Neer Dose Karnataka
Take a fresh look at your lifestyle.

ಹೆಡ್ ಬುಷ್ ಚಿತ್ರ ನೀರಸ ಪ್ರದರ್ಶನದ ಬೆನ್ನಲ್ಲೇ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಡಾಲಿ ಹಾಗೂ ಯೋಗಿ. ಚಿತ್ರತಂಗವೇ ತಲೆ ತಗ್ಗಿಸುವ ವಿಷಯ.

ನಟ ಧನಂಜಯ್ ಅವರು ಬಹಳ ಕಷ್ಟಪಟ್ಟು ಇಂದು ಯಶಸ್ವಿ ನಟನಾಗಿ ಮತ್ತು ನಿರ್ಮಾಪಕನಾಗಿ ಸಹ ಬಡ್ತಿ ಪಡೆದು, ಹೆಡ್ ಬುಶ್ ಸಿನಿಮಾ ಬಿಡುಗಡೆ ನಂತರ ಮತ್ತೊಂದು ಯಶಸ್ಸು ಪಡೆದಿದ್ದಾರೆ. ನಾಯಕನಾಗಿ ಅಷ್ಟೇನು ಯಶಸ್ಸು ಪಡೆಯದ ಧನಂಜಯ್ ಅವರು ಟಗರು ಸಿನಿಮಾ ಮೂಲಕ ವಿಲ್ಲನ್ ಆಗಿ ಯಶಸ್ಸು ಪಡೆದು, ಸಾಕಷ್ಟು ಸಿನಿಮಾ ಗಳಲ್ಲಿ ವಿಲನ್ ಆಗಿ ಮತ್ತು ಮುಖ್ಯ ಪಾತ್ರಗಳಲ್ಲಿ ಯಶಸ್ಸು ಪಡೆದರು.

ಬಳಿಕ ಬಡವ ರಾಸ್ಕಲ್ ಸಿನಿಮಾ ಮೂಲಕ ನಿರ್ಮಾಪಕನು ಆದರು, ಡಾಲಿ ಪಿಕ್ಚರ್ಸ್ ಸಂಸ್ಥೆ ಶುರು ಮಾಡಿ ಸಿನಿಮಾ ನಿರ್ಮಿಸಿದರು, ಬಡವ ರಾಸ್ಕಲ್ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದರು. ಧನಂಜಯ್ ಬಡವ ರಾಸ್ಕಲ್ ಸಿನಿಮಾ ಯಶಸ್ಸಿನ ಬಳಿಕ ಧನಂಜಯ್ ಅವರು ನಿರ್ಮಾಣ ಮಾಡಿರುವ ಎರಡನೇ ಸಿನಿಮಾ ಹೆಡ್ ಬುಶ್, ಇದು ಬೆಂಗಳೂರಿನ ರೌಡಿ ಜಯರಾಜ್ ಅವರ ಜೀವನ ಚರಿತ್ರೆ ಆಗಿದೆ.

ಅಗ್ನಿಶ್ರೀಧರ್ ಅವರು ಬರೆದಿರುವ ಪುಸ್ತಕದ ಆಧಾರಿತವಾಗಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಆಕ್ಟೊಬರ್ 21ರಂದು ಡಾಲಿ ಧನಂಜಯ್ ಅವರ ಹೆಡ್ ಬುಶ್ ಸಿನಿಮಾ ಬಿಡುಗಡೆ ಆಗಿದೆ, ಸಿನಿಮಾ ಬಿಡುಗಡೆ ದಿನ ಸಿನಿಮಾಪ್ರಿಯರು ಕೊಟ್ಟಿರುವ ಪ್ರತಿಕ್ರಿಯೆ ನೋಡಿ ಧನಂಜಯ್ ಮತ್ತು ಯೋಗಿ ಇಬ್ಬರು ಸಹ ಭಾವುಕರಾಗಿದ್ದಾರೆ, ಜೊತೆಗೆ ತಮ್ಮ ವಿರುದ್ಧ ಆಗುತ್ತಿರುವ ಸಮಸ್ಯೆ ಬಗ್ಗೆ ಸಹ ಮಾತನಾಡಿದ್ದಾರೆ..

“ತುಂಬಾ ಸಂತೋಷ ಆಗ್ತಿದೆ, ನನ್ನನ್ನ ನಂಬಿ ನನ್ನ ಜನರು ಸಿನಿಮಾ ನೋಡೋದಕ್ಕೆ ಬಂದಿದ್ದಾರೆ. ಸುಮ್ಮನೆ ಹೇಳ್ತಾ ಇಲ್ಲ, ತುಂಬಾ ವಿಶ್ವಾಸದಿಂದ ಹೇಳ್ತಾ ಇದ್ದೀನಿ.. ಒಳ್ಳೆಯ ಸಿನಿಮಾ ಮಾಡಿದ್ದೀವಿ..ಇದರ ನಡುವೆ ಏನೇನೋ ನಡೀತಾ ಇದೆ, ಅದು ನನ್ನ ಗಮನಕ್ಕೂ ಬಂದಿದೆ. ಬುದ್ಧಿ ಇರೋರು ಏನೇನೋ ಯೋಚನೆ ಮಾಡ್ತಾ ಇದ್ದಾರೆ, ನನ್ನ ಜನರು ಹೃದಯದಿಂದ ಯೋಚನೆ ಮಾಡ್ತಾ ಇದ್ದಾರೆ…” ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಬೇರೇನೂ ನಡೆಯುತ್ತಿದೆ ಎಂದಿದ್ದಾರೆ ಧನಂಜಯ್.

ಹೆಡ್ ಬುಶ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ನಟಿಸಿರುವ ಯೋಗೇಶ್ ಅವರು, ಸಂತೋಷ ಪಟ್ಟಿದ್ದಾರೆ, ನಮಸ್ಕಾರ ಮಾಡಿ ಎಲ್ಲರಿಗು ಧನ್ಯವಾದ ತಿಳಿಸಿದ ಯೋಗಿ ಅವರು, “ನಮ್ಮನ್ನ ಕೆಲವರು ತುಳಿಯಲು ಪ್ರಯತ್ನ ಪಡುತ್ತಿದ್ದಾರೆ. ಯಾರು ಎಷ್ಟೇ ತುಳಿದರು ನಾವು ಕೊಡವಿಕೊಂಡು ವಾಪಸ್ ಬರುತ್ತೇವೆ. ಸಿನಿಮಾ ನೋಡಿ ಜನರು ಇಷ್ಟಪಡುತ್ತಿದ್ದಾರೆ, ನೆಗಟಿವ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..” ಎಂದಿದ್ದಾರೆ ನಟ ಯೋಗೇಶ್.

ಚಂದನವನದಲ್ಲಿ ಈಗ ಬಿಡುಗಡೆ ಆಗುತ್ತಿರುವ ಹೊಸ ಸಿನಿಮಾಗಳು ಒಳ್ಳೆಯ ಯಶಸ್ಸು ಪಡೆಯುತ್ತಿದೆ. ಜೇಮ್ಸ್, ವಿಕ್ರಾಂತ್ ರೋಣ, ಕೆಜಿಎಫ್2, ನಂತರ ಕಾಂತಾರ, ಈಗ ಹೆಡ್ ಬುಶ್ ಸಿನಿಮಾ ಒಳ್ಳೆಯ ಹೆಸರು ಪಡೆಯುತ್ತಿದೆ. ಬೇರೆ ಪ್ರಭಾವಗಳಿಂದ ಹೆಡ್ ಬುಶ್ ಸಿನಿಮಾಗಳಿಗೆ ಶೋಗಳು ಸಹ ಕಡಿಮೆ ಆಗುತ್ತಿದೆ ಎಂದು ತಿಳಿದುಬಂದಿದ್ದು, ಧನಂಜಯ್ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.