Neer Dose Karnataka
Take a fresh look at your lifestyle.

40 ವರ್ಷಕ್ಕೂ ಮುನ್ನವೇ ಬಿಳಿ ಕೂದಲ ಸಮಸ್ಯೆಯೇ?? ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಮನೆಮದ್ದು ಟ್ರೈ ಮಾಡಿ. ಕೂದಲನ್ನು ಕಪ್ಪಾಗಿಸಿ.

ಈಗಿನ ಕಾಲದಲ್ಲಿ ಬಿಳಿ ಕೂದಲಿನ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ವಯಸ್ಸಿನ ವ್ಯತ್ಯಾಸ ಇಲ್ಲದೆ ಚಿಕ್ಕ ವಯಸ್ಸಿನವರಲ್ಲು ಬಿಳಿ ಕೂದಲು ಸಮಸ್ಯೆ ಕಾಡುತ್ತಿದೆ. ಬಿಳಿ ಕೂದಲು ಬರಲು ಹಲವು ಕಾರಣ ಇರಬಹುದು. ಇದರಿಂದ ಮುಕ್ತಿ ಪಡೆಯಲು ಮಾರ್ಕೆಟ್ ನಲ್ಲಿ ಸಿಗುವ ಹಲವು ರೀತಿಯ ಎಣ್ಣೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅದ್ಯಾವುದನ್ನು ಬಳಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಅದರ ಬದಲಾಗಿ ಮನೆಯಲ್ಲಿ ನೈಸರ್ಗಿಕವಾಗಿ ಮನೆಮದ್ದುಗಳನ್ನು ಮಾಡಿಕೊಂಡು, ಅದರಿಂದಾಗಿ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆ ಮನೆಮದ್ದುಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಕೂದಲು ಬಿಳಿಯಾಗಲು ಕಾರಣ ಒತ್ತಡ, ಆರೋಗ್ಯ ಸಮಸ್ಯೆ, ಕಳಪೆ ಆಹಾರ, ರೋಗಗಳು ಎಲ್ಲವೂ ಕಾರಣ ಆಗಿರುತ್ತದೆ. ಇವುಗಳಿಂದ ಬಹಳ ಬೇಗ ಕೂದಲು ಬಿಳಿಯಾಗುತ್ತದೆ. ಇದರಿಂದ ಮಾನಸಿಕ ಸಮಸ್ಯೆ ಸಹ ಶುರುವಾಗುತ್ತದೆ. ಆದರೆ ನಿಮ್ಮ ಕೂದಲನ್ನು ಕಪ್ಪಾಗಿ ಮಾಡಲು ಹೆಚ್ಚು ಟೆನ್ಷನ್ ತೆಗೆದುಕೊಳ್ಳಬೇಡಿ ನೈಸರ್ಗಿಕ ವಿಧಾನಗಳಿಂದ ಕೂದಲನ್ನು ಕಪ್ಪಾಗಿ ಮಾಡಬಹುದು, ಇದಕ್ಕೆ ಹೆಚ್ಚು ಹಣ ಖರ್ಚಾಗುವುದಿಲ್ಲ. ಈ ಎಣ್ಣೆಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ಬೇಕಾದ ಪದಾರ್ಥಗಳು ಒಂದು ಕಪ್ ಸಾಸಿವೆ ಎಣ್ಣೆ, ಒಂದು ಲೋಟ ನೀರು, ಕರಿಬೇವು, ಅಲೋವೆರಾ, ಕಲೋಂಜಿ, ಫ್ಲ್ಯಾಕ್ಸ್ ಸೀಡ್ಸ್, ಕಪ್ಪು ಜೀರಿಗೆ..

ಮಾಡುವ ವಿಧಾನ :- ಒಂದು ಲೋಟ ನೀರು ತೆಗೆದುಕೊಂಡು ಅದನ್ನು ಕುದಿಸಿ, ಕುದಿಯುವಾಗ, ಕರಿಬೇವಿನ ಎಲೆಗಳು ಮತ್ತು ಆಲೋವೆರಾ ಹಾಕಿ, ಮತ್ತು ಒಂದು ಸ್ಪೂನ್ ಅಗಸೆ ಬೀಜಗಳು, ಒಂದು ಸ್ಪೂನ್ ಕಪ್ಪು ಜೀರಿಗೆ, ಹಾಗೂ ಫೆನಿಲ್ ಸೀಡ್ಸ್ ಹಾಕಿ, ನೀರು ಕುದಿದು ಅರ್ಧಕ್ಕಿಂತ ಕಡಿಮೆ ಆದಾಗ, ಸಾಸಿವೆ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಇದು ಎಣ್ಣೆಯ ಹಾಗೆ ಆದಾಗ, ವಾರದಲ್ಲಿ ಎರಡು ಸಾರಿ ತಲೆಗೆ ಹಚ್ಚಿ, ಸ್ನಾನ ಮಾಡಿ. ಇದರಿಂದ ನೀವು ಬಿಳಿ ಕೂದಲು ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.40 ವರ್ಷಕ್ಕೂ ಮುನ್ನವೇ ಬಿಳಿ ಕೂದಲ ಸಮಸ್ಯೆಯೇ?? ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಮನೆಮದ್ದು ಟ್ರೈ ಮಾಡಿ. ಕೂದಲನ್ನು ಕಪ್ಪಾಗಿಸಿ.

Comments are closed.