Neer Dose Karnataka
Take a fresh look at your lifestyle.

ನೆನಪಿದ್ದರ ಖ್ಯಾತ ನಟಿ ಸಿಮ್ರನ್: ಇವರಿಗೆ ಒಂದು ರಾತ್ರಿ ಕಳೆಯಲು ಮುಖದ ಮೇಲೆ ಹಣ ಹಾಕಿದ ಡೈರೆಕ್ಟರ್. ಎಷ್ಟು ಬೇಕಾದ್ರು ಕೊಡುತ್ತಾರಂತೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಸಿಮ್ರನ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ದಶಕಗಳ ಕಾಲ ಇವರು ಸ್ಟಾರ್ ನಟಿಯಾಗಿ ಮೆರೆದದವರು. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಅವರೊಡನೆ ಸಿಂಹದ ಮರಿ ಸಿನಿಮಾ ಮೂಲಕ ಕೆರಿಯರ್ ಶುರು ಮಾಡಿದ ಸಿಮ್ರನ್ ಅವರು ಫೇಮಸ್ ಆಗಿದ್ದು ತೆಲುಗು ಮತ್ತು ತಮಿಳಿನಲ್ಲಿ. ಸ್ಟಾರ್ ಹೀರೋಗಳ ಜೊತೆಗೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಸಿಮ್ರನ್ ನಟಿಸಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ಸ್ಥಾನ ಪಡೆದುಕೊಂಡಿದ್ದಾರೆ.

ಸಿಮ್ರನ್ ಅವರು ತಮ್ಮ ಕೆರಿಯರ್ ಶುರು ಮಾಡಲು ಬಹಳ ಕಷ್ಟಪಟ್ಟರು, ಮಾಡೆಲಿಂಗ್ ಮಾಡುತ್ತಿದ್ದ ಇವರು, ನಂತರ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹಿಂದಿ, ತೆಲುಗು, ತಮಿಳ್ ಮತ್ತು ಮಲಯಾಳಂ ನಲ್ಲಿ ಅನೇಕ ಸಿನಿಮಾಗಳಲ್ಲಿ, ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಳ್ಳುವ ಮೂಲಕ, ಇಂಡಸ್ಟ್ರಿಗೆ ಕಾಲಿಟ್ಟ ಆರಂಭದಲ್ಲೇ ಒಳ್ಳೆಯ ಅವಕಾಶಗಳನ್ನು ಪಡೆದು ಸ್ಟಾರ್ ನಟಿಯ ರೇಂಜ್ ಗೆ ಬೆಳೆದು ನಿಂತರು. ತಮ್ಮ ಸೌಂದರ್ಯದ ಮೂಲಕ ಎಲ್ಲರು ಮಂತ್ರಮುಗ್ಧರಾಗುವ ಹಾಗೆ ಮಾಡುತ್ತಿದ್ದರು. ಮಾ ನನ್ನಾಕು ಪೆಲ್ಲಿ ಎನ್ನುವ ಸಿನಿಮಾದಲ್ಲಿ ಅವರು ನಟಿಸುತ್ತಿದ್ದ ಸಮಯದಲ್ಲಿ, ಸಿಮ್ರನ್ ಅವರು ತುಂಬಾ ಬ್ಯುಸಿ ಆಗಿದ್ದರು, ಆಗ ಅವರ ಡೇಟ್ಸ್ ಪಡೆಯುವುದು ಬಹಳ ಕಷ್ಟವಾಗಿತ್ತು. ಸಿನಿಮಾ ನಿರ್ಮಾಪಕರು ಅವರ ಡೇಟ್ಸ್ ಪಡೆಯಲು ಕ್ಯೂ ನಿಲ್ಲುತ್ತಿದ್ದರು ಎಂದು ಹೇಳಬಹುದು.

ಹೊಸದಾಗಿ ಬಂದ ನಟಿ ತಮ್ಮ ಸೌಂದರ್ಯ, ಉತ್ತಮ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದರು. ಆಗ ಒಬ್ಬ ನಿರ್ದೇಶಕರು ಸಿಮ್ರನ್ ಅವರ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ಡೇಟ್ಸ್ ಬೇಕು ಎಂದು ಕೇಳಿದರಂತೆ, ಅದಕ್ಕೆ ಅವರು ಮೇಡಂ ಡೇಟ್ಸ್ ಖಾಲಿ ಎಂದು ಹೇಳಿದ್ದಕ್ಕೆ, ಆ ನಿರ್ದೇಶಕರು ನಿಮ್ಮ ಮೇಡಂ ಗೆ ಎಷ್ಟು ಬೇಕೋ ಅಷ್ಟು ಕೊಡ್ತೇನೆ ಎಂದು ಹೇಳಿದರಂತೆ. ಹಾಗೆ ಒಂದು ದಿನ ಸಿಮ್ರನ್ ಅವರ ಮನೆಗೆ ಹೋಗಿ, ನೀನು ನನ್ನ ಸಿನಿಮಾದಲ್ಲಿ ನಟಿಸಲೇಬೇಕು ಎಂದು ನೋಟುಗಳ ಕಂತೆಯನ್ನು ಸಿಮ್ರನ್ ಅವರ ಮುಖದ ಮೇಲೆ ಬಿಸಾಕಿದರಂತೆ. ಆಗಿನ ಸಮಯದಲ್ಲಿ ಈ ಸುದ್ದಿ ಭಾರಿ ವೈರಲ್ ಆಗಿತ್ತಂತೆ, ಇದರಿಂದ ಬಹಳ ನೊಂದುಕೊಂಡ ಸಿಮ್ರನ್ ಅವರು ಕೆಲ ಸಮಯ ಯಾರ ಜೊತೆಯಲ್ಲೂ ಮಾತನಾಡುತ್ತಿರಲಿಲ್ಲವಂತೆ. ನಂತರ ಆ ನಿರ್ದೇಶಕ ಜೊತೆಗೆ ಒಂದು ಸಿನಿಮಾವನ್ನು ಕೂಡ ಮಾಡಲಿಲ್ಲವಂತೆ.

Comments are closed.