Neer Dose Karnataka
Take a fresh look at your lifestyle.

ಇಂಗ್ಲೆಂಡ್ ದೇಶದ ಪ್ರಧಾನಿಯಾಗಿರುವ ಸುಧಾಮೂರ್ತಿ ರವರ ಅಳಿಯ ರಿಷಿ ಸುನಕ್‌ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ಇನ್ಫೋಸಿಸ್ ಮುಖ್ಯಸ್ಥರಾದ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಬಗ್ಗೆ ತಿಳಿದುಕೊಳ್ಳದೆ ಇರುವವರು ಇರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಏನೇ ತೊಂದರೆ ಉಂಟಾದರು ಮೊದಲಿಗೆ ಸಹಾಯ ಮಾಡಲು ಧಾವಿಸಿ ಬರುವವರು ಈ ಗಣ್ಯವ್ಯಕ್ತಿಗಳು. ಸಾವಿರಾರು ಕೋಟಿ ಆಸ್ತಿಗೆ ಒಡೆಯರಾದರು ಅವರ ಸರಳತೆ ಸಾಮಾನ್ಯ ಜನರ ಹಾಗೆ. ಇವರಿಬ್ಬರು ಮಾತನಾಡುವ ಕನ್ನಡದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಧಾಮೂರ್ತಿ ಅಮ್ಮನವರದ್ದು ಅಪ್ಪಟ ಕನ್ನಡ. ಈ ಕುಟುಂಬವೇ ಶ್ರೇಷ್ಠವಾದ ಕುಟುಂಬ ಎನ್ನಿಸಿಕೊಂಡಿದೆ.

ಸುಧಾಮೂರ್ತಿ ಅವರು ಮತ್ತು ನಾರಾಯಣ ಮೂರ್ತಿ ಅವರ ಕುಟುಂಬಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಬಂದಿದೆ. ಅದು ಅವರ ಅಳಿಯ ರಿಷಿ ಸುನಕ್ ಅವರ ಮೂಲಕ. ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಯ ಮಗಳು ಅಕ್ಷತಾ ಅವರನ್ನು ಮದುವೆ ಆಗಿರುವ ರಿಷಿ ಸುನಕ್ ಅವರು ಇಂದು ಬ್ರಿಟನ್ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಿಷಿ ಸುನಕ್ ಅವರು ಮೂಲತಃ ಭಾರತದವರು. ನಮ್ಮ ಭಾರತದ ವ್ಯಕ್ತಿ, ಕರ್ನಾಟಕದ ಅಳಿಯ ರಿಷಿ ಸುನಕ್ ಅವರು ಇಂದು ಈ ಎತ್ತರಕ್ಕೆ ಬೆಳೆದಿರುವುದು ಬಹಳ ಹೆಮ್ಮೆಯ ವಿಚಾರ. ರಿಷಿ ಸುನಕ್ ಅವರು ಕರ್ನಾಟಕದ ಹುಡುಗಿಯನ್ನು ಮದುವೆಯಾಗಿ, ಭಾರತದ ಪ್ರಜೆ ಆಗಿದ್ದು, ಅವರ ಸಂಬಂಧ ಭಾರತದ ಜೊತೆಗೆ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ, ಹಾಗೆಯೇ ರಿಷಿ ಸುನಕ್ ಅವರ ಒಟ್ಟು ಆಸ್ತಿ ಎಷ್ಟು? ಅವರ ಹಿನ್ನಲೆ ಏನು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ.. ರಿಷಿ ಅವರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಬ್ರಿಟನ್ ಪ್ರಧಾನಿಯಾಗಿ ನಮ್ಮ ದೇಶದ ಧಾರ್ಮಿಕ ಗ್ರಂಥ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ, ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಭಾರತೀಯ ಆಗಿದ್ದಾರೆ ರಿಷಿ ಸುನಕ್. ರಿಷಿ ಅವರ ತಂದೆ ತಾಯಿ ಭಾರತದವರು. ಆದರೆ 1960ರ ಸಮಯದಲ್ಲಿ ಈಸ್ಟ್ ಆಫ್ರಿಕಾ ಇಂದ ಬ್ರಿಟನ್ ಗೆ ಹೋಗಿ ಅಲ್ಲಿ ನೆಲೆಸಿದರು. ರಿಷಿ ಅವರ ತಂದೆ ತಾಯಿ ವೃತ್ತಿಯಲ್ಲಿ ಫಾರ್ಮಸಿಸ್ಟ್ ಗಳಗಿದ್ದರು. ತಾವು ಕೂಡ ವೃತ್ತಿಯಲ್ಲಿ ಹೆಸರು ಮಾಡಿದ ರಿಷಿ ಅವರು, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಯ ಮಗಳು ಅಕ್ಷತಾ ಅವರನ್ನು ಪ್ರೀತಿಸಿ ಮದುವೆಯಾದರು.

ಅಕ್ಷತಾ ಮತ್ತು ರಿಷಿ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಮಕ್ಕಳ ಹೆಸರು ಕೃಷ್ಣ ಮತ್ತು ಅನೌಷ್ಕಾ. ರಿಷಿ ಸುನಕ್ ಅವರ ಬಗ್ಗೆ ಹೇಳುವುದಾದರೆ, ಸ್ಟಾನ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ರಿಷಿ ಅವರು, ಇನ್ವೆಸ್ಟ್ಮೆಂಟ್ ಬ್ಯಾಂಕ್ ಗಳಲ್ಲಿ ಕೆಲಸ ಮಾಡಿದ್ದಾರೆ. ಬ್ರಿಟನ್ ನಲ್ಲಿ ರಿಷಿ ಸುನಕ್ ಅವರಿಗೆ ದುಬಾರಿ ಬೆಲೆಯ ಬಂಗಲೆಗಳು, ಎಸ್ಟೇಟ್ ಗಳು ಮತ್ತು ಬೇರೆ ಆಸ್ತಿಗಳು ರಿಷಿ ಅವರ ಬಳಿ ಇದೆ. ರಿಷಿ ಸುನಕ್ ಅವರ ಒಟ್ಟು ಆಸ್ತಿ ಬಗ್ಗೆ ಹೇಳುವುದಾದರೆ, ಇವರ ಒಟ್ಟು ಆಸ್ತಿ ಬರೋಬ್ಬರಿ 700 ಮಿಲಿಯನ್ ಯೂರೋಸ್ ಆಗಿದೆ, ಭಾರತದ ರೂಪಾಯಿಯ ಅಂಕಿ ಅಂಶದಲ್ಲಿ ಹೇಳುವುದಾದರೆ, ಬರೋಬ್ಬರಿ ₹5,747 ಕೋಟಿ ರೂಪಾಯಿ ಆಗಿದೆ. ಈಗ ರಿಷಿ ಸುನಕ್ ಅವರು ಬ್ರಿಟನ್ ನ ಪ್ರಧಾನಿ ಆಗಿ ಆಯ್ಕೆಯಾಗಿದ್ದಾರೆ.

Comments are closed.