Neer Dose Karnataka
Take a fresh look at your lifestyle.

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿಯೇ ಜಮೀರ್ ಪುತ್ರನ ಮುಂದೆ ದರ್ಶನ್ ಓಪನ್ ಚಾಲೆಂಜ್. ಏನಾಗುತ್ತಿದೆ ಗೊತ್ತೇ??

741

ಕನ್ನಡಕ್ಕೆ ಈಗ ಹೊಸ ಪ್ರತಿಭೆ ಎಂಟ್ರಿ ಕೊಡುತ್ತಿದೆ, ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮಗ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬನಾರಸ್ ಸಿನಿಮಾವನ್ನು ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ. ಇದೊಂದು ಟೈಮ್ ಟ್ರಾವೆಲ್ ಕಾನ್ಸೆಪ್ಟ್ ನಲ್ಲಿ ಮೂಡಿಬಂದಿರುವ ಲವ್ ಸ್ಟೋರಿ ಆಗಿದ್ದು, ಝೈದ್ ಖಾನ್ ಜೊತೆಗೆ ನಾಯಕಿಯಾಗಿ ಸೋನಲ್ ಮೊಂತಾರಿಯೋ ನಟಿಸಿದ್ದಾರೆ.

ಸಿನಿಮಾದ ಟ್ರೈಲರ್ ಗಳು ಮತ್ತು ಹಾಡುಗಳು ಬಿಡುಗಡೆಯಾಗಿದೆ ಈಗಾಗಲೇ ಕನ್ನಡ ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದೆ. ಸಿನಿಮಾದ ಕಥೆ ಸಹ ಕುತೂಹಲವಾಗಿದೆ. ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಪ್ರಸ್ತುತ ಝೈದ್ ಖಾನ್ ಅವರು ಮತ್ತು ನಟಿ ಸೋನಲ್ ಇಬ್ಬರು ಕೂಡ ಸಿನಿಮಾ ಪ್ರೊಮೋಷನ್ ಗಳಲ್ಲಿ ಬ್ಯುಸಿ ಆಗಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ, ಬನಾರಸ್ ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರೀರಿಲೀಸ್ ಇವೆಂಟ್ ಗಳು ಟ್ರೆಂಡ್ ಸೆಟ್ ಮಾಡುತ್ತಿರುವುದರಿಂದ, ಆಕ್ಟೊಬರ್ 22ರಂದು ಬನಾರಸ್ ಸಿನಿಮಾದ ಪ್ರೀರಿಲಿಸ್ ಇವೆಂಟ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿಯ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ಶನಿವಾರ ಸಂಜೆ 7 ಗಂಟೆ ಇಂದ ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಶುರುವಾಗಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಿಬಾಸ್ ದರ್ಶನ್ ಅವರು ಬರುತ್ತಾರೆ ಎನ್ನಲಾಗುತ್ತಿದೆ. ದರ್ಶನ್ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದಾರೆ ಎನ್ನಲಾಗುತ್ತಿದ್ದು, ಈ ವಿಚಾರದ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ದರ್ಶನ್ ಅವರು ಈ ಸಿನಿಮಾದಲ್ಲಿ ನಟಿಸಲು ಸಂಭಾವನೆ ಪಡೆಯದ ಕಾರಣ, ಜಮೀರ್ ಅಹ್ಮದ್ ಅವರು ದುಬಾರಿ ವಾಚ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.

ಜಮೀರ್ ಅಹ್ಮದ್ ಅವರು ಮತ್ತು ದರ್ಶನ್ ಅವರು ಆತ್ಮೀಯ ಸ್ನೇಹಿತರಾಗಿರುವ ಕಾರಣ ಪ್ರೀ ರಿಲೀಸ್ ಇವೆಂಟ್ ಗೆ ದರ್ಶನ್ ಅವರು ಬರಬಹುದು ಎನ್ನಲಾಗುತ್ತಿದೆ. ರಾಬರ್ಟ್ ನಂತರ ದರ್ಶನ್ ಅವರನ್ನು ಬನಾರಸ್ ಸಿನಿಮಾದಲ್ಲಿ ನೋಡಬಹುದು ಎಂದು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಬನಾರಸ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಗೆ, ದರ್ಶನ್ ಅವರು ಬರುವ ಕಾರಣ ಅವರ ಸಹಸ್ರಾರು ಅಭಿಮಾನಿಗಳು ಹುಬ್ಬಳ್ಳಿಯಲ್ಲಿ ಸೇರುವುದು ಪಕ್ಕಾ.

ಹಾಗಾಗಿ ಇದು ದರ್ಶನ್ ಅವರ ಮುಂದೆ ಯುವನಟ ಝೈದ್ ಖಾನ್ ಅವರಿಗೆ ಒಂದು ಚಾಲೆಂಜ್ ರೀತಿಯಲ್ಲಿ ಇರಲಿದೆ. ಬನಾರಸ್ ಸಿನಿಮಾ ಬಗ್ಗೆ ಆರಂಭದಿಂದಲೂ ಒಳ್ಳೆಯ ನಿರೀಕ್ಷೇ ಇದೆ, ಅದರಲ್ಲೂ ದರ್ಶನ್ ಅವರು ಸಿನಿಮಾಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಗೊತ್ತಾದ ಬಳಿಕ, ಸಿನಿಮಾ ಮೇಲಿನ ಕ್ರೇಜ್ ಇನ್ನು ಹೆಚ್ಚಾಗಿದೆ. ದರ್ಶನ್ ಅವರ ಅಭಿಮಾನಿಗಳ ಸಪೋರ್ಟ್ ಸಹ ಬನಾರಸ್ ಸಿನಿಮಾಗೆ ಸಿಗುತ್ತಿದೆ.

ಜಮೀರ್ ಅಹ್ಮದ್ ಖಾನ್ ಅವರು ಚಿತ್ರರಂಗದ ಹಲವರ ಜೊತೆಗೆ ಆಪ್ತವಾಗಿದ್ದು, ಸ್ನೇಹ ಇರುವ ಕಾರಣ, ಅವರ ಆತ್ಮೀಯರು, ರಾಜಕೀಯ ನಾಯಕರು ಮತ್ತು ಚಿತ್ರರಂಗದ ಹಲವರು ಪ್ರೀರಿಲೀಸ್ ಇವೆಂಟ್ ಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

ದರ್ಶನ್ ಅವರು ಬನಾರಸ್ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವುದಕ್ಕೆ ಸಿನಿಮಾ ಚಿತ್ರೀಕರಣ ಸ್ಥಳದಿಂದ ಅವರ ಒಂದು ಫೋಟೋ ಲೀಕ್ ಆಗಿತ್ತು, ಆದರೆ ಚಿತ್ರತಂಡ ಅದರ ಬಗ್ಗೆ ಮಾಹಿತಿ ನೀಡಿಲ್ಲ. ಪ್ರೀರಿಲೀಸ್ ಇವೆಂಟ್ ದಿನ ಈ ವಿಚಾರ ರಿವೀಲ್ ಆಗುತ್ತಾ ಎಂದು ಕಾಯುತ್ತಿದ್ದಾರೆ ಡಿಬಾಸ್ ಫ್ಯಾನ್ಸ್.

Leave A Reply

Your email address will not be published.