ್ಲಿ ಭಾರತ ತಂಡ ಆಕ್ರಮಣಕಾರಿ ಬೌಲಿಂಗ್ ಮಾಡುತ್ತಿಲ್ಲ. ಜಸ್ಪ್ರೀತ್ ಬುಮ್ರ ಅವರು ಭಾರತ ತಂಡದಿಂದ ದೂರ ಉಳಿದಿರುವುದು ನಿಜಕ್ಕೂ ಈಗ ನಷ್ಟವಾಗಿದೆ. ಆರಂಭದ ಓವರ್ ಗಳಲ್ಲಿ ಭಾರತ ತಂಡ ಉತ್ತಮವಾಗಿಯೇ ಬೌಲಿಂಗ್ ಮಾಡಿದರು ಸಹ, 7ನೇ ಓವರ್ ನಂತರ ತಲೆಕೆಳಗಾಯಿತು. ಅದರಲ್ಲು ಕೊನೆಯ 5 ಓವರ್ ಗಳಲ್ಲಿ ಭಾರತ ತಂಡ ಬರೋಬ್ಬರಿ 78 ರನ್ ಬಿಟ್ಟುಕೊಟ್ಟಿತು. ಭುವನೇಶ್ವರ್ ಕುಮಾರ್ ಅವರು ಡೆತ್ ಓವರ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಅವರ ಬದಲಾಗಿ ಅರ್ಷದೀಪ್ ಸಿಂಗ್ ಅವರನ್ನು ಕಳಿಸಲಾಯಿತು.

ಆದರೆ ಅರ್ಷದೀಪ್ ಸಿಂಗ್ ಅವರು ಸಹ 19ನೇ ಓವರ್ ನಲ್ಲಿ ಕಳಪೆ ಪ್ರದರ್ಶನವನ್ನೇ ನೀಡಿದರು. 19ನೇ ಓವರ್ ನಲ್ಲಿ ಬರೋಬ್ಬರಿ 26 ರನ್ ಬಿಟ್ಟುಕೊಟ್ಟರು ಅರ್ಷದೀಪ್ ಸಿಂಗ್. ಈ ಕೊರತೆಗಳು ನಿನ್ನೆಯ ಪಂದ್ಯದ ಮೂಲಕ ಭಾರತ ತಂಡಕ್ಕೆ ಅರ್ಥವಾಗಿದೆ. ರೋಹಿತ್ ಶರ್ಮಾ ಅವರು ಸಹ ಇದರ ಬಗ್ಗೆ ಮಾತನಾಡಿ ಬೌಲಿಂಗ್ ವಿಭಾಗ ಸುಧಾರಿಸಬೇಕಿದೆ ಎಂದು ಹೇಳಿದರು. ಜಸ್ಪ್ರೀತ್ ಬುಮ್ರ ಅವರ ಅಲಭ್ಯತೆಯಿಂದ ಅವರ ಬದಲಾಗಿ ಒಬ್ಬ ಆಟಗಾರನನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿದ್ದು, ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗುತ್ತಾ ಎಂದು ಕಾದು ನೋಡಬೇಕಿದೆ.

Comments are closed.