Neer Dose Karnataka
Take a fresh look at your lifestyle.

ಭಾಗ್ಯಲಕ್ಷ್ಮಿ ತಾಂಡವ್ ಪಾತ್ರದಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಪತ್ನಿ ಕೂಡ ಕನ್ನಡದ ಟಾಪ್ ನಟಿ. ಯಾರು ಗೊತ್ತೇ??

ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಧಾರವಾಹಿ ಭಾಗ್ಯಲಕ್ಷ್ಮಿ. ಈ ಧಾರವಾಹಿ ಮೂಲಕ ನಟಿ ಮತ್ತು ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸುಶ್ಮಾ ಅವರು ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಸುಶ್ಮಾ ಅವರನ್ನು ಭಾಗ್ಯ ಪಾತ್ರ, ತಂಗಿಯನ್ನು ತುಂಬಾ ಇಷ್ಟಪಡುವ, ಗಂಡನನ್ನು ತುಂಬಾ ಪ್ರೀತಿಸುವ, ಗಂಡನಿಗಾಗಿ ಏನನ್ನಾದರೂ ಮಾಡುವ ಪಾತ್ರ ಇದು. ಭಾಗ್ಯಾಳ ಗಂಡ ತಾಂಡವ್, ಯಾವಾಗಲೂ ಚುಚ್ಚುಮಾತುಗಳಿಂದ ಹೆಂಡತಿಯ ಮನಸ್ಸಿಗೆ ನೋವು ನೀಡುವ ಪಾತ್ರ ಇದು.

ತಾಂಡವ್ ಪಾತ್ರಕ್ಕೆ ಹೆಂಡತಿ ಭಾಗ್ಯಳನ್ನು ಕಂಡರೆ ಇಷ್ಟವಿಲ್ಲ. ಪ್ರತಿವಿಷಯದಲ್ಲೂ ಕೊಂಕು ಮಾತುಗಳನ್ನು ಆಡುತ್ತಾ, ತನ್ನ ಹೆಂಡತಿಗೆ ಬೇಸರ ನೋವು ಉಂಟು ಮಾಡುತ್ತಾನೇ ತಾಂಡವ್. ಧಾರವಾಹಿ ನೋಡಲು ಶುರು ಮಾಡಿರುವ ಹಲವು ಜನರು ತಾಂಡವ್ ಪಾತ್ರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ತಾಂಡವ್ ಪಾತ್ರದಲ್ಲಿ ನಟಿಸಿರುವ ಕಲಾವಿದನ ಹೆಸರು ಸುದರ್ಶನ್ ರಂಗಪ್ರಸಾದ್. ತಾಂಡವ್ ಪಾತ್ರದಲ್ಲಿ ಇಂತಹ ಗಂಡ ಸಿಗಲೇಬಾರದು ಎನ್ನುವ ಹಾಗೆ ನಟಿಸಿರುವ ಸುದರ್ಶನ್ ಅವರು ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿದ್ದಾರೆ.

ಸುಧರ್ಶನ್ ಅವರು ಬೆಂಗಳೂರಿನವರೆ, ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಸುದರ್ಶನ್ ಅವರು ಭಾಗ್ಯಲಕ್ಷ್ಮಿ ಧಾರವಾಹಿ ಪಾತ್ರದಿಂದ ನಿಜ ಜೀವನದಲ್ಲಿ, ಹಲವು ಜನರು ಅವರಿಗೆ ನೇರವಾಗಿ ಬೈದಿದ್ದರಂತೆ, ಆ ಅನುಭವ ಕೂಡ ಆಗಿದೆ ಎಂದು ಹೇಳುತ್ತಾರೆ ಸುದರ್ಶನ್. ಇವರು ಮಾತ್ರವಲ್ಲದೆ ಸುದರ್ಶನ್ ಅವರ ಪತ್ನಿ ಸಹ ಬಹಳ ಫೇಮಸ್, ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಸಂಗೀತ ಭಟ್ ಅವರು ಇವರ ಪತ್ನಿ. ಸಂಗೀತ ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ, ಹೆಂಡತಿಯ ಜೊತೆಗೆ ಸುಂದರ ಸಂಸಾರ ನಡೆಸುತ್ತಿರುವ ಸುಧರ್ಶನ್ ಅವರು ಭಾಗ್ಯಲಕ್ಷ್ಮಿ ಧಾರವಾಹಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ.

Comments are closed.