ದಿಡೀರ್ ಎಂದು ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಗೆ ಕಾಲ್ ಮಾಡಿದ ಎನ್ಟಿಆರ್, ಹೇಳಿದ್ದೇನು ಗೊತ್ತೇ?? ಅದೃಷ್ಟ ಆರಂಭವೇ??
ಕಾಂತಾರ ಸಿನಿಮಾದ ಯಶಸ್ಸು, ಕ್ರೇಜ್ ಇಂದಿಗೂ ಸ್ವಲ್ಪವು ಕಡಿಮೆಯಾಗಿಲ್ಲ. ಸಿನಿಮಾ ಬಿಡುಗಡೆಯಾಗಿ 6 ವಾರ ಕಳೆದಿದ್ದರು ಸಹ, ಸಿನಿಮಾ ಇಂದಿಗೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಅಥವಾ ಕರ್ನಾಟಕ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ, ಬೇರೆ ಊರುಗಳಲ್ಲಿ ಎಲ್ಲಾ ಕಡೆಗಳಲ್ಲಿ ಕಾಂತಾರ ಹವಾ ಕಡಿಮೆಯಾಗಿಲ್ಲ. ಈಗಾಗಲೇ 300 ಕೋಟಿ ಗಳಿಸಿ ಮುನ್ನುತ್ತಿದೆ ಕಾಂತಾರ, ಶೀಘ್ರದಲ್ಲೇ ಕಾಂತಾರ ಸಿನಿಮಾ 250 ಕೋಟಿ ಕ್ಲಬ್ ಸೇರುವುದು ಖಚಿತ.
ಕಾಂತಾರ ಸಿನಿಮಾವನ್ನು ದೇಶಾದ್ಯಂತ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರರಂಗದ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾ ನೋಡಿ, ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದರು. ತಮಿಳು ನಟ ಕಾರ್ತಿ ಅವರು ಕಾಂತಾರ ನೋಡಿ ರಿಷಬ್ ಅವರನ್ನು ಕರೆಸಿ ಅಭಿನಂದಿಸಿದರು, ಇನ್ನು ತೆಲುಗಿನ ಖ್ಯಾತ ನಟ ಪ್ರಭಾಸ್ ಅವರು ಎರಡು ಸಾರಿ ಸಿನಿಮಾ ನೋಡಿ ಅಭಿನಂದಿಸಿದರು, ಇದೀಗ ತೆಲುಗಿನ ಮತ್ತೊಬ್ಬ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಕಾಂತಾರ ನೋಡಿ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿದ್ದಾರೆ.

ಈ ವಿಷಯವನ್ನು ರಿಷಬ್ ಶೆಟ್ಟಿ ಅವರು ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ, “ಜ್ಯೂನಿಯರ್ ಎನ್ಟಿಆರ್ ಅವರ ದೊಡ್ಡ ಅಭಿಮಾನಿ ನಾನು, ಸಿನಿಮಾ ನೋಡಿ ತಾರಕ್ ಅವರು ಕರೆಮಾಡಿ, ಅಭಿನಂದನೆ ಸಲ್ಲಿಸಿದರು ಅದರಿಂದ ತುಂಬಾ ಸಂತೋಷ ಆಯಿತು. ಸಧ್ಯಕ್ಕೆ ಅವರ ಜೊತೆಗೆ ಸಿನಿಮಾ ಮಾಡುವ ಯೋಚನೆ ಇಲ್ಲ. ನಾನು ಮೊದಲು ಕಥೆ, ಕಾನ್ಸೆಪ್ಟ್, ಎಲ್ಲವನ್ನು ಸಿದ್ಧಪಡಿಸಿ ನಂತರ ಯಾವ ನಟ ನಟಿಯರು ನಟಿಸಬೇಕು ಎಂದು ಆಯ್ಕೆ ಮಾಡುತ್ತೇನೆ. ಮೊದಲೇ ನಟ ನಟಿಯರನ್ನು ಆಯ್ಕೆ ಮಾಡಿ, ನಂತರ ಅವರಿಗಾಗಿ ಕಥೆ ಮಾಡೋಕೆ ನನಗೆ ಗೊತ್ತಿಲ್ಲ. ಸಧ್ಯಕ್ಕೆ ಎರಡು ತಿಂಗಳು ಬ್ರೇಕ್ ತೆಗೆದುಕೊಳ್ಳುತ್ತೇನೆ, ಅದಾದ ಮೇಲೆ ಮುಂದಿನ ಸಿನಿಮಾ ಬಗ್ಗೆ ಯೋಚನೆ ಮಾಡುತ್ತೇನೆ..” ಎಂದಿದ್ದಾರೆ ರಿಷಬ್ ಶೆಟ್ಟಿ.