ಅಪ್ಪು ಜೊತೆ ನಟಿಸಿದ್ದ ಬಿಂದಾಸ್ ನಟಿ ಹನ್ಸಿಕಾ ಮದುವೆಯಾಗುತ್ತಿರುವ ಹುಡುಗ ಆಸ್ತಿ ಕೇಳಿದರೆ, ಒಮ್ಮೆಲೇ ಶೇಕ್ ಆಗ್ತೀರಾ. ಎಷ್ಟು ಕೋಟಿ ಗೊತ್ತೇ?
ನಟಿ ಹನ್ಸಿಕಾ ಉತ್ತರ ಭಾರತದವರಾದರು, ಆದರೆ ಇವರ ಕೆರಿಯರ್ ಗೆ ಸಕ್ಸಸ್ ಸಿಕ್ಕಿದ್ದು ದಕ್ಷಿಣ ಭಾರತದಲ್ಲಿ. ಹನ್ಸಿಕಾ ಅವರು ಮೊದಲಿಗೆ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ತೆಲುಗು ಚಿತ್ರರಂಗಕ್ಕೆ ದೇಶಮುದುರು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಆದರೆ ಹನ್ಸಿಕಾ ಅವರಿಗೆ ಹೆಸರು ಬಂದಿದ್ದು, ತಮಿಳು ಚಿತ್ರರಂಗದಲ್ಲಿ. ತಮಿಳಿನಲ್ಲಿ ಸ್ಟಾರ್ ನಟರೊಡನೆ ತೆರೆಹಂಚಿಕೊಳ್ಳುತ್ತಾ, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ, ಹನ್ಸಿಕಾ ಅವರು ಸ್ಟಾರ್ ನಟಿಯ ಪಟ್ಟಕ್ಕೆ ಏರಿದ್ದರು. ತಮಿಳಿನಲ್ಲಿ ಹೆಚ್ಚು ಅವಕಾಶ ಸಿಕ್ಕ ಕಾರಣ, ಹನ್ಸಿಕಾ ಅವರು ಅದಾದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ.

ತಮಿಳು ಚಿತ್ರರಂಗದಲ್ಲೇ ಸೆಟ್ಲ್ ಆದರು ಹನ್ಸಿಕಾ. ಇದೀಗ ಹನ್ಸಿಕಾ ಅವರು ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಮುಂಬೈ ಮೂಲದ ಉದ್ಯಮಿ ಸೊಹಿಲ್ ಖತೀರಿಯಾ ಅವರೊಡನೆ ಮದುವೆ ಆಗಲು ರೆಡಿಯಾಗಿದ್ದಾರೆ ಹನ್ಸಿಕಾ. ಇತ್ತೀಚೆಗೆ ಹನ್ಸಿಕಾ ಅವರು ತಾವು ಮದುವೆಯಾಗುವ ಹುಡುಗನನ್ನು ಎಲ್ಲರಿಗೂ ಪರಿಚಯ ಮಾಡಿದರು. ಈಗ ಹುಡುಗ ಯಾರು ಎನ್ನುವ ಪ್ರಶ್ನೆ ಎಲ್ಲೆಡೆ ಶುರುವಾಗಿದೆ. ಹನ್ಸಿಕಾ ಮದುವೆ ಆಗುತ್ತಿರುವ ಹುಡುಗ ಯಾರು ಎಂದು ಹುಡುಕಾಟ ನಡೆಸುತ್ತಿರುವವರಿಗೆ ಒಂದು ಶಾಕಿಂಗ್ ವಿಷಯ ತಿಳಿದುಬಂದಿದೆ. ಅದೇನೆಂದರೆ, ಸೊಹೆಲ್ ಅವರು ಹನ್ಸಿಕಾ ಅವರ ಬೆಸ್ಟ್ ಫ್ರೆಂಡ್ ರಿಂಕು ಅವರ ಮಾಜಿ ಪತಿ. ಸೊಹೆಲ್ ಮತ್ತು ರಿಂಕಿ ಅವರ ಮದುವೆಯನ್ನು ತಾವೇ ಮುಂದೆ ನಿಂತು ನಡೆಸಿದ್ದರು ಹನ್ಸಿಕಾ.
ಆದರೆ, ಅವರಿಬ್ಬರು ಭಿನ್ನಾಭಿಪ್ರಾಯಗಳಿಂದ ದೂರವಾದರು. ಅಂದಿನಿಂದ ಸೊಹೆಲ್ ಹನ್ಸಿಕಾ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಮತ್ತು ಈಗ ಅವರು ಮದುವೆಗೆ ಸಿದ್ಧರಾಗಿದ್ದಾರೆ. ಡಿಸೆಂಬರ್ 4 ರಂದು ಈ ಜೋಡಿಯ ಮದುವೆ ರಾಜಸ್ಥಾನದ ಕೋಟೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇನ್ನು ಸೊಹೆಲ್ ಅವರ ಆಸ್ತಿ ಬಗ್ಗೆ ಚರ್ಚೆಯಾಗುತ್ತಿದ್ದು, ಅವರ ಆಸ್ತಿ ಬಗ್ಗೆ ತಿಳಿದವರು ಆಶ್ಚರ್ಯ ಪಡುವುದು ಖಂಡಿತ. ಸೊಹೆಲ್ ಮುಂಬೈನಉನ್ನತ ಉದ್ಯಮಿ. ಯಾವುದೇ ಬ್ಯುಸಿನೆಸ್ ಅನ್ನು ಭಾರತದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಇರುವ ವ್ಯಕ್ತಿ. ಸೊಹೆಲ್ ಅವರು ಈಗಾಗಲೇ ಅನೇಕ ಬ್ಯುಸಿನೆಸ್ ಹೊಂದಿದ್ದು. ಕೋಟಿಗಟ್ಟಲೆ ಆಸ್ತಿಯ ಏಕೈಕ ವಾರಸುದಾರ ಆಗಿದ್ದಾರೆ ಸೊಹೆಲ್.