Neer Dose Karnataka
Take a fresh look at your lifestyle.

Gandhada gudi review: ನಿಮ್ಮನ್ನೇ ನಂಬಿ ಬಂದಿದ್ದೇನೆ ಹೆಂಡತಿ ಮಕ್ಕಳು ಮನೆಯಲ್ಲಿದ್ದಾರೆ, ಗಂಧದಗುಡಿ ರಿವ್ಯೂ ಹೇಗಿದೆ ಗೊತ್ತಾ??

ಅಪ್ಪು ಅವರು ಬಹುದಿನಗಳ ಕನಸು ಗಂಧದಗುಡಿ ಇಂದು ತೆರೆಗೆ ಬರುತ್ತಿದೆ. ನಿನ್ನೆ ರಾಜ್ಯದ ಹಲವೆಡೆ ಪೇಯ್ಡ್ ಪ್ರೀಮಿಯರ್ ಶೋ ಮತ್ತು ಸೆಲೆಬ್ರಿಟಿ ಪ್ರೀಮಿಯರ್ ಶೋ ಸಹ ನಡೆದಿದೆ. ಗಂಧದಗುಡಿ ಮೊದಲ ರಿವ್ಯೂ ಅನ್ನು ಈಗ ನಿಮಗೆ ತಿಳಿಸುತ್ತೇವೆ. ಅಪ್ಪು ಅವರ ಸಿನಿಮಾಗಳಲ್ಲಿ ಗಂಧದಗುಡಿ ಎಲ್ಲರೂ ಸಹ, ಕರ್ನಾಟಕದ ಪ್ರತಿಯೊಬ್ಬರು ಸಹ ನೋಡಲೇಬೇಕಾದ ಒಂದು ಸಿನಿಮಾ ಆಗಿದೆ. ಇದರಲ್ಲಿ ಅಪ್ಪು ಅವರು ಬಣ್ಣ ಹಚ್ಚಿಲ್ಲ, ನಟನೆ ಮಾಡಿಲ್ಲ, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಪುನೀತ್ ಆಗಿ ಕಾಣಿಸಿಕೊಂಡಿದ್ದಾರೆ. ಗಂಧದಗುಡಿಯಲ್ಲಿ ಅಪ್ಪು ಅವರು ಹೇಳುವ ಕೆಲವು ಮಾತುಗಳು ನಮ್ಮ ಜೀವನಕ್ಕೆ ಪಾಠ ಎಂದು ಹೇಳಬಹುದು.

ಗಂಧದಗುಡಿ ಶುರುವಾಗುವುದು, ಬೆಟ್ಟದ ಹೂವು ಸಿನಿಮಾದ ದೃಷ್ಯದ ಮೂಲಕ, ನಂತರ ಅಶ್ವಿನಿ ಅಪ್ಪು ಅವರ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತಾರೆ, ಅಶ್ವಿನಿ ಅವರ ಮಾತು ಕೇಳುವಾಗ, ನಿಮ್ಮೆಲ್ಲರ ಕಣ್ಣಂಚಲ್ಲಿ ನೀರು ಬರುವುದು ಖಂಡಿತ. ನಂತರ ನಿರ್ದೇಶಕ ಅಮೋಘವರ್ಷ ಅವರು ಮಾತನಾಡುವ ಮೂಲಕ, ಅಪ್ಪು ಅವರೊಡನೆ ಜರ್ನಿ ಶುರುವಾಗುತ್ತದೆ. ಈ ಜರ್ನಿಯಲ್ಲಿ ಅಪ್ಪು ಅವರ ಆಸೆಗಳು, ಭಯ ಎಲ್ಲದರ ಬಗ್ಗೆ ನಾವು ತಿಳಿದುಕೊಳ್ಳಬಹುದು. ಅಪ್ಪು ಅವರು ಪುಟ್ಟ ಮಗುವಿನಂತೆ ಕಾಡಿನ ಸೌಂದರ್ಯವನ್ನು ಎಂಜಾಯ್ ಮಾಡುವುದನ್ನು ನೋಡಿದರೆ, ಅಪ್ಪು ಇರಬೇಕಿತ್ತು ಕಣ್ಣುಗಳು ಒದ್ದೆಯಾಗುತ್ತದೆ. ಅಮೋಘವರ್ಷ ಅವರೊಡನೆ ಅಪ್ಪು ಅವರು,ನನಗೇ ಆನೆ ಮತ್ತು ಹುಲಿ ನೋಡಬೇಕು ಅಂತ ತುಂಬಾ ಆಸೆ ಬೇಗ ತೋರಿಸಿ ಎಂದು ಪುಟ್ಟ ಮಗುವಿನ ಹಾಗೆ ಕೇಳುತ್ತಾರೆ ಅಪ್ಪು.

ಆನೆಯನ್ನು ನೋಡಿದ ನಂತರ ಅಪ್ಪು ಅವರು, ಭಕ್ತ ಪ್ರಹ್ಲಾದ ಚಿತ್ರೀಕರಣ ಸಮಯದ ಘಟನೆ ಹೇಳುತ್ತಾರ್ರ್. ಇನ್ನು ಅಪ್ಪು ಅವರಿಗೆ ಹಾವುಗಳು ಅಂದ್ರೆ ತುಂಬಾ ಭಯ. ಹಾವಿನ ಶಬ್ಧ ಕೇಳಿ ಅಪ್ಪು ಅವರು, “ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದಾರೆ, ನಿಮ್ಮನ್ನೇ ನಂಬಿ ಬಂದಿದ್ದೀನಿ.. ಸೇಫ್ ಆಗಿರುತ್ತಾ..” ಎನ್ನುತ್ತಾರೆ. ಆ ಸರಳತೆ, ವ್ಯಕ್ತಿತ್ವ, ಅಪ್ಪು ಅವರು ಹಳ್ಳಿಯ ಜನರ ಜೊತೆಗೆ ಬೆರಿಯುವ ರೀತಿ, ಪ್ರಕೃತಿಯ ಸೊಬಗನ್ನು ಅನುಭವಿಸಿ ಸಂತೋಷ ಪಡುವುದನ್ನು ಕಣ್ತುಂಬಿಕೊಳ್ಳಲು, ಗಂಧದಗುಡಿಯನ್ನು ಎಲ್ಲರೂ ನೋಡಲೇಬೇಕು. ಅಪ್ಪು ಅವರು ಗಂಧದಗುಡಿ ಮೂಲಕ ನೀಡಿರುವ ಸಂದೇಶ ಇಡೀ ಮನುಕುಲ ಅರ್ಥಮಾಡಿಕೊಳ್ಳಬೇಕಾದ ವಿಷಯಗಳು. ನೀವೆಲ್ಲರೂ ತಪ್ಪದೆ, ಗಂಧದಗುಡಿ ಸಿನಿಮಾವನ್ನು ಮನೆಮಂದಿಯೆಲ್ಲಾ ತಪ್ಪದೇ ನೋಡಿ..

Comments are closed.