Neer Dose Karnataka
Take a fresh look at your lifestyle.

ತೆಲುಗಿನಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡತಿ ನಭಾ ನಟೇಶ್ ರವರಿಗೆ ಅದ್ಯಾಕೆ ರಾತ್ರಿ ಎಂದರೆ ಬಲು ಇಷ್ಟ??

ಸಾಮಾನ್ಯವಾಗಿ ಹಲವಾರು ಜನರು ರಾತ್ರಿ ಎಂದರೆ ತುಂಬಾ ಭಯ ಪಡುತ್ತಾರೆ. ಏಕೆಂದರೆ ರಾತ್ರಿ ಸಮಯದಲ್ಲಿ ಕತ್ತಲೆ ಇರುತ್ತದೆ. ಬಹಳಷ್ಟು ಜನರಿಗೆ ಕತ್ತಲೆ ಎಂದರೆ ಭಯ ಇರುವ ಕಾರಣ ರಾತ್ರಿ ಎಂದರೆ ಇಷ್ಟಪಡುವುದಿಲ್ಲ. ಆದರೆ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಬಹಳ ಹೆಸರು ಮಾಡಿರುವ ನಟಿ ನಭಾ ನಟೇಶ್ ಅವರಿಗೆ ಮಾತ್ರ ಕತ್ತಲೆ ಎಂದರೆ ತುಂಬಾ ಇಷ್ಟ. ಕತ್ತಲೆ ಯಾಕೆ ಇಷ್ಟ ಎನ್ನುವ ಬಗ್ಗೆ ಒಂದು ಫಿಲಾಸಫಿಯನ್ನೇ ಹೇಳುತ್ತಾರೆ ನಭಾ. ರಾತ್ರಿ ಸಮಯದಲ್ಲಿ ಮಿನುಗುವ ನಕ್ಷತ್ರಗಳು ಇರುತ್ತವೆ, ಚಂದಾಮಾಮ ಇರುತ್ತಾನೇ ಎಂದು ಹೇಳುತ್ತಾರೆ ನಭಾ ನಟೇಶ್. ಅಷ್ಟೇ ಅಲ್ಲದೆ, ಚಲಿಸುವ ಮೋಡಗಳು ಸಹ ಇರುತ್ತವೆ ಎಂದು ನಭಾ ಹೇಳುತ್ತಾರೆ.

ನಭಾ ನಟೇಶ್ ಅವರು ಹೇಳುವ ಈ ಮಾತುಗಳನ್ನು ಕೇಳಿದರೆ, ರಾತ್ರಿಯನ್ನು ಇಷ್ಟಪಡದೆ ಇರುವವರು ಸಹ ರಾತ್ರಿಯನ್ನು ಇಷ್ಟಪಡಲು ಶುರು ಮಾಡುತ್ತಾರೆ. ನಭಾ ಅವರು ಹೇಳುವ ಮತ್ತೊಂದು ಕಾರಣ ಏನೆಂದರೆ, ರಾತ್ರಿ ಬಳಿಕ ಹಗಲು, ನಾಳೆ ಬರುತ್ತದೆ ಆ ಕಾರಣಕ್ಕೆ ನನಗೆ ರಾತ್ರಿ ಅಂದ್ರೆ ಇಷ್ಟ ಎನ್ನುತ್ತಾರೆ ನಭಾ..ಈ ಮಾತುಗಳನ್ನು ಕೇಳಿ, ನಭಾ ನಟೇಶ್ ಅವರು ಯೋಚನೇ ಮಾಡುವ ಶಕ್ತಿ ಮತ್ತು ರಾತ್ರಿ ಬಗ್ಗೆ ಅವರು ಹೇಳುವ ಮಾತುಗಳನ್ನು ಕೇಳಿದರೆ, ಯಾರೇ ಆದರೂ ಮಾರುಹೋಗದೆ ಇರಲು ಸಾಧ್ಯವಿಲ್ಲ. ನಭಾ ನಟೇಶ್ ಅವರು ಶಿವಣ್ಣ ಅವರ ವಜ್ರಕಾಯ ಸಿನಿಮಾ ಮೂಲಕ ನಟನೆ ಶುರು ಮಾಡಿದರು.

ಇದಾದ ಬಳಿಕ ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು, ಕನ್ನಡ ಮಾತ್ರವಲ್ಲದೆ, ತೆಲುಗು ಚಿತ್ರರಂಗಕ್ಕೆ ನನ್ನು ದಾಚುಕುಂದುವಟೆ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಅದಾದ ಬಳಿಕ ಇನ್ನು ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು, ನಭಾ ನಟೇಶ್ ಅವರಿಗೆ ತೆಲುಗಿನಲ್ಲಿ ಬಿಗ್ ಬ್ರೇಕ್ ತಂದುಕೊಟ್ಟ ಸಿನಿಮಾ ಇಸ್ಮಾರ್ಟ್ ಶಂಕರ್. ಆ ಸಿನಿಮಾ ನಂತರ ನಭಾ ನಟೇಶ್ ಅವರಿಗೆ ಬೇರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಹೆಚ್ಚಾಗಿ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಭಾ ನಟೇಶ್ ಅವರು, ಫೋಟೋಶೂಟ್ ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

Comments are closed.