Neer Dose Karnataka
Take a fresh look at your lifestyle.

ಸಾಕಷ್ಟು ಸುದ್ದಿಗಳ ನಡುವೆ ಅಪ್ಪು ಕಾರ್ಯಕ್ರಮಕ್ಕೆ ದರ್ಶನ್ ಬರದೇ ಇರುವ ಕುರಿತು ಅಶ್ವಿನಿ ಪುನೀತ್ ಹೇಳಿದ್ದೇನು ಗೊತ್ತೇ?? ಕರೆದರೂ ಯಾಕೆ ಬರಲಿಲ್ಲ ದರ್ಶನ್?

ಅಪ್ಪು ಎಂದರೆ ಇಷ್ಟ ಪಡದೆ ಇರುವವರು ಯಾರಿರಲು ಸಾಧ್ಯ? ಇಡೀ ಕರ್ನಾಟಕವೇ ಅಪ್ಪು ಅವರ ಮನೆ. ಪ್ರತಿ ಮನೆಯಲ್ಲೂ ಅಪ್ಪು ತಮ್ಮ ಮನೆಮಗ ಎಂದು ಭಾವಿಸುತ್ತಾರೆ. ಅಷ್ಟರ ಮಟ್ಟಿಗೆ ಜನರಿಗೆ ಅಪ್ಪು ಅಂದ್ರೆ ಪ್ರೀತಿ. ಇಂದು ಅಪ್ಪು ಅವರು ದೈಹಿಕವಾಗಿ ನಮ್ಮೊಡನೆ ಇಲ್ಲದೆ ಹೋದರು, ನೆನೆಪುಗಳ ಮೂಲಕ, ಅಭಿಮಾನಿಗಳಲ್ಲಿ, ಎಲ್ಲರು ಮಾಡುವ ಒಳ್ಳೆಯ ಕೆಲಸಗಳಲ್ಲಿ ಅಪ್ಪು ಅವರು ಸದಾ ಜೀವಂತವಾಗಿ ಇರುತ್ತಾರೆ.

ಅಪ್ಪು ಅವರು ಇದ್ದಾಗ ಅವರು ಕಂಡ ದೊಡ್ಡ ಕಣಸುಗಳಲ್ಲಿ ಒಂದು ಗಂಧದಗುಡಿ. ಇದು ನಮ್ಮ ಕರ್ನಾಕಟದ ವನ್ಯಪ್ರದೇಶವನ್ನು ನಮಗೆ ತೋರಿಸುವ ಪ್ರಯತ್ನ ಆಗಿದೆ. ಅಪ್ಪು ಅವರು ಈ ಪ್ರಾಜೆಕ್ಟ್ ಅನ್ನು ಬಹಳ ಪ್ರೀತಿಯಿಂದ ಮಾಡಿದ್ದಾರೆ, ಇದರಲ್ಲಿ ಒಂದು ಪಾತ್ರವಾಗಿ ಕಾಣಿಸಿಕೊಳ್ಳದೆ, ಪುನೀತ್ ರಾಜ್ ಕುಮಾರ್ ಆಗಿ ಅಭಿಮಾನಿಗಳ ಎದುರು ಬರಲಿದ್ದಾರೆ, ಟ್ರೈಲರ್ ನೋಡಿದರೆ, ಅಪ್ಪು ಅವರು ಎಂಥ ಒಂದು ಅದ್ಭುತವಾದ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಗಂಧದಗುಡಿ ಎನ್ನುವ ಈ ಟೈಟಲ್ ದೊಡ್ಮನೆಯವರಿಗೆ ಬಹಳ ಆಪ್ತ ಎಂದು ಹೇಳಬಹುದು. 70ರ ದಶಕದಲ್ಲಿ ಅಣ್ಣಾವ್ರು ಇದೇ ಹೆಸರಿನಲ್ಲಿ ಸಿನಿಮಾ ಮಾಡಿದ್ದರು, ಆ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಎಂದು ನಮಗೆಲ್ಲ ಗೊತ್ತಿದೆ, 90ರ ದಶಕದಲ್ಲಿ ಗಂಧದಗುಡಿ2 ಸಿನಿಮಾದಲ್ಲಿ ಶಿವಣ್ಣ ಅವರು ನಟಿಸಿದ್ದರು. ಈಗ ಅಪ್ಪು ಅವರು ಇದೇ ಹೆಸರಿನ ಸಿನಿಮಾದಲ್ಲಿ ನಟಿಸಿಲ್ಲ, ಆದರೆ ಜೀವಿಸಿದ್ದಾರೆ. ಆಕ್ಟೊಬರ್ 28ರಂದು ಇದೇ ಶುಕ್ರವಾರ ಗಂಧದಗುಡಿ ಬಿಡುಗಡೆ ಆಗಲಿದೆ.

ಅಪ್ಪು ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡುವ ಕೊನೆಯ ಅವಕಾಶ ಇದಾಗಿದೆ. ಅಭಿಮಾನಿಗಳು ಅಪ್ಪು ಅವರನ್ನು ಕೊನೆಯ ಸಾರಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇನ್ನು ಗಂಧದಗುಡಿ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲು ಕಳೆದ ಶುಕ್ರವಾರ ಸಿನಿಮಾದ ಪ್ರೀರಿಲಿಸ್ ಇವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು. ಈ ಇವೆಂಟ್ ಚಂದನವನದ ತಾರೆಯರು, ತೆಲುಗು ಮತ್ತು ತಮಿಳು ಚಿತ್ರರಂಗದ ನಟರು ಸಹ ಆಗಮಿಸಿ ಅಪ್ಪು ಅವರ ಬಗ್ಗೆ ಮಾತನಾಡಿದರು.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ ನಟಿಯರು ಪುನೀತಪರ್ವ ಕಾರ್ಯಕ್ರಮಕ್ಕೆ ಹಾಜರಿದ್ದರು. ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ಧ್ರುವ ಸರ್ಜಾ, ಪ್ರಕಾಶ್ ರಾಜ್, ಡಾರ್ಲಿಂಗ್ ಕೃಷ್ಣ, ನೆನಪಿರಲಿ ಪ್ರೇಮ್, ಅಜಯ್ ರಾವ್ ಸೇರಿದಂತೆ ಎಲ್ಲರೂ ಇದ್ದರು. ಬೇರೆ ಭಾಷೆಯಿಂದ ನಟರಾದ ಸೂರ್ಯ, ಶರತ್ ಕುಮಾರ್, ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಎಲ್ಲರೂ ಬಂದಿದ್ದರು. ಆದರೆ ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ್ ಹಾಗೂ ಸುದೀಪ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಇವರಿಬ್ಬರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಬಹಳ ನಿರಕ್ಷೆ ಇತ್ತು, ಖುದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಇಬ್ಬರಿಗೂ ಆಮಂತ್ರಣ ನೀಡಿದ್ದರು, ಮನೆಗೆ ಆಹ್ವಾನ ಪತ್ರಿಕೆ ಕಳಿಸಿದ್ದರು. ಆದರೆ ಈ ಇಬ್ಬರು ನಟರು ಸಹ ಕಾರ್ಯಕ್ರಮಕ್ಕೆ ಬರದೆ ಇರುವುದು, ಅಭಿಮಾನಿಗಳ ಮತ್ತು ನೆಟ್ಟಿಗರ ಕೋಪಕ್ಕೆ ಕಾರಣವಾಯಿತು, ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಈ ವಿಚಾರದ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಆದರೆ ಅಶ್ವಿನಿ ಅವರು ದರ್ಶನ್ ಅವರು ಕಾರ್ಯಕ್ರಮಕ್ಕೆ ಯಾಕೆ ಬರಲು ಆಗುವುದಿಲ್ಲ ಎನ್ನುವ ಬಗ್ಗೆ ಮೊದಲೇ ಸೂಚನೆ ನೀಡಿದ್ದರು ಎಂದು ಹೇಳಿದ್ದಾರೆ.

ಹೌದು..ಸುದೀಪ್ ಅವರು ಕಾರ್ಯಕ್ರಮಕ್ಕೆ ಬರದೆ ಇರಲು ಕಾರಣ ಗೊತ್ತಾಗಿದೆ, ಸುದೀಪ್ ಮತ್ತು ಪ್ರಿಯಾ ದಂಪತಿಯ ವಿವಾಹ ವಾರ್ಷಿಕೋತ್ಸವ ಆಕ್ಟೊಬರ್ 18ರಂದು, ಹಾಗಾಗಿ ಸುದೀಪ್ ಅವರು ಪತ್ನಿಯ ಜೊತೆಗೆ ವಿದೇಶ ಪ್ರವಾಸಕ್ಕೆ ಹೋಗಿದ್ದ ಕಾರಣ ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ದರ್ಶನ್ ಅವರು ಬರದೆ ಇರುವುದಕ್ಕೂ ಕೂಡ ಒಂದು ಪ್ರಮುಖ ಕಾರಣ ಇದೆ, ಅಂದು ದರ್ಶನ್ ಅವರು ಚಿತ್ರೀಕರಣ ಬ್ಯುಸಿ ಆಗಿದ್ದರು, ಈ ಮೊದಲೇ ಡೇಟ್ ಫಿಕ್ಸ್ ಕೂಡ ಆಗಿತ್ತಂತೆ.

ಚಿತ್ರೀಕರಣ ನಿಲ್ಲಿಸಿದರೆ, ನಿರ್ಮಾಪಕರಿಗೆ ತಮ್ಮಿಂದ ನಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ ದರ್ಶನ್ ಅವರು ಚಿತ್ರೀಕರಣ ನಿಲ್ಲಿಸಲು ಸಾಧ್ಯ ಆಗಿರಲಿಲ್ಲ. ಈ ವಿಚಾರವನ್ನು ಅಶ್ವಿನಿ ಅವರೊಡನೆ ಮೊದಲೇ ಹೇಳಿದ್ದರಂತೆ ಡಿಬಾಸ್. ಬರಲು ಸಾಧ್ಯವಾಗುವುದಿಲ್ಲ ಮೊದಲೇ ಚಿತ್ರೀಕರಣದ ಡೇಟ್ ಫಿಕ್ಸ್ ಆಗಿತ್ತು ಎಂದು ಅಶ್ವಿನಿ ಅವರಿಗೆ ತಿಳಿಸಿದ್ದು, ಈ ವಿಷಯವನ್ನು ಅಶ್ವಿನಿ ಅವರೇ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿದ ಬಳಿಕ ಅಭಿಮಾನಿಗಳಿಗೂ ಅಸಲಿ ವಿಷಯ ಏನು ಎಂದು ಗೊತ್ತಾಗಿದೆ.

Comments are closed.