Neer Dose Karnataka
Take a fresh look at your lifestyle.

ಕೊನೆಗೂ ಆಧಿಪುರುಷ್ ಟ್ರೈಲರ್ ಬಗ್ಗೆ ಮಾತನಾಡಿದ ಪ್ರಭಾಸ್: ಹೇಳಿದ್ದೇನು ಗೊತ್ತೇ?? ತುಸು ನೆಮ್ಮದಿ ನೀಡಿ ಹೇಳಿದ್ದೇನು ಗೊತ್ತೇ??

ಟಾಲಿವುಡ್ ನ ಬಹುನಿರೀಕ್ಷಿಯ ಸಿನಿಮಾ ಆದಿಪುರುಷ್ ಸಿನಿಮಾ ಟೀಸರ್ ನೋಡಿ, ನೆಟ್ಟಿಗರು ಮತ್ತು ಸಿನಿಮಾ ತಂಡದವರು ಟ್ರೋಲ್ ಮಾಡಿದ್ದರು. ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ನಿರ್ದೇಶಕ ಓಂ ರಾವತ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ರಾಜಕಾರಣಿಗಳು ಸಹ ಆದಿಪುರುಷ್ ಸಿನಿಮಾ ನೋಡಿ ಕೋಪಗೊಂಡಿದ್ದರು, ಆದಿಪುರುಷ್ ಸಿನಿಮಾವನ್ನು, ಬಾಯ್ಕಾಟ್ ಮಾಡಬೇಕು ಎಂದು ಕೆಲವು ಅಭಿಯಾನಗಳು ಸಹ ನಡೆದವು.

ಸೋಷಿಯಲ್ ಮೀಡಿಯಾ ದಲ್ಲಂತು ಆದಿಪುರುಷ್ ಟ್ರೈಲರ್ ಕಾರ್ಟೂನ್ ರೀತಿ ಮೂಡಿಬಂದಿದೆ ಎಂದು ಸಹ ಹೇಳುತ್ತಿದ್ದರು. ಇಷ್ಟು ದಿನಗಳ ಕಾಲ ಆದಿಪುರುಷ್ ಚಿತ್ರತಂಡ ಈಗ ಟೀಸರ್ ಬಗ್ಗೆ ಮಾತನಾಡಿದೆ, ಅದರಲ್ಲೂ ನಟ ಪ್ರಭಾಸ್ ಅವರು ಟೀಸರ್ ಬಗ್ಗೆ ಮಾತನಾಡಿದ್ದಾರೆ, ಟ್ರೋಲ್ ಗಳ ಬಗ್ಗೆ ಪ್ರಭಾಸ್ ಅವರು ಯಾವುದೇ ಮಾತನಾಡಿಲ್ಲ, ಬದಲಾಗಿ ಟೀಸರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದಿಪುರುಷ್ ಸಿನಿಮಾ ಟೀಸರ್ 3ಡಿ ಸ್ಕ್ರೀನಿಂಗ್ ಅನ್ನು ಹೈದರಾಬಾದ್ ನಲ್ಲಿ ಮಾಧ್ಯಮದವರಿಗೆ ಮತ್ತು ಚಿತ್ರರಂಗದ ಕೆಲವರಿಗಾಗಿ ಮಾಡಲಾಗಿತ್ತು, ಇಡೀ ಆದಿಪುರುಷ್ ಚಿತ್ರತಂಡ ಭಾಗಿಯಾಗಿತ್ತು, 3ಡಿ ಟೀಸರ್ ಸ್ಕ್ರೀನಿಂಗ್ ಬಳಿಕ ಪ್ರಭಾಸ್ ಅವರು ಮಾತನಾಡಿದ್ದಾರೆ.

ಈ ರೀತಿಯ ಸಿನಿಮಾ ಟೆಕ್ನಾಲಜಿ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಬಳಸಲಾಗುತ್ತಿದೆ. ಇದು ಥಿಯೇಟರ್ ನಲ್ಲಿ ನೋಡುವ ಸಲುವಾಗಿ ಮಾಡಿರುವ ಸಿನಿಮಾ, ವಿಶೇಷವಾಗಿ 3ಡಿ ಅಲ್ಲೇ ನೋಡಬೇಕು ಎಂದು ಹೇಳಿದ್ದಾರೆ ನಟ ಪ್ರಭಾಸ್. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಹ ಮಾತನಾಡಿ, ಮೊಬೈಲ್ ನಲ್ಲಿ ಟೀಸರ್ ನೋಡಿ ಬಹಳ ಇಷ್ಟ ಆಗಿತ್ತು ಈಗ 3ಡಿಯಲ್ಲಿ ಟೀಸರ್ ನೋಡಿದರೆ ವಾವ್ ಎನ್ನಿಸುತ್ತಿದೆ, ಬಾಹುಬಲಿ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲು ಕೂಡ ತುಂಬಾ ಟ್ರೋಲ್ ಆಗಿತ್ತು, ಬಿಡುಗಡೆಯಾದ ನಂತರ, ಎಷ್ಟು ದೊಡ್ಡ ಮಟ್ಟದ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತಿದೆ, ಆದಿಪುರುಷ್ ಸಿನಿಮಾ ವಿಚಾರದಲ್ಲಿ ಸಹ ಅದೇ ರೀತಿ ಆಗುತ್ತಿದೆ, ಸಿನಿಮಾ ಬಿಡುಗಡೆ ಆದಮೇಲೆ ಎಲ್ಲವೂ ಗೊತ್ತಾಗುತ್ತದೆ..ಎಂದು ಹೇಳಿದ್ದಾರೆ ನಿರ್ಮಾಪಕ ದಿಲ್ ರಾಜು.

Comments are closed.