Neer Dose Karnataka
Take a fresh look at your lifestyle.

ಉತ್ತಮಾವಾಗಿ ಬ್ಯಾಟಿಂಗ್ ಮಾಡಿದರೂ ಕೂಡ ಕಾಯಂ ಸ್ಥಾನ ಇಲ್ಲದಿರುವಾಗ ಶಿಖರ್ ಧವನ್ ಟಾರ್ಗೆಟ್ ಏನು ಅಂತೇ ಗೊತ್ತೇ??

ಭಾರತ ತಂಡದ ಬಲಿಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ಶಿಖರ್ ಧವನ್ ಅವರು ಕಳೆದ ಒಂದೆರಡು ವರ್ಷಗಳಿಂದ ಸ್ಥಿರವಾದ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಶಿಖರ್ ಧವನ್ ಅವರು ಭಾರತ ವರ್ಸಸ್ ಸೌತ್ ಆಫ್ರಿಕಾ ತಂಡಗಳ 3 ಓಡಿಐ ಮ್ಯಾಚ್ ಸರಣಿಗೆ ಭಾರತ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಕಟ್ಟು ಶ್ರೀಲಂಕಾ ಟೂರ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿ, ಕ್ಯಾಪ್ಟನ್ಸಿಯಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದ್ದರು.

ಇಂದು ಲಕ್ನೌ ನಲ್ಲಿ ಭಾರತ ವರ್ಸಸ್ ಸೌತ್ ಆಫ್ರಿಕಾ ಮೊದಲ ಓಡಿಐ ಪಂದ್ಯ ನಡೆಯಲಿದ್ದು, ನಿನ್ನೆ ಮಳೆಯ ಕಾರಣದಿಂದ ಭಾರತದ ಅಭ್ಯಾಸ ಪಂದ್ಯ ರದ್ದಾಗಿತ್ತು. ಇಂದು ಪಂದ್ಯ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ನಿನ್ನೆ ನಡೆದ ಪ್ರೆಸ್ ಮೀಟ್ ನಲ್ಲಿ ಶಿಖರ್ ಧವನ್ ಅವರು ಮಾತನಾಡಿದ್ದು, ತಮ್ಮ ವೃತ್ತಿಯ ಇಷ್ಟು ವರ್ಷಗಳ ಜರ್ನಿ ಬಗ್ಗೆ ಮಾತನಾಡಿ, ” ಇಷ್ಟು ವರ್ಷಗಳ ಕಾಲ ನನ್ನ ಕ್ರಿಕೆಟ್ ಜರ್ನಿ ಬಹಳ ಸುಂದರವಾಗಿತ್ತು ಎಂದು ನಾನು ಭಾವಿಸುತ್ತೇನೆ. ನನಗೆ ಸಮಯ ಸಿಕ್ಕಾಗಲೆಲ್ಲಾ ನನ್ನಲ್ಲಿರುವ ಜ್ಞಾನವನ್ನು ಯುವಕರ ಜೊತೆಗೆ ಹಂಚಿಕೊಳ್ಳುತ್ತೇನೆ. ಈಗ ನನಗೆ ಹೊಸ ಜವಾಬ್ದಾರಿ ಸಿಕ್ಕಿದೆ, ಸವಾಲಿನಲ್ಲಿ ನಾನು ಅವಕಾಶವನ್ನು ಹುಡುಕುತ್ತಿದ್ದೇನೆ..

ಅದು ನನಗೆ ಸಂತೋಷ ಕೊಡುತ್ತದೆ. ಪ್ರಸ್ತುತ ನನ್ನ ಗುರಿ 2023 ರ ವಿಶ್ವಕಪ್. ಅದಕ್ಕಾಗಿ ನನ್ನನ್ನು ನಾನು ಫಿಟ್ ಆಗಿ ಇರಿಸಿಕೊಳ್ಳಲು ಬಯಸುತ್ತೇನೆ. ಒಳ್ಳೆಯ ಮನಸ್ಥಿತಿಯಲ್ಲಿ ಕಣದಲ್ಲಿರಲು ಬಯಸುತ್ತೇನೆ..” ಎಂದು ಹೇಳಿದ್ದಾರೆ ಶಿಖರ್ ಧವನ್. ಇಂದು ನಡೆಯುವ ಪಂದ್ಯದಲ್ಲಿ ಪ್ಲೇಯಿಂಗ್ 11 ಹೀಗಿದೆ.. ಶಿಖರ್ ಧವನ್ (ಕ್ಯಾಪ್ಟನ್), ರುತುರಾಜ್ ಗಾಯಕ್ವಾಡ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ (ವೈಸ್ ಕ್ಯಾಪ್ಟನ್), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲ‌ದೀಪ್ ಯಾದವ್ , ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಾಹರ್.

Comments are closed.