Neer Dose Karnataka
Take a fresh look at your lifestyle.

ಕೊಹ್ಲಿ, ಸೂರ್ಯ ಅಲ್ಲ, ಆತನೇ ವಿಶ್ವಕ್ಕೆ ನಂಬರ್, ಆತನೇ ಟಿ 20 ವಿಶ್ವಕಪ್ ನಲ್ಲಿ ಕಿಂಗ್ ಆಗುತ್ತಾನೆ ಎಂದು ಭಾರತೀಯನನ್ನು ಆಯ್ಕೆ ಮಾಡಿದ ಪೀಟರ್ಸನ್. ಯಾರಂತೆ ಗೊತ್ತೇ??

ಕೊಹ್ಲಿ, ಸೂರ್ಯ ಅಲ್ಲ, ಆತನೇ ವಿಶ್ವಕ್ಕೆ ನಂಬರ್, ಆತನೇ ಟಿ 20 ವಿಶ್ವಕಪ್ ನಲ್ಲಿ ಕಿಂಗ್ ಆಗುತ್ತಾನೆ ಎಂದು ಭಾರತೀಯನನ್ನು ಆಯ್ಕೆ ಮಾಡಿದ ಪೀಟರ್ಸನ್. ಯಾರಂತೆ ಗೊತ್ತೇ??

ವಿಶ್ವಕಪ್ ಪಂದ್ಯಗಳ ಮೇಲೆ ಎಲ್ಲ ಗಮನವು ನೆಟ್ಟಿದೆ. ಕ್ವಾಲಿಫೈಯರ್ ಹಂತದ ಪಂದ್ಯಗಳು ಮುಗಿದು, ಈಗ ಸೂಪರ್ 12 ಹಂತದ ಪಂದ್ಯಗಳು ಶುರುವಾಗಿದೆ. ಭಾರತ ತಂಡವು ಸೂಪರ್ 12 ಹಂತದಲ್ಲಿ ಪಾಕಿಸ್ತಾನ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ, ಮುಂದಿನ ಪಂದ್ಯಗಳಲ್ಲು ಗೆಲುವನ್ನು ಮುಂದುವರೆಸಿಕೊಂಡು ಹೋಗುವ ಆತ್ಮವಿಶ್ವಾಸದಲ್ಲಿ ಅಭ್ಯಾಸ ನಡೆಸುತ್ತಿದೆ.

ಈಗಾಗಲೇ ಎಲ್ಲರ ಬಾಯಲ್ಲೂ ಪಂದ್ಯಗಳು ಹೇಗೆ ನಡೆಯುತ್ತದೆ? ಈ ವರ್ಷ ಟಿ20 ವಿಶ್ವಕಪ್ ಗೆಲ್ಲುವುದು ಯಾರು? ಈ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡುವುದು ಯಾರು? ಅತಿ ಹೆಚ್ಚು ವಿಕೆಟ್ಸ್ ಪಡೆಯುವವರು ಯಾರು? ಹೀಗೆಲ್ಲಾ ಪ್ರಶ್ನೆಗಳು ಶುರುವಾಗಿದೆ. ಮಾಜಿ ಕ್ರಿಕೆಟ್ ಆಟಗಾರರು, ಕ್ರಿಕೆಟ್ ಪಂಡಿತರು ಯಾವ ತಂಡ ಫೈನಲ್ಸ್ ತಲುಪಬಹುದು ಎಂದು ಕೂಡ ಪ್ರಿಡಿಕ್ಟ್ ಮಾಡುತ್ತಿದ್ದಾರೆ.

ಅತಿಹೆಚ್ಚು ರನ್ಸ್ ಗಳಿಸಬಹುದಾದ ಆಟಗಾರ ಯಾರಾಗಬಹುದು ಎನ್ನುವ ಪ್ರಶ್ನೆಗೆ ಹಲವು ಹೆಸರುಗಳು ಕೇಳಿ ಬರುತ್ತಿವೆ, ಡೇವಿಡ್ ವಾರ್ನರ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಜೋಸ್ ಬಟ್ಲರ್ ಇಂತಹ ಆಟಗಾರರು ಅತಿಹೆಚ್ಚು ಗಳಿಸುತ್ತಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆವಿನ್ ಪೀಟರ್ಸನ್ ಅವರು ಆಯ್ಕೆ ಮಾಡಿರುವ ಆಟಗಾರನೇ ಬೇರೆ.. ಇವರು ಕೂಡ ಭಾರತದ ಆಟಗಾರನನ್ನೇ ಆಯ್ಕೆ ಮಾಡಿದ್ದಾರೆ.

ಕೆವಿನ್ ಪೀಟರ್ಸನ್ ಅವರು ಈಗ ಅದ್ಬುತ ಫಾರ್ಮ್ ನಲ್ಲಿರುವ ವಿರಾಟ್ ಕೋಹ್ಲಿ ಅಥವಾ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದೆ, ಭಾರತದವರೆ ಆದ ಮತ್ತೊಬ್ಬ ಆಟಗಾರನನ್ನು ಆಯ್ಕೆ ಮಾಡಿರುವುದು ಕ್ರಿಕೆಟ್ ಪ್ರಿಯರಿಗೆ ಮತ್ತು ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಅಷ್ಟಕ್ಕೂ ಕೆವಿನ್ ಪೀಟರ್ಸನ್ ಅವರು ಆಯ್ಕೆ ಮಾಡಿರುವುದು ಮತ್ಯಾರನ್ನು ಅಲ್ಲ, ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಅವರನ್ನು.

ಕೆವಿನ್ ಅವರ ಪ್ರಚಾರ, ಪ್ರಸ್ತುತ ಪ್ರಪಂಚದ ಶ್ರೇಷ್ಠ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಆಗಿದ್ದಾರೆ. ಸಂದರ್ಶನ ಒಂದರಲ್ಲಿ ಖುದ್ದು ಕೆವಿನ್ ಪೀಟರ್ಸನ್ ಅವರೇ ಈ ಹೇಳಿಕೆ ನೀಡಿದ್ದಾರೆ. ಕೆ.ಎಲ್.ರಾಹುಲ್ ಅವರು ಈ ವರ್ಷ ಟಿ20 ವರ್ಲ್ಡ್ ಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸುವ ಬ್ಯಾಟ್ಸ್ಮನ್ ಆಗಬಹುದು ಎಂದು ಕೂಡ ಹೇಳಿಕೆ ನೀಡಿದ್ದಾರೆ. ಸಧ್ಯಕ್ಕೆ ಕೆವಿನ್ ಪೀಟರ್ಸನ್ ಅವರ ಈ ಆಯ್ಕೆ ಮತ್ತು ಹೇಳಿಕೆ ಭಾರಿ ವೈರಲ್ ಆಗುತ್ತಿದೆ.

“ನನಗೆ ಕೆ.ಎಲ್.ರಾಹುಲ್ ಅಂದ್ರೆ ತುಂಬಾ ಇಷ್ಟ. ಪ್ರಸ್ತುತ ಪ್ರಪಂಚದ ನಂಬರ್ 1 ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಅವರೇ. ರಾಹುಲ್ ಅವರು ಅದ್ಭುತವಾಗಿದ್ದಾರೆ, ಯಾವುದೇ ರೀತಿ ಬೌಲಿಂಗ್ ಮಾಡಿದರು ಉತ್ತಮವಾಗಿ ಬ್ಯಾಟ್ ಬೀಸುತ್ತಾರೆ. ಚೆಂಡು ಬರುವ ರೀತಿಗೆ ಸ್ವಿಂಗ್ ಇಂದ ಮತ್ತು ಸೀಮಿಂಗ್ ಇಂದ ಉತ್ತಮವಾಗಿ ಆಡುತ್ತಾರೆ. ಹಾಗೆಯೇ ರಾಹುಲ್ ಅವರು ಅಧಿಕೃತವಾಗಿ ಆಡುತ್ತಾರೆ, ಜೊತೆಗೆ ರನ್ಸ್ ಗಳಿಸಲು ಅವರು ತಕ್ಕವರಾಗಿದ್ದಾರೆ..” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೆವಿನ್ ಪೀಟರ್ಸನ್.

ಆದರೆ ಕೆ.ಎಲ್.ರಾಹುಲ್ ಅವರು ಈಗ ಉತ್ತಮವಾದ ಫಾರ್ಮ್ ನಲ್ಲಿಲ್ಲ. ಇಂಜುರಿ ನಂತರ ತಂಡಕ್ಕೆ ಕಂಬ್ಯಾಕ್ ಮಾಡಿರುವ ರಾಹುಲ್, ಸತತವಾಗಿ ಫಾರ್ಮ್ ಸಮಸ್ಯೆ ಇಂದ ಬಳಲುತ್ತಿದ್ದಾರೆ. ರಾಹುಲ್ ಅವರು ವಿಶ್ವಕಪ್ ನ ವಾರ್ಮ್ ಅಪ್ ಮ್ಯಾಚ್ ಗಳಲ್ಲಿ ಎರಡು ಬಾರಿ ಹಾಫ್ ಸೆಂಚುರಿ ಭಾರಿಸಿ ಉತ್ತಮ ಫಾರ್ಮ್ ಗೆ ಮರಳಿ ಬಂದಿದ್ದರು.

ಆದರೆ ಪಾಕಿಸ್ತಾನ್ ವಿರುದ್ಧ ಉತ್ತಮ ಪ್ರದರ್ಶನ ನೀಡಲಿಲ್ಲ. ಟೀಮ್ ಇಂಡಿಯಾದ ಓಪನರ್ ಆಗಿರುವ ಕೆ.ಎಲ್.ರಾಹುಲ್ ಅವರು, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಕೆ.ಎಲ್.ರಾಹುಲ್ ಅವರ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಮುಂಬರುವ ಪಂದ್ಯಗಳಲ್ಲಿ ರಾಹುಲ್ ಅವರು ಹೇಗೆ ಪ್ರದರ್ಶನ ನೀಡುತ್ತಾರೆ? ಮೊದಲಿದ್ದ ಫಾರ್ಮ್ ಗೆ ಮರಳಿ ಬರುತ್ತಾರಾ ಎಂದು ಕಾದು ನೋಡಬೇಕಿದೆ.

Comments are closed.