Neer Dose Karnataka
Take a fresh look at your lifestyle.

ಸಿನೆಮಾಗಳಲ್ಲಿ ಲಾಸ್ ಆಗಿ ಮನೆಯನ್ನು ಕಳೆದುಕೊಂಡಿರುವ ರವಿಚಂದ್ರನ್ ರವರ ಮಾತು ಕೇಳಿ ದರ್ಶನ್ ಮಾಡಿದ್ದೇನು ಗೊತ್ತೇ?? ಶಾಕ್ ಆದ ಚಿತ್ರರಂಗ.

336

ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಮನರಂಜನೆಯ ಮಾಂತ್ರಿಕ ನಟ ರವಿಚಂದ್ರನ್ ಅವರು 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣ ಮಾಡಿ, ಕಥೆ ಬರೆದು, ಸಾಹಿತ್ಯ ಬರೆದು, ಸಂಗೀತ ನೀಡಿ ಕನ್ನಡ ಸಿನಿಮಾ ಪ್ರಿಯರನ್ನು ರಂಜಿಸಿದ್ದಾರೆ. ಆದರೆ ಕೆಲ ಸಮಯದಿಂದ ರವಿಚಂದ್ರನ್ ಅವರು ಬಹಳ ನೊಂದಿದ್ದಾರೆ. ರವಿಚಂದ್ರನ್ ಅವರ ಸಿನಿಮಾಗಳು ಮೊದಲಿನ ಹಾಗೆ ಓಡುತ್ತಿಲ್ಲ, ಜನರನ್ನು ತಲುಪುತ್ತಿಲ್ಲ ಎಂದು ರವಿಚಂದ್ರನ್ ಅವರಿಗೆ ಬಹಳ ನೋವಾಗಿದೆ. ಇತ್ತೀಚೆಗೆ ತಾವು ಹುಟ್ಟಿ ಬೆಳೆದ ಮನೆಯನ್ನು ಸಹ ಖಾಲಿ ಮಾಡಿದರು ಕ್ರೇಜಿಸ್ಟಾರ್..

ರಿಯಾಲಿಟಿ ಶೋ ಒಂದರಲ್ಲಿ ರವಿಚಂದ್ರನ್ ಅವರು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡರು.. ನಾನು ಹುಟ್ಟಿ ಬೆಳೆದ ಮನೆಯನ್ನು ಖಾಲಿ ಮಾಡಿರುವುದು ನಿಜ. ಮನಸ್ಸಿಗೆ ಬೇಸರ ಆಗಿದೆ.. ಒಂದು ತಿಂಗಳಿನಿಂದ ನಮು ಬದಲಾಗಿದ್ದೇನೆ, ಬದಲಾಗಬೇಕು ಎಂದೇ ಬದಲಾಗಿದ್ದೇನೆ.. ಜನರು ನನ್ನ ಸಿನಿಮವನ್ನ ಇಷ್ಟ ಪಡುತ್ತಾ ಇಲ್ಲ.. ನಾನು ತುಂಬಾ ಹಣ ಸಂಪಾದನೆ ಮಾಡಿದ್ದೀನಿ. ಸಂಪಾದನೇ ಮಾಡಿದ ಎಲ್ಲಾ ಹಣವನ್ನ ಸಿನಿಮಾ ಮೇಲೆಯೇ ಹಾಕಿದ್ದೀನಿ. ನಾನು ವಾಪಸ್ ಬರ್ತೀನಿ. ಮತ್ತೆ ಸಿನಿಮಾ ಮಾಡ್ತೀನಿ.. ಜನರು ನನ್ನ ಸಿನಿಮಾಗಳನ್ನ ನೋಡಲು ಥಿಯೇಟರ್ ಗೆ ಮತ್ತೆ ಬರುವ ಹಾಗೆ ಮಾಡ್ತೀನಿ..ಎಂದು ಭಾವುಕರಾದರು ನಟ ರವಿಚಂದ್ರನ್.

ರವಿಚಂದ್ರನ್ ಅವರ ಈ ಮಾತು ಕೇಳಿ ದರ್ಶನ್ ಅವರ ಮನಸ್ಸಿಗೆ ಬಹಳ ನೋವಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ದರ್ಶನ್ ಅವರು, “ರವಿಚಂದ್ರನ್ ಅವರು ನಮ್ಮ ಕನ್ನಡ ಚಿತ್ರರಂಗದ ಮೇರು ನಟ. ಅವರು ಇಂದು ಹೀಗಿರೋದು ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಅವರ ಕಷ್ಟ ನಮ್ಮೆಲ್ಲರ ಕಷ್ಟ ಇದ್ದ ಹಾಗೆ. ಕನ್ನಡ ಚಿತ್ರರಂಗದ ನಾವೆಲ್ಲರೂ ರವಿಚಂದ್ರನ್ ಅವರ ಕಷ್ಟಕ್ಕೆ ಜೊತೆಯಾಗಿ ನಿಲ್ಲುತ್ತೇವೆ..” ಎಂದು ಹೇಳಿದ್ದಾರೆ. ಈ ಮೂಲಕ ರವಿಚಂದ್ರನ್ ಅವರ ಕಷ್ಟಕ್ಕೆ ಜೊತೆಯಾಗಿ ಡಿಬಾಸ್ ನಿಂತಿದ್ದು, ದರ್ಶನ್ ಅವರ ಈ ಮಾತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.