Neer Dose Karnataka
Take a fresh look at your lifestyle.

ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡುವ ಕನಸು ಹೊತ್ತಿದ್ದ ಕಾಂತಾರ 5 ದಿನಕ್ಕೆ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತೇ?? ಇಷ್ಟೇನಾ??

ರಿಷಬ್ ಶೆಟ್ಟಿ ಅವರು ರಚಿಸಿ, ನಿರ್ದೇಶನ ಮಾಡಿ ನಟನೆ ಮಾಡಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ, ಅಂದು ತೆರೆಕಂಡ ಬಿಗ್ ಸಿನಿಮಾ ಪೊನ್ನಿಯಿನ್ ಸೆಲ್ವನ್ ಮತ್ತು ಹಿಂದಿಯ ವಿಕ್ರಂ ವೇದ ಸಿನಿಮಾಗೆ ಭರ್ಜರಿಯಾಗಿ ಠಕ್ಕರ್ ಕೊಡುತ್ತಿದೆ. ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿರುವ ಸಮಯಕ್ಕೆ ಕಾಂತಾರ ಸಿನಿಮಾ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ, ಕನ್ನಡ ಸಿನಿಪ್ರಿಯರು ಫ್ಯಾಮಿಲಿ ಸಮೇತ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಸಿನಿಮಾ ಬಗ್ಗೆ ಒಳ್ಳೆಯ ರಿವ್ಯೂ ಬರುತ್ತಿದ್ದು, ವಾರದ ದಿನಗಳಲ್ಲೂ ಕರ್ನಾಟಕದ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ ಕಾಂತಾರ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಆಗಿರದೆ, ಕನ್ನಡದಲ್ಲಿ ಮಾತ್ರ ಕಾಂತಾರ ಸಿನಿಮಾ ತೆರೆಕಂಡಿದ್ದು, ಹೈದರಾಬಾದ್, ಚೆನ್ನೈ ಮತ್ತು ದೇಶದ ಹಲವೆಡೆ ಕನ್ನಡ ಭಾಷೆಯಲ್ಲೇ ಬಿಡುಗಡೆ ಆಗಿದೆ, ಪ್ಯಾನ್ ಇಂಡಿಯಾ ಸಿನಿಮಾ ಆಗಿಲ್ಲದ ಕಾರಣ ಕಾಂತಾರ ಸಿನಿಮಾ ಮೊದಲ ದಿನ ಹೆಚ್ಚು ಹಣ ಗಳಿಕೆ ಮಾಡಲಿಲ್ಲ, ಮೊದಲ ದಿನ ಒಳ್ಳೆಯ ರಿವ್ಯೂಗಳು ಬಂದ ಬಳಿಕ, ಕಾಂತಾರ ಸಿನಿಮಾ ನೋಡುವ ಜನರ ಸಂಖ್ಯೆ ಹೆಚ್ಚಾಯಿತು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೊರರಾಜ್ಯಗಳಲ್ಲಿ ಸಹ ಕಾಂತಾರ ಸಿನಿಮಾ ನೋಡುತ್ತಿರುವವರ ಸಂಖ್ಯೆ ಜಾಸ್ತಿಯಾಗಿದ್ದು, ಶೋಗಳು ಸಹ ಜಾಸ್ತಿಯಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ.

ಇನ್ನು ಬಿಡುಗಡೆಯಾದ ಐದು ದಿನಗಳಲ್ಲಿ ಕಾಂತಾರ ಸಿನಿಮಾ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಮೊದಲ ದಿನ 2.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು, ಎರಡನೆಯ ದಿನ ಹೆಚ್ಚಾಗಿ 4.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು, ಮೂರನೆಯ ದಿನ 7.50 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, 4ನೇ ದಿನ 4.50 ಕೋಟಿ ರೂಪಾಯಿ, ಐದನೇ ದಿನ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ಐದು ದಿನಗಳಲ್ಲಿ ಸುಮಾರು 25ಕೋಟಿ ರೂಪಾಯಿ ಗಳಿಕೆ ಮಾಡಿದೆ, ಮುಂದಿನ ದಿನಗಳಲ್ಲಿ 50 ಕೋಟಿ ವರೆಗು ಬ್ಯುಸಿನೆಸ್ ಮಾಡುವ ನಿರೀಕ್ಷೆ ಇದೆ. ಸಿನಿಮಾಗೆ ಡಿಮ್ಯಾಂಡ್ ಹೆಚ್ಚಾಗುತ್ತಿರುವ ಕಾರಣ ತಮಿಳು ಮತ್ತು ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಾಂತಾರ ಸಿನಿಮಾ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಅಧಿಕೃತ ಮಾಹಿತಿ ಸಿಗಬೇಕಿದೆ.

Comments are closed.