Neer Dose Karnataka
Take a fresh look at your lifestyle.

ಜೀವನ ಪೂರ್ತಿ ಮಾತ್ರೆಗಳ ಮೊರೆ ಹೋಗುವ ಬದಲು ಮಧುಮೇಹ ನಿಯಂತ್ರಣಕ್ಕೆ ಮನೆಯಲ್ಲಿ ಈ ಮಸಾಲಾ ನೀರು ಕುಡಿಯಿರಿ ಸಾಕು. ಏನು ಮಾಡಬೇಕು ಗೊತ್ತೇ??

ನಮ್ಮ ದೇಶದಲ್ಲಿ ಹೆಚ್ಚು ಜನರು ಡೈಯಾಬಿಟಿಸ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ವಯಸ್ಸಿನ ವ್ಯತ್ಯಾಸ ಇಲ್ಲದೆ, ಚಿಕ್ಕವರು ದೊಡ್ಡವರು ಎಲ್ಲಾರನ್ನು ಕಾಡುತ್ತಿದೆ. ಡೈಯಾಬಿಟಿಸ್ ಇರುವವರು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು, ಆಹಾರದ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ, ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣಕ್ಕೆ ತರಬಹುದು.

ಡೈಯಾಬಿಟಿಸ್ ಇರುವವರಿಗೆ ಅಡುಗೆ ಮನೆಯಲ್ಲಿ ಬಳಸುವ ಕೆಲವು ಮಸಾಲೆಯ ಪದಾರ್ಥಗಳು ಸಹಾಯ ಮಾಡುತ್ತವೆ, ಮಸಾಲೆ ಪದಾರ್ಥಗಳು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಸಹಾಯ ಮಾಡುತ್ತದೆ.. ಹೀಗೆ ಡೈಯಾಬಿಟಿಸ್ ಇಂದ ರಕ್ಷಿಸಲು ಸಹಾಯ ಮಾಡುವ, ಮಸಾಲೆ ಪದಾರ್ಥಗಳಲ್ಲಿ ಒಂದು ಕೊತ್ತಂಬರಿ ಬೀಜ. ದೈಯಾಬಿಟಿಸ್ ಇರುವವರಿಗೆ ಇದು ಪ್ರಯೋಜನ ನೀಡುತ್ತದೆ.

*ಕೊತ್ತಂಬರಿ ಬೀಜದಲ್ಲಿ ಆಂಟಿ-ಆಕ್ಸಿಡಂಟ್ಸ್ ಅಂಶಗಳು ಮತ್ತು ಉರಿಯೂತ ಕಡಿಮೆ ಮಾಡುವ ಅಂಶ ಇರುವುದರಿಂದ, ಪ್ರತಿನಿತ್ಯದ ಆಹಾರದಲ್ಲಿ ಇದನ್ನು ಬಳಕೆ ಮಾಡಿ, ಅಡುಗೆಯ ಜೊತೆಗೆ ಸೇರಿಸಿ ಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

ಆಹಾರ ತಜ್ಞರಾದ ನಿಖಿಲ್ ವಾಟ್ಸ್ ಅವರು ನೀಡಿರುವ ಸಲಹೆಯ ಪ್ರಕಾರ, ಡೈಯಬಿಟಿಕ್ ಆಗಿರುವವರಿಗೆ ಕೊತ್ತಂಬರಿ ಬೀಜ ಔಷಧಿಯಷ್ಟೇ ಒಳ್ಳೆಯದು. *ಕೊತ್ತಂಬರಿ ಬೀಜಗಳಲ್ಲಿ ಆಂಟಿ-ಹೈಪರ್ ಗ್ಲೈಸಿಮಿಕ್ ಅಂಶವಿದೆ, ಇದು ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಡೈಯಾಬಿಟಿಸ್ ಇರುವವರಃ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

*ಪ್ರತಿದಿನ ಕೊತ್ತಂಬರಿ ನೀರು ಸೇವಿಸುವುದರಿಂದ, ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಜಾಸ್ತಿಯಾಗುವ ಹಾಗೆ ಮಾಡುತ್ತದೆ, ಇದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರುತ್ತದೆ. *ಕೊತ್ತಂಬರಿ ನೀರು ತಯಾರಿಸುವ ವಿಧಾನ :-

ಕೊತ್ತಂಬರಿ ನೀರು ತಯಾರಿಸುವುದು ಬಹಳ ಸರಳವಾದ ಕೆಲಸ, ಒಂದು ಲೋಟ ನೀರು ತೆಗೆದುಕೊಳ್ಳಿ, ಅದಕ್ಕೆ ಅದರೊಳಗೆ ಒಂದು ಚಮಚ ಕೊತ್ತಂಬರಿ ಬೀಜ ಹಾಕಿ, ಇಡೀ ರಾತ್ರಿ ನೆನೆಯಲು ಬಿಡಿ. ಬೆಳಗ್ಗೆ ಎದ್ದ ಬಳಿಕ, ನೀರನ್ನು ಸೋಸಿದ ಬಳಿಕ ಸೇವಿಸಿ. ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ, ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

Comments are closed.