Neer Dose Karnataka
Take a fresh look at your lifestyle.

ತಂಡದಲ್ಲಿ ಈ ಬದಲಾವಣೆ ಮಾಡಿದರೆ ಮಾತ್ರ ಗೆಲ್ಲಲು ಸಾಧ್ಯ ಎಂದ ಹರ್ಭಜನ್. ಏನು ಬದಲಾವಣೆ ಮಾಡಬೇಕಂತೆ ಗೊತ್ತೇ??

ಟಿ20 ವಿಶ್ವಕಪ್ ನಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದುಕೊಂಡ ಭಾರತ ತಂಡ ಮೂರನೇ ಪಂದ್ಯದಲ್ಲಿ ಸೋಲನ್ನು ಕಂಡಿತು. ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ನಿರೀಕ್ಷೆಯ ಮಟ್ಟದ ಬ್ಯಾಟಿಂಗ್ ಮಾಡಲಿಲ್ಲ, ಮೊದಲ ಇನ್ನಿಂಗ್ಸ್ ನ ಮೊದಲ 6 ಓವರ್ ಗಳಲ್ಲಿ ಸೌತ್ ಆಫ್ರಿಕಾದ ವೇಗಿ ಬೌಲರ್ ಗಳು ಭಾರತ ತಂಡದ ಅಗ್ರಕ್ರಮಾಂಕದ ಐವರು ಬ್ಯಾಟ್ಸ್ಮನ್ ಗಳ ವಿಕೆಟ್ಸ್ ಪಡೆದುಕೊಂಡಿದ್ದರು. ಕೊನೆಗೆ ಸೂರ್ಯಕುಮಾರ್ ಯಾದವ್ ಅವರ ಅದ್ಬುತ ಬ್ಯಾಟಿಂಗ್ ನಲ್ಲಿ 40 ಎಸೆತಕ್ಕೆ 68 ರನ್ ಗಳಿಸಿ, ಭಾರತದ ಸ್ಕೋರ್ 133ಬರುವ ಹಾಗೆ ಮಾಡಿದರು. ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ನಮ್ಮ ಬೌಲರ್ ಗಳು ಸೌತ್ ಆಫ್ರಿಕಾ ತಂಡದ ಮೂರು ವಿಕೆಟ್ಸ್ ಪಡೆದರು.

ಆದರೆ ನಂತರ ಬಂದ ಡೇವಿಡ್ ಮಿಲ್ಲರ್ ಮತ್ತು ಈಡನ್ ಮಾರ್ಕ್ರಮ್ ಇಬ್ಬರು ಅರ್ಧಶತಕ ಸಿಡಿಸಿ ಸೌತ್ ಆಫ್ರಿಕಾ ತಂಡ ಗೆಲ್ಲುವ ಹಾಗೆ ಮಾಡಿದರು. ಈ ಪಂದ್ಯದ ಬಳಿಕ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ ಅವರು ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈ ಬದಲಾವಣೆಗಳನ್ನು ಮಾಡಿಕೊಂಡರೆ ವಿಶ್ವಕಪ್ ಗೆಲ್ಲಲು ಸಾಧ್ಯ ಎಂದಿದ್ದಾರೆ. ಇವರು ಹೇಳಿರುವ ಬದಲಾವಣೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. “ಭಾರತ ತಂಡ ಈಗ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೆ.ಎಲ್.ರಾಹುಲ್ ಅವರು ಶ್ರೇಷ್ಠ ಆಟಗಾರ, ಮ್ಯಾಚ್ ವಿನ್ನರ್ ಎಂದು ನಮಗೆ ಗೊತ್ತಿದೆ. ಆದರೆ ಅವರು ಈ ಫಾರ್ಮ್ ನಲ್ಲಿ ಕಷ್ಟಪಡುತ್ತಿರುವಾಗ ರಿಷಬ್ ಪಂತ್ ಅವರನ್ನು ಓಪನರ್ ಆಗಿ ತೆಗೆದುಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ.

ಕಾರ್ತಿಕ್ ಅವರಿಗೆ ಗಾಯವಾಗಿರುವ ಹಾಗೆ ಕಾಣುತ್ತದೆ, ಅವರ ಆರೋಗ್ಯದ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅವರು ಆಡುವುದಿಲ್ಲ ಎನ್ನುವುದಾದರೆ, ರೋಹಿತ್ ಶರ್ಮಾ ಅವರೊಡನೆ ರಿಷಬ್ ಪಂತ್ ಓಪನರ್ ಆದರೆ, ಬಲಗೈ, ಎಡಗೈ ಸಂಯೋಜನೆ ಸರಿ ಇರುತ್ತದೆ. ಇನ್ನು ಕಾರ್ತಿಕ್ ಅವರ ಜಾಗಕ್ಕೆ, ದೀಪಕ್ ಹೂಡಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು..” ಎಂದು ಅಭಿಪ್ರಾಯ ಪಟ್ಟಿದ್ದಾರೆ ಹರ್ಭಜನ್ ಸಿಂಗ್. ಮತ್ತೊಂದು ಸಲಹೆಯನ್ನು ಸಹ ನೀಡಿ, “ಅಶ್ವಿನ್ ಅವರ ಬದಲಿಗೆ ಚಾಹಲ್ ಅವರನ್ನು ಕರೆತರುವುದು ಒಳ್ಳೆಯದು ಎಂದು ನನಗೆ ಅನ್ನಿಸುತ್ತದೆ. ಚಾಹಲ್ ಅವರು ವಿಕೆಟ್ಸ್ ತೆಗೆಯುತ್ತಾರೆ. ಚಾಹಲ್ ಮ್ಯಾಚ್ ವಿನ್ನರ್, ಮತ್ತು ಪ್ರಪಂಚದ ಅತ್ಯುತ್ತಮ ಟಿ20 ಬೌಲರ್ ಗಳಲ್ಲಿ ಒಬ್ಬರು..” ಎಂದು ಹೇಳಿದ್ದು, ಈ ಮೂಲಕ ಭಾರತ ತಂಡದಲ್ಲಿ ಮಾಡಬಹುದಾದ ಪ್ರಮುಖ ಬದಲಾವಣೆಯನ್ನು ಹೇಳಿದ್ದಾರೆ ಹರ್ಭಜನ್ ಸಿಂಗ್.

Comments are closed.