Neer Dose Karnataka
Take a fresh look at your lifestyle.

ಅಸಲಿಗೆ ವೈಷ್ಣವಿ ಗೌಡ ವಿಲ್ಲನ್ ಅಲ್ಲವೇ ಅಲ್ಲ, ಮತ್ಯಾರು ಗೊತ್ತೇ?? ಧಾರಾವಾಹಿಗೆ ಬಂದಿರುವುದು ಯಾಕೆ ಗೊತ್ತೇ??

234

ಕಲರ್ಸ್ ಕನ್ನಡ ವಾಹಿನಿಯ ಲಕ್ಷಣ ಧಾರಾವಾಹಿಗೆ ಅಗ್ನಿಸಾಕ್ಷಿ ನಟಿ ವೈಷ್ಣವಿ ಅವರು ಬಂದ ನಂತರ ಧಾರಾವಾಹಿಗೆ ಹೊಸ ಚಾರ್ಮ್ ಬಂದಿದೆ ಎಂದರೆ ತಪ್ಪಾಗವುದಿಲ್ಲ. ಅಗ್ನಿಸಾಕ್ಷಿ ನಂತರ ವೈಷ್ಣವಿ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ, ಲಕ್ಷಣ ಧಾರವಾಹಿ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಬರುತ್ತಿದ್ದ ಹಾಗೆಯೇ, ಇನ್ಮೇಲೆ ಭೂಪತಿ ಹೆಂಡತಿ ನಾನು, ನಿನ್ನ ಹೆಂಡತಿಯ ಸ್ಥಾನ ಇಲ್ಲಿಗೆ ಮುಗೀತು ಎಂದು ಹೇಳುವ ಮೂಲಕ ನಕ್ಷತ್ರಾಗೆ ಬಿಗ್ ಶಾಕ್ ಕೊಟ್ಟಿದ್ದರು. ವೈಷ್ಣವಿ ಅವರ ಈ ಎಂಟ್ರಿಗೆ ಇಡೀ ಮನೆ ಮಾತ್ರವಲ್ಲದೆ, ಕಿರುತೆರೆ ವೀಕ್ಷಕರು ಸಹ ಶಾಕ್ ಆಗಿದ್ದರು. ವೈಷ್ಣವಿ ಅವರು ವಿಲ್ಲನ್ ರೋಲ್ ನಲ್ಲಿ ನಟಿಸಿದ್ದಾರಾ ಎನ್ನುವ ಅಭಿಪ್ರಾಯ ಇತ್ತು.

ಜೊತೆಗೆ, ಭಾರ್ಗವಿ ಏನಾದರೂ ಕಳಿಸಿರಬಹುದಾ ಎನ್ನುವ ಚರ್ಚೆಗಳು ಶುರುವಾಗಿದ್ದವು, ಆದರೆ ಅಸಲಿ ವಿಷಯವೇ ಬೇರೆ ಆಗಿದೆ. ವೈಷ್ಣವಿ ಅವರು ವಿಲ್ಲನ್ ಅಲ್ಲ, ಭೂಪತಿ ಅವರ ಬೆಸ್ಟ್ ಫ್ರೆಂಡ್ ಆಗಿದ್ದು, ಇಬ್ಬರಿಗೂ ಬಹಳ ವರ್ಷಗಳ ಪರಿಚಯ ಇದೆ. ಮನೆಯವರ ಎದುರು ನಕ್ಷತ್ರ ಜೊತೆಗೆ ಮತ್ತು ಭೂಪತಿ ತಾಯಿ ಜೊತೆಗೆ ನಡೆದ ಸಂಭಾಷಣೆ ನಂತರ, ಭೂಪತಿ ಮತ್ತು ವೈಷ್ಣವಿ ಮಾತನಾಡುವಾಗ, ಭೂಪತಿಗು ವೈಷ್ಣವಿ ಬಂದು ಶಾಕ್ ಕೊಡುವ ವಿಷಯ ಗೊತ್ತಿರಲಿಲ್ಲ. ಫ್ರೆಂಡ್ ಆಗಿದ್ದ ವೈಷ್ಣವಿ ಪ್ರಾಂಕ್ ಮಾಡಲು ಭೂಪತಿ ಮನೆಗೆ ಬಂದ ಹಾಗಿದೆ.

ಆದರೆ ನಕ್ಷತ್ರ ಎದುರು ಭೂಪತಿ ತನ್ನ ಗಂಡ ಎಂದು, ನಕ್ಷತ್ರಾಗೆ ಸೀರಿಯಸ್ ಆಗಿ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ವೈಷ್ಣವಿ. ಇದು ನಡೆಯುತ್ತಿರುವುದು ತಮಾಷೆಗೆ ಆದರೂ ಕೂಡ, ಭೂಪತಿ ಫಜೀತಿ ಅನುಭವಿಸುತ್ತಿರುವುದು, ನಕ್ಷತ್ರ ಕೋಪ ಮಾಡಿಕೊಳ್ಳುತ್ತಿರುವುದನ್ನು ನೋಡಲು ವೀಕ್ಷಕರಿಗೆ ಬಹಳ ಮಜಾ ಕೊಡುತ್ತಿದೆ ಎಂದು ಹೇಳಬಹುದು. ಧಾರವಾಹಿಯಲ್ಲಿ ಹೊಸದೊಂದು ಟ್ವಿಸ್ಟ್ ಕೊಟ್ಟು ಮನರಂಜನೆ ನೀಡುವ ಸಲುವಾಗಿ, ವೈಷ್ಣವಿ ಅವರನ್ನು ಕರೆಸಲಾಗಿದೆ, ಎಂದು ತಿಳಿದುಬಂದಿದೆ. ವೈಷ್ಣವಿ ಅವರಿಗು ಇದೊಂದು ಹೊಸ ಪ್ರಯತ್ನ ಎಂದು ಹೇಳಬಹುದು.

Leave A Reply

Your email address will not be published.